ನಾನು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಎರಡನ್ನೂ ಅಧ್ಯಯನ ಮಾಡುತ್ತೇನೆ. ಅರ್ಥಶಾಸ್ತ್ರದಲ್ಲಿ ಲಾಭ–ನಷ್ಟ ಇದ್ದರೆ, ಆಧ್ಯಾತ್ಮದಲ್ಲಿ ಪಾಪ–ಪುಣ್ಯ ಇವೆ. ವ್ಯವಹಾರದಲ್ಲಿ ನೀತಿ ಇರಬೇಕು, ಆಧ್ಯಾತ್ಮದಲ್ಲಿ ಜಾಗೃತಿ ಇರಬೇಕು. ಲಾಭದಿಂದಲೂ ಪುಣ್ಯ ಗಳಿಸಬೇಕಾದರೆ ಸನ್ಮಾರ್ಗ ಅಗತ್ಯ. ಅದನ್ನೇ ಬಸವಣ್ಣ ಅವರು ನಮಗೆ ಕಲಿಸಿದ್ದಾರೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಅವರ ಅನುಭವ ಮಂಟಪವು ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದೇ ಹೇಳಲಾಗುತ್ತದೆ. “ಕಲಬೇಡ, ಕೊಲಬೇಡ, ಹುಸಿಯ ನುಡಿಯಬೇಡ” ಎಂದು ಅವರು ಸನ್ಮಾರ್ಗ ತೋರಿಸಿದರು. ಕಾಮ, ಕ್ರೋಧ, ಮದ, ಮತ್ಸರದಲ್ಲಿ ಸಿಲುಕಿದವನು ಮನುಷ್ಯ; ನ್ಯಾಯ, ನೀತಿ, ಪ್ರೀತಿ, ವಿಶ್ವಾಸದಲ್ಲಿ ಬದುಕುವವನು ಮಾನವ. ಆ ಮುಗ್ಧತೆ ಮತ್ತು ಆತ್ಮಸಾಕ್ಷಿ ಉಳಿಯಲು ಶ್ರೀಮಠಗಳ ಆಧ್ಯಾತ್ಮಿಕ ಜಾಗೃತಿ ಅಗತ್ಯ.
ದೊಡ್ಡ ಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ. ಮುಂದಿನ ವರ್ಷ ಲಿಂಗೈಕ್ಯ ಶ್ರೀ ಗುರು ರಾಚೋಟೇಶ್ವರ ಮಹಾಸ್ವಾಮಿಗಳವರ 50ನೇ ಸ್ಮರಣೋತ್ಸವವನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ.
– ಬಸವರಾಜ ಬೊಮ್ಮಾಯಿ, ಸಂಸದ




