ಬೆಂಗಳೂರು: ಜನರ ತೆರಿಗೆ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿ ವಿವಿಧ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಳಿ ಬರುತ್ತಿದ್ದ ಆರೋಪಕ್ಕೆ ಪ್ರತಿಯಾಗಿ ಬೆಳಗಾವಿಯ ಖಾನಾಪುರದ ಬಳಿ ದರೋಡೆಯಾಗಿರುವ ಬಾರಿ ಪ್ರಮಾಣದ ನಗದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತ್ರ ನೀಡಿದೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಬಿಜೆಪಿಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ದೆಹಲಿಯ ಹೈಕಮಾಂಡ್ ನ ಎಟಿಎಂ ಎಂದು ಪದೇಪದೇ ಟೀಕೆ ಮಾಡುತ್ತಿದ್ದರು. ಇದನ್ನು ಕಾಂಗ್ರೆಸ್ಸಿನ ನಾಯಕರು ಬಲವಾಗಿ ತಳ್ಳಿ ಹಾಕುವ ಪ್ರಯತ್ನ ಮಾಡಿದ್ದು ಹೆಚ್ಚಾಗಿ ಕಂಡುಬಂದಿಲ್ಲ. ಆದರೆ ಜನರ ಮನಸ್ಸಿನಲ್ಲಂತೂ ರಾಷ್ಟ್ರೀಯ ಕಾಂಗ್ರೆಸ್ ಗೆ ಕರ್ನಾಟಕ ಸರ್ಕಾರ ಹಣ ರವಾನೆ ಮಾಡುತ್ತಿದೆ ಎಂಬ ಅಭಿಪ್ರಾಯ ಬಲವಾಗಿ ಬೇರೂರಿದೆ.
ಅದಕ್ಕೆ ತಕ್ಕ ಹಾಗೆ ವಾಲ್ಮೀಕಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣ, ಗೃಹಲಕ್ಷ್ಮಿ ಕಂತು ಬಿಡುಗಡೆಯಾಗದೇ ಇರುವುದು, ಅಬಕಾರಿ ಇಲಾಖೆಯಲ್ಲಿ ಪರವಾನಿಗೆ ನೀಡಲು ಚಾಲ್ತಿಯಲ್ಲಿದ್ದ ಲಂಚದ ಮೊತ್ತ ಏಕಾಏಕಿ ನೂರಾರುಪಟ್ಟು ಹೆಚ್ಚಾಗಿರುವುದು, ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ದರ 10 ರಿಂದ 100 ಪಟ್ಟು ಏರಿಕೆಯಾಗಿರುವುದು ಸೇರಿದಂತೆ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ.
ಜೊತೆಗೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಹಲವು ರೀತಿಯ ತೆರಿಗೆಗಳನ್ನು ಹಾಕಿ ಜನ ಬೇಸತ್ತು ಹೋಗುವಂತೆ ಮಾಡಿದೆ. ಈ ಎಲ್ಲಾ ಹಣವನ್ನು ಬೇರೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಖರ್ಚು ಮಾಡಲು ಕಾಂಗ್ರೆಸ್ ಪಕ್ಷಕ್ಕೆ ರವಾನಿಸಲಾಗುತ್ತಿದೆ ಎಂಬುದು ಬಿಜೆಪಿ- ಜೆಡಿಎಸ್ಸಿನ ಪ್ರಮುಖ ಆರೋಪವಾಗಿದೆ.
ಕಾಂಗ್ರೆಸ್ಸಿಗರು ಈ ಆಪಾದನೆಯನ್ನು ಕೇಳಿಯು ಕೇಳಿಸದಂತಿದ್ದರು. ಈಗ ಗೋವಾದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಸುಮಾರು ನಾಲ್ಕು ನೂರು ಕೋಟಿ ರೂಪಾಯಿ ಹಣವನ್ನು ಎರಡು ಕಂಟೈನರ್ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಅದು ಕರ್ನಾಟಕ ರಾಜ್ಯದ ಬೆಳಗಾವಿಯ ಗಡಿ ಪ್ರವೇಶ ಪ್ರವೇಶಿಸುತ್ತಿದ್ದಂತೆ ಲೂಟಿಯಾಗಿದೆ.
ಅದರಲ್ಲೂ ಚಾರ್ಲ ಘಾಟ್ ಎಂಬ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲದಿರುವ ಮತ್ತು ಜಿಪಿಎಸ್ ಕೂಡ ಆಕ್ಟಿವ್ ಆಗದಂತಹ ನಿರ್ಗಮ ಪ್ರದೇಶದಲ್ಲಿ ಹೊಂಚು ಹಾಕಿ ಹಣ ದರೋಡೆ ಮಾಡಲಾಗಿದೆ. ಆ ಸ್ಥಳದಿಂದ ಹೊರಬಂದು ಸಂಪರ್ಕ ಕಲ್ಪಿಸಿಕೊಳ್ಳಲು ಕನಿಷ್ಠ 3 ಗಂಟೆ ಕಾಲಾವಕಾಶ ಬೇಕು. ಇದನ್ನು ಯೋಜಿತವಾಗಿ ಲೆಕ್ಕ ಹಾಕಿ ದರೋಡೆ ಮಾಡಲಾಗಿದೆ.
ಕಂಟೇನರ್ ಗಳಲ್ಲಿ 400 ಕೋಟಿಯಷ್ಟೇ, ಅಲ್ಲ ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ನಗದು ಇತ್ತು ಎಂದು ಪ್ರಕರಣದ ಕೇಂದ್ರಬಿಂದು ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಆತನ ಅಪಹರಣ ಹಾಗೂ ಕಿರುಕುಳದಿಂದಾಗಿ ದೇಶದಲ್ಲಿ ಅತಿ ದೊಡ್ಡ ದರೋಡೆ ಪ್ರಕರಣ ಬಯಲಿಗೆ ಬಂದಿದೆ. ಮೇಲ್ನೋಟಕ್ಕೆ ಈ ಹಣ ರಿಯಲ್ ಎಸ್ಟೇಟ್ ಉದ್ಯಮಿರಿಗೆ ಸೇರಿದ್ದು ಎಂದು ಹೇಳಲಾಗಿದೆ. ಆತನ ಸ್ನೇಹಿತರ ಆಗಿರುವ ಸಂದೀಪ್ ಪಾಟೀಲ್ ನನ್ನು ಅಪಹರಣ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದರಿಂದಾಗಿ ಹಣ ಲೂಟಿಯಾಗಿರುವ ವಿಚಾರ ಬಹಿರಂಗವಾಗಿದೆ. ಇಲ್ಲದೆ ಹೋಗಿದ್ದರೆ ಸದ್ದಿಲ್ಲದಂತೆ ಮುಚ್ಚಿ ಹೋಗುವ ಸಾಧ್ಯತೆಯಿತ್ತು.
ಈಗಲೂ ಪ್ರಕರಣವನ್ನು ಮುಚ್ಚಿ ಹಾಕುವ ನಾನಾ ರೀತಿಯ ಪ್ರಯತ್ನಗಳನ್ನು ಮಹಾರಾಷ್ಟ್ರ ಸರ್ಕಾರ ನಡೆಸಿದೆ ಎಂದೂ ಕೂಡ ಹೇಳಲಾಗಿದೆ. ಉದ್ಯಮಿ ಸಂದೀಪ್ ಪಾಟೀಲ್ ಸೆಲ್ಫಿ ವಿಡಿಯೋ ಮಾಡಿ ಒಂದೊಂದೇ ವಿಚಾರಗಳನ್ನು ಹೊರ ಹಾಕುತ್ತಿರುವುದರಿಂದ, ಪ್ರಕರಣ ಮುಚ್ಚಿ ಹಾಕಲಾಗದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿ, ತನಿಖೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.




