ಚಿತ್ರದುರ್ಗ: ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಜಾತಿ,ಧರ್ಮ ಮೀರಿ ನಿಂತ ನಾಯಕರಾಗಿದ್ದರು ಎಂದು ಡಾ.ನಟರಾಜ್ ಹೇಳಿದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ನಗರ ಸಮೀಪದ ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ,ಧಮ್ಮ ಸಾಂಸ್ಕೃತಿಕ ಕೇಂದ್ರ ಮತ್ತು ಶಾಂತಿ ಮತ್ತು ಸೌಹಾರ್ದ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಡಾ.ಬಿ.ಆರ್.ಅಂಬೇಡ್ಕರ್ ರವರ 134 ನೇಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರ್ ರವರು ಆರ್ಥಿಕ,ಸಾಮಾಜಿಕ ಮತ್ತು ರಾಜಕೀಯ ಚಿಂತಕರಾಗಿದ್ದರು. ದಲಿತ, ಶೋಷಿತ, ಹಿಂದುಳಿದ ಮತ್ತು ಮಹಿಳೆಯರ ಪರವಾದ ನಿಲುವು ಹೊಂದಿದ್ದ ಬಾಬಾಸಾಹೇಬ್ ರು ಸಾಮಾಜಿಕವಾಗಿ ಸಮಾನತೆಯನ್ನು ಬಯಸಿದವರು ಹಾಗೂ ಶಿಕ್ಷಣದ ಹಕ್ಕಿಗಾಗಿ ಹೋರಾಟ ನಡೆಸಿದವರಾಗಿದ್ದರು ಎಂದರು.
ಅಮೇರಿಕಾ ವಿಶ್ವವಿದ್ಯಾಲಯ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದುಕೊಂಡಿದ್ದ ಬಾಬಾಸಾಹೇಬ್ ಅವರು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಘನತೆಯನ್ನು ಎತ್ತಿಹಿಡಿದ ವ್ಯಕ್ತಿತ್ವ ಹೊಂದಿದ್ದವರಾಗಿದ್ದರು ಎಂದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ದಮನಿತ ಸಮುದಾಯದ ಧ್ವನಿಯಾಗಿದ್ದವರು. ದಲಿತರಿಗೆ ಚೌದಾರ್ ಕೆರೆ ನೀರು ಮುಟ್ಟುವ ಹೋರಾಟ, ಕಾಳರಾಂ ದೇವಸ್ಥಾನದ ಪ್ರವೇಶದಂತಹ ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿಹಾಡಿದವರು ಎಂದರು.
ದೇಶಕ್ಕೆ ಪವಿತ್ರ ಸಂವಿಧಾನ ನೀಡಿದಂತಹ ವ್ಯಕ್ತಿಯನ್ನು ಅವಮಾನಿಸಿದಂತವರು ಇಂದು ರಾಜಕೀಯ ಕಾರಣಕ್ಕೋ, ಅವರುಗಳ ಅಸ್ತಿತ್ವಕ್ಕೋ ಅವರ ಹೆಸರು ಹೇಳಿಕೊಂಡು ಓಡಾಡುತ್ತಿರುವುದು ನೋಡಿದರೆ ಅಂಬೇಡ್ಕರ್ ಹೆಸರು ಹೇಳದೆ ಬದುಕಿಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಅನಿಸುತ್ತದೆ ಎಂದರು.
ವಿಮುಕ್ತಿ ವಿದ್ಯಾ ಸಂಸ್ಥೆ, ಧಮ್ಮ ಕೇಂದ್ರದಲ್ಲಿ ಅಂಬೇಡ್ಕರ್ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮಗಳೆಲ್ಲವೂ ಕೂಡ ಸಂವಿಧಾನ, ಪ್ರಜಾಪ್ರಭುತ್ವ, ಸಂವಿಧಾನ ಪೀಠಿಕೆಗೆ ಪೂರಕವಾಗಿತ್ತು.
134 ನೇ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮವನ್ನು ವಿಶ್ವ ಸಾಗರ್ ಮತ್ತು ಅನ್ನಪೂರ್ಣ ದಂಪತಿಗಳು ವಿಶೇಷವಾಗಿ ಆಯೋಜನೆ ಮಾಡುವ ಮೂಲಕ ಜಯಂತಿಯನ್ನು ಸಾರ್ಥಕಗೊಳಿಸಿದರು.
ಅಂಬೇಡ್ಕರ್ ಜಯಂತಿ ಆಚರಣೆ ಸಂದರ್ಭದಲ್ಲಿ ಬಸವೇಶ್ವರ ವೃೆದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪೂರ್ಣಿಮಾ, ಬಸವೇಶ್ವರ ವಿದ್ಯಾ ಸಂಸ್ಥೆಯ ವಿ.ಕೆ.ಶಂಕರಪ್ಪ, ಅಲೆಮಾರಿ ಸಂಘಟನೆ ಮುಖಂಡರಾದ ವಸಂತ್ ಕುಮಾರ್, ಬಾಬು, ವಿಮುಕ್ತಿಯ ಸಂಯೋಜಕರಾದ ನಾಗರತ್ನಮ್ಮ, ಬೀಬಿಜಾನ್, ಹೆಚ್,ಕುಮಾರ್ಧಮ್ಮ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಅರಣ್ಯ ಸಾಗರ್, ಮತ್ತು ಸುತ್ತಮುತ್ತಲಿನ ಗ್ರಾಮದ ಕಿಶೋರಿಯರು ಭಾಗವಹಿಸಿ ನೃತ್ಯ ರೂಪಕಗಳನ್ನು ಪ್ರದರ್ಶನ ನೀಡಿದರು.




