ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತಂಡ ಇಡೀ ಘಟನೆಗೆ ಆರ್ ಸಿ ಬಿ ನೇರ ಕಾರಣ ಎಂದು ಹೇಳಿದೆ. ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್ ನೀಡಿದ ಮಾರ್ಗಸೂಚಿ ಅನ್ವಯ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತಂಡ ಇದೀಗ ನ್ಯಾಯಾಲಯಕ್ಕೆ ತನ್ನ ವರದಿ ಸಲ್ಲಿಸಲು ಸಜ್ಜುಗೊಂಡಿದೆ.
- ಶ್ರೀರಾಮ ದೇಗುಲದಲಿ ಕಳ್ಳತನ, ಚಾನ್ಸೇ ಇಲ್ಲ!!!
- ದೇವರ ಮುಂದೆ ಎಲ್ಲರೂ ಸಮಾನರು: ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ
- ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. ಪುನೀತ್ ರಾಜ್ಕುಮಾರ್ ಸಭಾಂಗಣ ಲೋಕಾರ್ಪಣೆ
- ಬಿಜೆಪಿಯವರು ಧರ್ಮಸ್ಥಳವನ್ನು ತಮ್ಮ ರಾಜಕಾರಣಕ್ಕೆ ಬಳಸಬಾರದು
- ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಧಿಕಾರ ಅಲ್ಲ ಜವಾಬ್ದಾರಿ: ಬಿ ಕೆ ಹರಿಪ್ರಸಾದ್
ಇಡೀ ಘಟನೆಗೆ ಆರ್ ಸಿ ಬಿ, ಕರ್ನಾಟಕ ಕ್ರಿಕೆಟ್ ಸಂಸ್ಥೆ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ್ದ ಡಿ ಎನ್ಎ ನೇರ ಹೊಣೆ ಎಂದು ಹೇಳಿದ್ದು, ಈ ಮೂರೂ ಸಂಸ್ಥೆಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿದ್ದತೆ ನಡೆಸಿದೆ.
ಕಾರ್ಯಕ್ರಮ ಆಯೋಜನೆಗೆ ಸರಿಯಾದ ಪ್ಲಾನ್ ಹಾಗೂ ನಿರ್ವಹಣಾ ವ್ಯವಸ್ಥೆ ಇರಲಿಲ್ಲ. ಕಾರ್ಯಕ್ರಮ ಆಯೋಜನೆಗೂ ಮುನ್ನ ನಡೆಯಬೇಕಾದ ಸಭೆಯನ್ನು ಸರಿಯಾಗಿ ಮಾಡಿಲ್ಲ ಎಂಬ ಸಂಗತಿ ತನಿಖೆ ವೇಳೆ ಪತ್ತೆಯಾಗಿದೆ. ತೆಗೆದುಕೊಂಡ ತೀರ್ಮಾನಗಳ ಕುರಿತು ಪೊಲೀಸ್ ಇಲಾಖೆಗೂ ಸರಿಯಾದ ಮಾಹಿತಿ ನೀಡದಿರುವುದು, ಟಿಕೆಟ್ ಮಾರಾಟ, ಆನ್ಲೈನ್ ಮಾಹಿತಿ ಹಾಗೂ ಟ್ವೀಟ್ಗಳ ಬಗ್ಗೆ ಉಂಟಾದ ಗೊಂದಲ, ಸುಳ್ಳು ವದಂತಿಗಳು, ಜನರ ಅತೀ ಹೆಚ್ಚು ಜಮಾವಣೆ ಕಾರಣವಾಗಿದೆ. RCB ಕಡೆಯಿಂದ ಉಂಟಾದ ಟಿಕೆಟ್ ಗೊಂದಲ ಈ ಘಟನೆಗೆ ಪ್ರಮುಖ ಕಾರಣವೆಂದು ತನಿಖೆ ಬಹಿರಂಗಪಡಿಸಿದೆ.
ಕಾರ್ಯಕ್ರಮದ ಭದ್ರತೆಗಾಗಿ ಜವಾಬ್ದಾರಿಯಾಗಿದ್ದ ಡಿಎನ್ಎ ಸಂಸ್ಥೆ ಯಾವುದೇ ಸೂಕ್ತ ಸೆಕ್ಯುರಿಟಿ ಪ್ಲಾನ್ ಹೊಂದಿರಲಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲವಾಗಿದೆ. ಪೊಲೀಸರು ನಡೆಸಬೇಕಾದ ಸಂವಹನ, ಸಹಕಾರ, ಸಂಚಲನ ವ್ಯವಸ್ಥೆಗಳು ಸಮರ್ಪಕವಾಗಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ.
ತನಿಖಾ ತಂಡ ಘಟನೆ ನಡೆದ ದಿನದ ಸ್ಟೇಡಿಯಂನ ಪ್ರತಿಯೊಂದು ಗೇಟ್ನಲ್ಲಿದ್ದ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದೆ. ಗೇಟ್ಗಳಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿಗಳ ಹೇಳಿಕೆ ಪಡೆದಿದೆ. ಡ್ಯೂಟಿಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳ ವಿವರ ಪಡೆದಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರ ಹಾಗೂ ಗಾಯಾಳುಗಳನ್ನು ಸಾಗಿಸಿದವರ ಹೇಳಿಕೆಗಳನ್ನೂ ದಾಖಲಿಸಿದೆ. ಈ ಸಮಗ್ರ ತನಿಖೆಯ ಆಧಾರದ ಮೇಲೆ, ಮೂರು ಸಂಸ್ಥೆಗಳು ಸಾವಿಗೆ ನೇರ ಹೊಣೆ ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದು ತನಿಖಾ ವರದಿ ಹೇಳುತ್ತದೆ.




