ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜಾತಿ ಜಾತಿಗಳ ನಡುವೆ ಸಾಮರಸ್ಯ ತರಬೇಕು, ಸಮಾಜದಲ್ಲಿ ಸಮಾನತೆ ಮೂಡಬೇಕು ಎಂಬ ಉದ್ದೇಶದಿಂದ ಈ ನಾಡಿನಲ್ಲಿ ಎಷ್ಟೋ ಮಹನೀಯರು ಶ್ರಮಿಸಿದ್ದಾರೆ. ಸರ್ಕಾರಗಳೂ ಕೂಡಾ ಕಾಯ್ದೆ ಕಾನೂನುಗಳ ಜಾರಿಯ ಮೂಲಕ ಇಂತಹ ವಾತಾವರಣವನ್ನು ಸರಿಪಡಿಸಲು ಶ್ರಮಿಸಿವೆ.
ಹೀಗಿದ್ದರೂ ಸಹ ಜಾತಿ ಕಾರಣಕ್ಕಾಗಿ ನಿರ್ಮಾಣವಾಗಿರುವ ಶ್ರೇಷ್ಠತೆಯ ಮನಸ್ಥಿತಿಯನ್ನು ಹೋಗಲಾಡಿಸಲು ಸಾಧ್ಯವಾಗದೇ ಇರುವುದು ಅತ್ಯಂತ ಬೇಸರದ ಸಂಗತಿ.
ಆಚರಣೆ ಹಾಗೂ ಇನ್ನಿತರೆ ಸಮುದಾಯಿಕ ವ್ಯತ್ಯಾಸಗಳನ್ನು ಸಾಮರಸ್ಯದಿಂದ ನಿರ್ವಹಿಸುವ ಮನಸ್ಥಿತಿಯನ್ನು ಸರ್ಕಾರಗಳು ಕಲಿಸಲು ಸಾಧ್ಯವೇ.,?
ಇಂತಹ ಅಮಾನವೀಯತೆಯನ್ನು ಮೆರೆದ ವ್ಯಕ್ತಿಗೆ ಶಿಕ್ಷೆ ಆಗುವುದು ಖಚಿತ. ಆದರೆ ಪ್ರೀತಿಗಾಗಿ ಕಳೆದುಕೊಂಡ ಅಮೂಲ್ಯ ಜೀವ ಮರಳಿ ಬರುವುದಿಲ್ಲ ಎಂಬುದೇ ಈ ಹೊತ್ತಿನ ವಾಸ್ತವ.
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




