1983 ರಿಂದ 88 ರವರೆಗೆ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆರವರು ಪ್ರಥಮ ಬಾರಿಗೆ ಹೆರಿಗೆ ಭತ್ಯೆ ಎಂಬ ಯೋಜನೆ ಜಾರಿಗೊಳಿಸಿದರು.
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
ಬಡ ಮಹಿಳೆಯರು ವಿಶೇಷವಾಗಿ ಕೂಲಿ ಕೆಲಸ ಮಾಡುವಂತಹ ಮಹಿಳೆಯರು ಗರ್ಭಿಣಿಯರಾದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ವಿಶ್ರಾಂತಿ ಸಿಗುವುದಿಲ್ಲ. ಅವರು ದುಡಿದು ಬದುಕಬೇಕು. ಜೊತೆಗೆ ಸರಿಯಾದ ರೀತಿಯಲ್ಲಿ ಪೌಷ್ಟಿಕಾಂಶದ ಆಹಾರ ದೊರೆಯುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡ ರಾಮಕೃಷ್ಣ ಹೆಗಡೆರವರು ಇವರಿಗೆ ಹೆರಿಗೆಯ ಮುನ್ನ ಮೂರು ತಿಂಗಳು ಮತ್ತು ಹೆರಿಗೆಯ ನಂತರ ಮೂರು ತಿಂಗಳು ಆರ್ಥಿಕ ನೆರವನ್ನ ನೀಡುವ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರು.
ಈಗ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿರುವ ಕಾರಣವಾದರೂ ಇಷ್ಟೇ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು ಮತ್ತು ಮಕ್ಕಳ ಸಾವು ಆಗುತ್ತಿದೆ. ಇದನ್ನು ರಾಜಕಾರಣಕ್ಕೆ ಬಳಸಿಕೊಂಡು ಟೀಕೆಗಳನ್ನು ಮಾಡುತ್ತಾ ಪ್ರತಿಭಟನೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.
ಬಾಣಂತಿಯರ ಸಾವಿಗೆ ಬೇಕಿರುವುದು ಇಂತಹ ಸಾವನ್ನು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕು. ವೈಜ್ಞಾನಿಕವಾದ ಕಾರಣಗಳನ್ನು ಹುಡುಕಬೇಕಾಗಿದೆ. ಕೇವಲ ಪ್ರತಿಭಟನೆಗಳಿಂದ ಯಾವ ಪ್ರಯೋಜನವು ಆಗುವುದಿಲ್ಲ. ಪತ್ರಿಕೆಯಲ್ಲಿ ಫೋಟೋ ಬರುತ್ತದೆ, ಸುದ್ದಿ ಮಾಧ್ಯಮದಲ್ಲಿ ಸುದ್ದಿಯಾಗುತ್ತದೆ. ಇದನ್ನು ಹೊರತುಪಡಿಸಿದರೆ ಯಾವ ಪ್ರಯೋಜನವಾಗುವುದಿಲ್ಲ. ಇದರ ಬದಲಿಗೆ ರಾಜ್ಯ ಸರ್ಕಾರ ನುರಿತ ವೈದ್ಯರಿಂದ ಇಂತಹ ಸಾವಿನ ಪ್ರಕರಣಗಳಲ್ಲಿ ತನಿಖೆಯನ್ನು ನಡೆಸಬೇಕು.
ಬಾಣಂತಿಯರ ಸಾವಿಗೆ ಕೇವಲ ಔಷಧಿಗಳು ಮಾತ್ರ ಕಾರಣವಾಗಿರುವುದಿಲ್ಲ. ಇದನ್ನು ಹೊರತುಪಡಿಸಿ ಅವರಲ್ಲಿ ಪೌಷ್ಟಿಕಾಂಶದ ಕೊರತೆ, ರಕ್ತ ಹೀನತೆ, ಸೂಕ್ತವಾದಂತಹ ಸಕಾಲಿಕ ಚಿಕಿತ್ಸೆಗಳು ದೊರೆತಿರುವುದಿಲ್ಲ. ಇವುಗಳ ಹಿನ್ನೆಲೆಯಲ್ಲಿ ಪ್ರತಿಯೊಂದು ಸಾವಿನ ಪ್ರಕರಣವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಸಾವನ್ನಪ್ಪಿರುವ ಬಾಣಂತಿಯರ ಆರ್ಥಿಕ ಪರಿಸ್ಥಿತಿ, ಅವರು ಯಾವ ಕೆಲಸವನ್ನು ಮಾಡುತ್ತಾರೆ, ಯಾವ ರೀತಿಯಲ್ಲಿ ತಮ್ಮ ತಾಯ್ತನದ ಸಂದರ್ಭದಲ್ಲಿ ಆರೈಕೆಯನ್ನು ಮಾಡಿಕೊಂಡಿರುತ್ತಾರೆ, ಅವರ ದೇಹದಲ್ಲಿ ಇರಬಹುದಾದಂತಹ ಪೌಷ್ಟಿಕಾಂಶದ ಕೊರತೆ, ರಕ್ತ ಹೀನತೆ, ಚಿಕಿತ್ಸೆಯ ಕೊರತೆ, ಕುಟುಂಬದ ವಿವರ, ಸಾಮಾಜಿಕ ಸ್ಥಿತಿಗತಿ ಇವುಗಳೆಲ್ಲವನ್ನ ಪರಿಶೀಲಿಸಿದರೆ ಸರಿಯಾದಂತಹ ಕಾರಣಗಳು ದೊರೆಯುತ್ತವೆ.
ಬಹಳಷ್ಟು ಇಂತಹ ಸಾವುಗಳು ಆಗುತ್ತಿರುವುದು ಬಡವರ ಕುಟುಂಬಗಳಲ್ಲಿ. ಇವರೆಲ್ಲರೂ ಬಡವರ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ಇವರಿಗೆ ಸರಿಯಾದಂತಹ ಆಹಾರ ಮತ್ತು ಆರೈಕೆ ಸಕಾಲದಲ್ಲಿ ದೊರೆಯುತ್ತಿರುವುದಿಲ್ಲ. ಇವುಗಳು ಪ್ರಮುಖವಾದಂತಹ ಸಂಗತಿಗಳಾಗಿರುತ್ತವೆ.
ಇವುಗಳನ್ನು ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಇಂತಹ ಸಾವುಗಳು ಸಂಭವಿಸದೆ ಇರಬೇಕಾದರೆ ಬಡವರು ಮತ್ತು ವಿಶೇಷವಾಗಿ ಕೂಲಿ ಮಾಡುವಂತಹ ಮಹಿಳೆಯರಿಗೆ ಹೆರಿಗೆಯ ಸಂದರ್ಭದಲ್ಲಿ ಆರ್ಥಿಕವಾಗಿ ಮತ್ತು ಇತರೆ ಎಲ್ಲ ವಿಚಾರಗಳಲ್ಲಿ ಯಾವ ರೀತಿಯಲ್ಲಿ ನೆರವನ್ನ ಒದಗಿಸಬಹುದು ಎಂಬುದನ್ನು ಆಲೋಚಿಸಬೇಕು ಹಾಗೂ ಇವರಿಗೆ ತಾಯಿತನ ದೃಢವಾದ ದಿನದಿಂದ ಹೆರಿಗೆಯ ತನಕ ಸೂಕ್ತವಾದಂತಹ ಸಕಾಲಿಕ ತಪಾಸಣೆಗಳು ಮತ್ತು ಸಲಹೆಗಳು ದೊರೆಯುವಂತೆ ಮಾಡಬೇಕು. ಅಗತ್ಯವಾದ ಸಂದರ್ಭದಲ್ಲಿ ಪೌಷ್ಟಿಕಾಂಶದ ಕಿಟ್ ಗಳನ್ನ ವಿತರಿಸುವಂತಹ ಕೆಲಸ ನಡೆಯಬೇಕು. ಈ ರೀತಿಯಲ್ಲಿ ವೈಜ್ಞಾನಿಕ ಚಿಂತನೆಯನ್ನು ನಡೆಸದೆ ಕೇವಲ ರಾಜಕಾರಣಕ್ಕಾಗಿ ಮಾತು ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡುತ್ತಾ ಬಂದರೆ ಮೂಲವಾದ ಸಮಸ್ಯೆಯ ಅರಿವೇ ಯಾರಿಗೂ ಇರುವುದಿಲ್ಲ. ಕೇವಲ ರಾಜಕಾರಣದ ಮಾತುಗಳಾಗುತ್ತದೆ. ಇದರಿಂದ ಯಾವ ಬಾಣಂತಿಯರ ಸಾವನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ನಿಜಕ್ಕೂ ಇವುಗಳು ಪರಿಹಾರದ ಮಾರ್ಗವು ಅಲ್ಲ.
ಬಾಣಂತಿಯರಿಗೆ ಯಾವ ರೀತಿಯಲ್ಲಿ ನೆರವನ್ನ ನೀಡಬೇಕು ಎಂದು ಬಡವರು ಮತ್ತು ಕೂಲಿ ಮಾಡುವ ಅಂತಹ ಮಹಿಳೆಯರಿಂದ ಮಾಹಿತಿಯನ್ನು ಪಡೆಯಬೇಕು. ಯಾರೋ ಹೇಳಿದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಹಸಿದವರಿಗೆ ಮಾತ್ರ ಹಸಿವಿನ ತೀವ್ರತೆಯ ಅರಿವಿರುತ್ತದೆ
– ಕೆ ಎಸ್ ನಾಗರಾಜ್, ಬೆಂಗಳೂರು




