ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನದಲ್ಲಿ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ
ನವೆಂಬರ್ 8, 9 ಮತ್ತು 10ರಂದು ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ
ಬೆಂಗಳೂರು: ಕಾಡುಮಲ್ಲೇಶ್ವರ ಗೆಳಯರ ಬಳಗದ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ನವೆಂಬರ್ 8, 9, 10ರಂದು ಮೂರು ದಿನಗಳ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಉಪಾಧ್ಯಕ್ಷೆ ಲೀಲಾ ಸಂಪಿಗೆ, ಸಂಘದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ, ಚಂದ್ರಶೇಖರ್ ನಾಯ್ಡು, ಸೋಮಶೇಖರ್, ನರಸಿಂಹಪ್ರಭು, ಸುಧಾಕರ್, ರಾಜಶಶಿಧರ್, ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿ.ಕೆ.ಶಿವರಾಂ ಮಾತನಾಡಿ, ಶ್ರೀ ಕಾಡು ಮಲ್ಲೇಶ್ವರ ಗೆಳಯರ ಬಳಗ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಂಸ್ಕೃತಿ ಉಳಿಸಿ, ಬೆಳಸಲು ಶ್ರಮಿಸುತ್ತಿದೆ. ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಪರಿಸರ ಸ್ನೇಹಿ ವಾತವರಣವನ್ನು ನಿರ್ಮಿಸಿದ ಕೀರ್ತಿ ಕಾಡು ಮಲ್ಲೇಶ್ವರ ಗೆಳಯರ ಬಳಗಕ್ಕೆ ಸಲ್ಲುತ್ತದೆ ಎಂದರು.
ನವೆಂಬರ್ 8ರಂದು ಸಂಜೆ ಮಲ್ಲಿಕಾರ್ಜುನ ಸ್ವಾಮಿ, ನಂದಿಯ ಮೂರ್ತಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಉದ್ಘಾಟನೆ ನೆರವೇರಲಿದೆ. ನವೆಂವರ್ 9ರಂದು ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿಯನ್ನು ಘರ್ತಿಕೆರೆ ರಾಘಣ್ಣರವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯ ಮೊತ್ತ 10,000 ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದ ಎಂದರು.
ದೈವದ ಮೇಲೆ ನಂಬಿಕೆ ಇರಲಿ, ಮೂಢನಂಬಿಕೆ ಮೇಲಲ್ಲ. ರೈತ ಸ್ನೇಹಿ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮೂಲಕ ರೈತರಿಗೆ ಬೀದಿ ಬದಿಯ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಮಾರಾಟಗಾರರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಹಳ್ಳಿಗಳಲ್ಲಿ ಸಂತೆ ಮಾದರಿಯಲ್ಲಿ ಹಾಗೂ ಮಧ್ಯವರ್ತಿಗಳು ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕನಿಗೆ ಮಾರಾಟ ಮಾಡುವ ಗ್ರಾಮೀಣ ಸಂತೆ ಏರ್ಪಡಿಸಲಾಗಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಗೆ 1 ಲಕ್ಷಕ್ಕೂ ಹೆಚ್ಚು ಬಟ್ಟೆ ಮತ್ತು ಪೇಪರ್ ಬ್ಯಾಗ್ ಗಳನ್ನು ವಿತರಿಸಲಾಗುತ್ತಿದೆ. ವೆಂಡಿಂಗ್ ಮಿಷಿನ್ ಸಹ ಇಡಲಾಗುತ್ತದೆ. ಇದರಲ್ಲಿ ವೇಸ್ಟ್ ಪ್ಲಾಸ್ಟಿಕ್ ಬಾಟಲ್ ಹಾಕಿದಾಗ ಒಂದು ರೂಪಾಯಿ ನೀಡಲಾಗುತ್ತದೆ. ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಲಾಗಿದೆ ಎಂದರು.
ನವೆಂಬರ್ 8ರಂದು ಸಂಜೆ 5ಗಂಟೆಗೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು, ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ವೆಂಕಟಮ್ಮ ಮಟ್ಟ ಬಾರ್ಲು, ಸರೋಜಮ್ಮ ಬನ್ನಪ್ಪ ಅವರಿಂದ ಉದ್ಘಾಟನೆ. ಸಂಜೆ: 6-30ಕ್ಕೆ ಹುಣ್ಣಿಮೆ ಹಾಡು-222ರ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಸ್ಮರಣೆಯಲ್ಲಿ ನೆನಪುಗಳ ಕಡಲಲ್ಲಿ ಸವಿತಾ ಗಣೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಗೀತೆಗಾಯನ. ಮುಖ್ಯ ಅತಿಥಿಗಳು ಶಾಸಕರಾದ ವಿಜಯಾನಂದ ಎಸ್.ಕಾಶಪ್ಪನವರ್, ವೀರಲೋಕ ಬುಕ್ಸ್ ಸಂಸ್ಥಾಪಕ ವೀರಕಪುತ್ರ ಎಂ.ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನವೆಂಬರ್ 9ರಂದು ಹುಣ್ಣಿಮೆ ಹಾಡು-223 ಬೆಳಗ್ಗೆ 11 ಗಂಟೆಗೆ ಮಧುಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಭಾವ ಸಂಗೀತ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ನಾಡಿನ ಖ್ಯಾತ ಸುಗಮ ಸಂಗೀತಗಾರರಾದ ಘರ್ತಿಕೆರೆ ರಾಘಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಖ್ಯಾತ ನಟಿ ಸುಧಾರಾಣಿ, ನಟ ವಿಜಯರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ನವೆಂಬರ್ 10ರಂದು ಸಂಜೆ 5ಗಂಟೆಗೆ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ 9ನೇ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಸಂಪನ್ನ ಕಾರ್ಯಕ್ರಮವಿದೆ. ಸಂಜೆ 6-30ಕ್ಕೆ ಹುಣ್ಣಿಮೆ ಹಾಡು-225ರ ಕಾರ್ಯಕ್ರಮ ಇದೆ. ಕಾರ್ತಿಕ್ ಮಣಿ ಮತ್ತು ಜರ್ಮನಿ ದೇಶದ ಮ್ಯಾಗ್ನಸ್ ಡವ್ ನರ್ ತಂಡದವರಿಂದ ಕರ್ನಾಟಕ-ಜರ್ಮನಿ ಸಂಗೀತ ತಾಳವಾದ್ಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.







