ಬೆಂಗಳೂರು: ದೇಶಾದ್ಯಂತ ತೀವ್ರ ಗಮನ ಸೆಳೆದಿರುವ ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾದ ನೂರಾರು ಹತ್ಯೆ ಪ್ರಕರಣಗಳನ್ನು ಭೇದಿಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ವಿಶೇಷ ತನಿಖಾ ತಂಡದ (ಎಸ್ಐಟಿ) ಜತೆಗೆ ಕಾರ್ಯನಿರ್ವಹಿಸಲು ಹೆಚ್ಚುವರಿ 20 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ ಸಲೀಂ ಆದೇಶ ಹೊರಡಿಸಿದ್ದಾರೆ.
ವಿಶೇಷ ತನಿಖಾ ತಂಡದಲ್ಲಿ ಯಾರೆಲ್ಲ ಇದ್ದಾರೆ?
ಸಿ.ಎ ಸೈಮನ್ – ಎಸ್ಪಿ, ಡಿಸಿಆರ್ಇ, ಮಂಗಳೂರು
ಲೋಕೇಶ್ ಎ.ಸಿ – ಡಿಎಸ್ಪಿ, ಸಿಇಎನ್ ಪಿಎಸ್, ಉಡುಪಿ
ಮಂಜುನಾಥ್ – ಡಿಎಸ್ಪಿ, ಸಿಇಎನ್ ಪಿಎಸ್, ದ.ಕ
ಮಂಜುನಾಥ್ ಗೌಡ – ಪಿಐ ಶಿರಸಿ ಗ್ರಾಮಾಂತರ
ಸವಿತ್ರು ತೇಜ್ ಪಿ.ಡಿ – ಸಿಪಿಐ, ಬೈಂದೂರು
ಗುಣಪಾಲ್ ಜೆ. – ಪಿಎಸ್ಐ, ಮೆಸ್ಕಾಂ, ಮಂಗಳೂರು,
ಸುಭಾಷ್ ಕಾಮತ್ – ಎಎಸ್ಐ, ಉಡುಪಿ ಟೌನ್ ಪಿಎಸ್
ಹರೀಶ್ ಬಾಬು – ಕಾಪು ಪಿಎಸ್
ಪ್ರಕಾಶ್- ಮಲ್ಪೆ ವೃತ್ತ ಕಚೇರಿ
ನಾಗರಾಜ್ – ಕುಂದಾಪುರ ಟೌನ್ ಪಿಎಸ್
ದೇವರಾಜ್ – ಎಫ್ಎಂಎಸ್, ಚಿಕ್ಕಮಗಳೂರು
ಮಂಜುನಾಥ್ – ಪಿಐ, ಸಿಎಸ್ಪಿ
ಸಂಪತ್ ಇ.ಸಿ – ಪಿಐ, ಸಿಎಸ್ಪಿ
ಕುಸುಮಾಧರ್ ಕೆ – ಪಿಐ, ಸಿಎಸ್ಪಿ ಉಡುಪಿ
ಕೋಕಿಲಾ ನಾಯಕ್ – ಪಿಎಸ್ಐ, ಸಿಎಸ್ಪಿ
ವಯ್ಲೆಟ್ ಫೆಮಿನಾ – ಪಿಎಸ್ಐ, ಸಿಎಸ್ಪಿ
ಶಿವಶಂಕರ್ – ಪಿಎಸ್ಐ, ಸಿಎಸ್ಪಿ
ರಾಜ್ ಕುಮಾರ್ ಉಕ್ಕಲಿ – ಪಿಎಸ್ಐ ಶಿರಸಿ ಎನ್ಎಂ ಪಿಎಸ್
ಸುಹಾಸ್ ಆರ್. – ಪಿಎಸ್ಐ, ಅಂಕೋಲಾ ಪಿ.ಎಸ್
ವಿನೋದ್ ಎಸ್.ಕಲ್ಲಪ್ಪನವರ್- ಪಿಎಸ್ಐ ಮುಂಡಗೋಡ ಅವರನ್ನು ಎಸ್ಐಟಿ ತಂಡದ ಸದಸ್ಯರಾಗಿ ನೇಮಿಸಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಯುವತಿಯರ ಶವಗಳನ್ನು ಸಮಾಧಿ ಮಾಡಿದ್ದೇನೆ ಎಂದು ಹೇಳಿರುವ ಪೌರಕಾರ್ಮಿಕರೊಬ್ಬರ ಹೇಳಿಕೆ ಕುರಿತು ತನಿಖೆ ನಡೆಸುವಂತೆ ವಿವಿಧ ಕಡೆಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತು.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂಎನ್ ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ.




