ಬೆಂಗಳೂರು: ಐಪಿಎಲ್ ಕಪ್ ಗೆದ್ದ ಆರ್ ಸಿ ಬಿ ತಂಡಕ್ಕೆ ಅಭಿನಂದನೆ ಹಾಗೂ ವಿಜಯೋತ್ಸವ ಆಚರಣೆ ಸಂದರ್ಭ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನ ಗಾಯಗೊಂಡರೂ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಮೊದಲಿಗೆ ಘಟನೆಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರುಕೇವಲ ಅಸಹಜ ಸಾವು (ಯುಡಿಆರ್) ಎಂದು ಪರಿಗಣಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಕಾರ್ಯಕ್ರಮ ಆಯೋಜಿಸಿದವರ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಪ್ರಕರಣ ದಾಖಲು ಮಾಡಲು ಅವಕಾಶವಿತ್ತು. ಜೊತೆಗೆ ಕಾರ್ಯಕ್ರಮ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ( ಕೆಎಸ್‌ಸಿಎ) ಮತ್ತು ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದ ಡಿಎನ್‌ಎ ಕಂಪನಿ ವಿರುದ್ಧ ದೂರು ದಾಖಲು ಮಾಡಿ ತನಿಖೆ ನಡೆಸಬಹುದಾಗಿತ್ತು ಎಂದು ಹೇಳಿದ್ದಾರೆ.
ಪೊಲೀಸರ ಈ ನಡೆಯಿಂದಾಗಿ ಸಂಪೂರ್ಣ ಘಟನೆಗೆ ಯಾರು ಹೊಣೆ ಎಂಬ ಬಗ್ಗೆ ತನಿಖೆಯೇ ನಡೆಯುವುದಿಲ್ಲ. ಜನರು ಅವರಾಗಿಯೇ ಬಂದು ಸಿಕ್ಕಿ ಹಾಕಿಕೊಂಡು ಕಾಲ್ತುಳಿತವಾಗಿ ಸಾವನಪ್ಪಿದ್ದಾರೆ. ಇದಕ್ಕೆ ಯಾರೂ ಹೊಣೆ ಅಲ್ಲ ಎಂಬ ನಿರ್ಧಾರಕ್ಕೆ ಭಾಗಶಃ ಬಂದಂತಾಗಿದೆ ಎಂದು ದೂರಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಈ ಕುರಿತಂತೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನೆಲ್ಲೇ ಕಬ್ಬನ್ ಪಾರ್ಕ್ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಎಫ್ಐಆರ್ ನಲ್ಲಿ ಎ1, ಆರ್ ಸಿಬಿ ಮ್ಯಾನೇಜ್ಮೆಂಟ್, ಎ2, ಡಿಎನ್ ಎ ಇವೆಂಟ್ ಮ್ಯಾನೇಜ್ಮೆಂಟ್, ಎ3, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಎಂದು ಪ್ರಕರಣ ದಾಖಲಾಗಿದೆ. ಬಿಎನ್ ಎಸ್ ಸೆಕ್ಷನ್ 105, 115, 118 ಅಡಿ ಮೊಕದ್ದಮೆ ದಾಖಲಾಗಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ವಿವರ
ಬೌರಿಂಗ್ ಆಸ್ಪತ್ರೆ:
ದಿವ್ಯಾಂಶಿ, 14 ವರ್ಷ ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿ
ಅಕ್ಷತಾ ಪೈ, 26 ವರ್ಷ, ಉತ್ತರ ಕನ್ನಡ ಜಿಲ್ಲೆಯ ರವೀಂದ್ರ ನಗರ
ಮನೋಜ್ ಕುಮಾರ್, 20 ವರ್ಷ, ತುಮಕೂರಿನ ನಾಗಸಂದ್ರ ಗ್ರಾಮ
ಶ್ರವಣ್.ಕೆ.ಟಿ, 20 ವರ್ಷ, ಚಿಕ್ಕಬಳ್ಳಾಪುರದ ಕುರಟಹಳ್ಳಿ ಗ್ರಾಮ
ಶಿವಲಿಂಗ, 17 ವರ್ಷ, ಯಾದಗಿರಿ ಜಿಲ್ಲೆಯ ಹೊನಿಗೇರಿ ಗ್ರಾಮ
ಕಾಮಾಕ್ಷಿದೇವಿ, 29 ವರ್ಷ, ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಉಡುಮಲಪೇಟ್
ವೈದೇಹಿ ಆಸ್ಪತ್ರೆ
ಭೂಮಿಕ್, 20 ವರ್ಷ, ಎಂ.ಎಸ್.ರಾಮಯ್ಯ ಬಡಾವಣೆ, ಬೆಂಗಳೂರು
ಸಹನಾ 23 ವರ್ಷ, ಕೋಲಾರ ಜಿಲ್ಲೆಯ ಎಸ್.ವಿ.ಲೇಔಟ್
ಪೂರ್ಣಚಂದ್ರ, 20 ವರ್ಷ, ಮಂಡ್ಯ ಜಿಲ್ಲೆಯ ರಾಯಸಮುದ್ರ
ಪ್ರಜ್ವಲ್, 22 ವರ್ಷ, ಯಲಹಂಕ ನ್ಯೂ ಟೌನ್
ಮಣಿಪಾಲ್ ಆಸ್ಪತ್ರೆ
ಚಿನ್ಮಯಿ ಶೆಟ್ಟಿ, 19 ವರ್ಷ, ನಾರಾಯಣ ನಗರ ದೊಡ್ಡಕಲ್ಲಸಂದ್ರ
ಮೃತರ ಪೋಷಕರು, ಸಂಬಂಧಿಕರು ನೀಡಿರುವ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ 194 (ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವೆ ಉಂಟಾದ ಗಲಭೆ) ಯಡಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.




