ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರ

4 years ago

ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರ
ಮಾಜಿ ಪ್ರಧಾನಿ ಇಂದಿರಾಗಾಂಧಿ ಸ್ಮರಣೆಯಲ್ಲಿ ಜನರ ಆರೋಗ್ಯ ರಕ್ಷಣೆ
ಇಂದಿರಾ ಮೊಬೈಲ್ ಕ್ಲಿನಿಕ್ ಆರಂಭ
ಬೆಂಗಳೂರು: ಮಹಾಲಕ್ಷ್ಮೀಪುರಂ ವಾರ್ಡ್ ಬಯಲು ರಂಗ ಮಂದಿರದಲ್ಲಿ ಸ್ಪೂರ್ತಿ ಯುವಕರ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಕ್ಕರೆ ಖಾಯಿಲೆ, ಬಿ.ಪಿ ಮತ್ತು ಜನರಲ್ ಚೆಕ್ ಅಪ್ ಮತ್ತು ದೃಷ್ಟಿದೋಷ ಇರುವವರಿಗೆ ಕಣ್ಣಿನ ತಪಾಸಣೆ ಮತ್ತು ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ ಮುಖ್ಯ. ರಾಜಕಾರಣಿಗಳು ಭರವಸೆ ನೀಡುತ್ತಾರೆ. ಆದರೆ ಜನಜೀವನ ಸ್ಥಿತಿ ಬದಲಾಗಿಲ್ಲ. ಕೊರೋನ ಸಂಕಷ್ಟಗಳ ಸಮಯವನ್ನು ಜನ ಇನ್ನೂ ಅನುಭವಿಸುತ್ತಿದ್ದಾರೆ ಎಂದರು.
ಬಡವರು, ಮಧ್ಯಮವರ್ಗದವರಿಗೆ ವೈದ್ಯಕೀಯ ತಪಾಸಣೆ ಮತ್ತು ವೆಚ್ಚ ಮಾಡಲು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಬಡವರ ಕಣ್ಣಿರಿಗೆ ಆಸರೆಯಾಗಬೇಕು ಎಂದು ಉಚಿತವಾಗಿ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ದೇಶದಲ್ಲಿ 10 ಕೋಟಿ ಜನ ಸಮರ್ಪಕ ವೈದ್ಯಕೀಯ ಚಿಕಿತ್ಯೆ ಲಭಿಸದೆ ಮೃತ ಪಡುತ್ತಿದ್ದಾರೆ ಎಂದರು.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹೆಸರಿನಲ್ಲಿ ಇಂದಿರಾ ಮೊಬೈಲ್ ಕ್ಲಿನಿಕ್ ಆರಂಭಿಸಲಾಗುವುದು. ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಮುಖ್ಯ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳು ಕೊಡುಗೆ ನೀಡಲಿ ಎಂದು ಹೇಳಿದರು.
ಎಮ್.ಶಿವರಾಜು ಮಾತನಾಡಿ, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ವಾರ್ಡ್ ಗಳಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು. ಕಾಂಗ್ರೆಸ್ ಪಕ್ಷ ಬಡವರ, ದೀನದಲಿತರ ಪರ ಇರುವ ಪಕ್ಷ. ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ರೋಗ ಮುಕ್ತ ಸಮಾಜ ನಿರ್ಮಾಣದ ಗುರಿಯಾಗಬೇಕು ಎಂದರು.
ಎಸ್.ಕೇಶವಮೂರ್ತಿ ಮಾತನಾಡಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿಯವರ ಸಹಕಾರ, ಮಾರ್ಗದರ್ಶನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಮಹಾಲಕ್ಷ್ಮೀಪುರಂ ವಾರ್ಡ್ ನಲ್ಲಿ ಮಧ್ಯಮ ವರ್ಗದವರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ. ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ದತಿ, ವಯೋಸಹಜ ಖಾಯಿಲೆಯಿಂದ ಬಳಲುತ್ತಿರುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆದರೆ ಅವರು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಅವರಿಗೆ ತಪಾಸಣೆ ಮಾಡಿ ಉಚಿತವಾಗಿ ಔಷಧಿ ವಿತರಿಸಲಾಗುತ್ತಿದೆ ಎಂದರು.
ಜನರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಬೇಕು ಪ್ರತಿದಿನ ಯೋಗ, ವ್ಯಾಯಾಮ ಮತ್ತು ಆಧ್ಯಾತ್ಮ ಚಿಂತನೆಗಳನ್ನು ಆಳವಡಿಸಿಕೊಳ್ಳಬೇಕು. ಮಹಾಲಕ್ಷ್ಮೀಪುರಂ ವಾರ್ಡ್ ನಲ್ಲಿ ಜನರ ಆರೋಗ್ಯಕ್ಕೆ ಪರಿಸರಕ್ಕೆ ಆದ್ಯತೆ ನೀಡಿ ಪಾರ್ಕ್ ಗಳ ನಿರ್ಮಾಣ ಮತ್ತು ಬಯಲು ವ್ಯಾಯಾಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ಸಾವಿರಾರು ಜನರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡರು. ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹೆಲ್ತ್ ಕೇರ್, ಬಿ.ಬಿ.ಎಂ.ಪಿ. ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಭಾಗವಹಿಸಿದ್ದರು.
ಮಹಾಲಕ್ಷ್ಮೀಪುರಂ ವಾರ್ಡ್ ಮಾಜಿ ಬಿ.ಬಿ.ಎಂ.ಪಿ. ಸದಸ್ಯ ಎಸ್.ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧ್ರೀಂದ್ರ, ಪರಿಸರ ರಾಮಕೃಷ್ಣ ಮೊದಲಾದವರು ಹಾಜರಿದ್ದರು.

Leave a Reply