ಬಿಬಿಎಂಪಿ ನೌಕರರ ಸಹಕಾರ ಸಂಘದ ಚುನಾವಣೆ
ಸಂಘಟನೆ ಮೂಲಕ ಒಂದುಗೂಡಿ ಅಭಿವೃದ್ದಿ ಪಥದತ್ತ ಸಾಗುವುದು ಸಹಕಾರ ಸಂಘದ ಉದ್ದೇಶ: ಎ.ಅಮೃತ್ ರಾಜ್
ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯ ಡಾ.ರಾಜ್ ಕುಮಾರ್ ಗಾಜಿನಮನೆ ಸಭಾಂಗಣದಲ್ಲಿ ಬಿಬಿಎಂಪಿ ನೌಕರರ ಸಂಘದ 2023-2028ನೇ ಸಾಲಿನ ನಿರ್ದೇಶಕರು ಆಯ್ಕೆ ಚುನಾವಣೆ ಜರುಗಿತು.
7 ಸಾಮಾನ್ಯ ವರ್ಗ ಮತ್ತು ಪರಿಶಿಷ್ಟ ವರ್ಗದ ಒಂದು ಸ್ಥಾನಕ್ಕೆ ಚುನಾವಣೆ ನಡೆದು, 1258 ಮತ ಚಲಾವಣೆ
ಎ. ಅಮೃತ್ ರಾಜ್- 1025ಮತಗಳು ಮತ್ತು ಕೆ. ಜಿ.ರವಿ-814 ಸಿ.ಎಂ.ಮುನಿರಾಜು-676 ಮಹೇಶ್ ಎಂ-750 ಮತ್ತು ಮಂಜುನಾಥ್ ಎಲ್.ಆರ್-659 ಹಾಗೂ ಹರೀಶ್ ಕುಮಾರ್-715 ಎನ್, ವಿನಯಕುಮಾರ್-796 7 ಸಾಮಾನ್ಯ ವರ್ಗ ಹಾಗೂ 1 ಪರಿಶಿಷ್ಟ ಸ್ಥಾನ ಕೆ.ಎನ್.ಗಂಗಾಧರ್ (ಲಾಲಿ)ರವರು-804 ಮತಗಳಿಂದ ಜಯಶಾಲಿಯಾದರು.
5 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ತಂಡ 13ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ.
ರಾಜಶೇಖರ್, ಮಂಜುನಾಥ್ ಜೆ, ಮಹಿಳೆ ಸ್ಥಾನದಲ್ಲಿ ಅಕ್ಕಮಹಾದೇವಿ. ಮಹಾದೇವಿ ಸಂಗಪ್ಪ ಗಾಣಿಗೇರ, ವಾಣಿ ಅರ್.ಪಿ. ಅವಿರೋಧವಾಗಿ ಆಯ್ಕೆಯಾಗಿದ್ದರು.
ಇದೇ ವೇಳೆ ಮಾತನಾಡಿದ ಎ.ಅಮೃತ್ ರಾಜ್, ಸಂಘಟನೆ ಮೂಲಕ ಸಹಕಾರದಿಂದ ಒಂದುಗೂಡಿ ಅಭಿವೃದ್ಧಿಯತ್ತ ಸಾಗುವುದು ಸಹಕಾರ ಸಂಘದ ಉದ್ದೇಶ. ನಮ್ಮ ಸಂಘದಲ್ಲಿ 3600ಕ್ಕೂ ಹೆಚ್ಚು ಸದಸ್ಯರು ಇದ್ದಾರೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಬಿಬಿಎಂಪಿ ಅಧಿಕಾರಿ, ನೌಕರರಿಗೆ ಸಂಘದ ಸದಸ್ಯತ್ವ ನೀಡಲಾಗುವುದು. ಸಹಕಾರ ಎಂದರೆ ಬಿಬಿಎಂಪಿ ಅಧಿಕಾರಿ ನೌಕರರು ನಿವೃತ್ತಿ ನಂತರ ಬಂದ ಹಣವನ್ನು ಸಹಕಾರ ಸಂಘದಲ್ಲಿ ಡಿಪಾಸಿಟ್ ಮಾಡಿದರೆ ಆಕರ್ಷಕ ಬಡ್ಡಿ ನೀಡುವ ಯೋಜನೆ ನೀಡಲಾಗುವುದು ಎಂದು ಹೇಳಿದರು.
ಅಧಿಕಾರಿ ಮತ್ತು ನೌಕರರಿಗೆ ಕುಟುಂಬದಲ್ಲಿ ಮದುವೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಅವಶ್ಯಕತೆ ಇದ್ದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದಲ್ಲಿ ಅಲ್ವಾವಧಿ ಮತ್ತು ಧೀರ್ಘಾವಧಿ ಸಾಲ ಸೌಲಭ್ಯ ಸಿಗುತ್ತದೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಸರಳ ವಿಧಾನ ಅನುಸರಿಸಲಾಗುವುದು. ಐದು ವರ್ಷ ಸಹಕಾರ ಸಂಘದಲ್ಲಿ ಪಾರದರ್ಶಕ ಆಡಳಿತ ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿರುವುದರಿಂದ ಸಂಘ ಲಾಭದತ್ತ ಸಾಗುತ್ತಿದೆ. ಬಿಬಿಎಂಪಿ ಅಧಿಕಾರಿ, ನೌಕರರ ಕುಟುಂಬ ಶುಭಾಕಾರ್ಯಗಳಾದ ಮದುವೆ, ಹುಟ್ಟುಹಬ್ಬ ಮತ್ತು ಶುಭಾ ಕಾರ್ಯಗಳಿಗೆ ಒಂದು ಎಕರೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಚುನಾವಣಾ ಉಸ್ತುವಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಮತ್ತು ಎಸ್.ಜಿ.ಸುರೇಶ್, ರೇಣುಕಾಂಬ, ರುದ್ರೇಶ್, ಸಂತೋಷ್ ಕುಮಾರ್, ನಾಯ್ಕ್,ಮಂಜುನಾಥ್, ಹೆಚ್.ಬಿ.ಹರೀಶ್, ನರಸಿಂಹ, ಸೋಮಶೇಖರ್ ಶ್ರೀಧರ್ ರವರು ಸದಸ್ಯರು ಭಾಗವಹಿಸಿದ್ದರು.




