ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ, ಹನಿಟ್ರ್ಯಾಪ್ ಷಡ್ಯಂತ್ರ ಸೇರಿದಂತೆ ಹಲವು ಪ್ರಕರಣಗಳ ಕುರಿತು ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್ ಐಟಿ)ಕ್ಕೆ 25 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಕಮಾಡಲಾಗಿದೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಒಬ್ಬ ಎಸಿಪಿ, ಇಬ್ಬರು ಡಿಎಸ್ಪಿ, ಒಬಬ್ ಮಹಿಳಾ ಪಿಐ ಸೇರಿ ನಾಲ್ವರು ಇನ್ಸ್ ಪೆಕ್ಟರ್ಗಳು, ಮೂವರು ಪಿಎಸ್ಐ ಹಾಗೂ ಇಬ್ಬರು ಎಎಸ್, ಒಬ್ಬ ಮಹಿಳಾ ಹೆಚ್.ಸಿ ಸೇರಿ ಮೂವರು ಹೆಚ್.ಸಿ ಹಾಗೂ ಇಬ್ಬರು ಪಿಸಿ, ಮೂವರು ಆರ್.ಎಚ್.ಸಿ, ಮೂವರು ಆರ್.ಪಿ.ಸಿ, ಇಬ್ಬರು ಮಹಿಳಾ ಆರ್.ಪಿ.ಸಿಗಳನ್ನು ಎಸ್ ಐ ಟಿಗೆ ನೇಮಿಸಲಾಗಿದೆ.
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಸೆಪ್ಟಬರ್ 21ರಂದು ಮುಖ್ಯಸ್ಥರಾಗಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಸರ್ಕಾರ ಆದೇಶಸಿತ್ತು.ಈಗ ಇದಕ್ಕೆ ಸಿಸಿಬಿ ಎಸಿಪಿ ಧರ್ಮೆಂದ್ರ, ಡಿಎಸ್.ಪಿ.ರವಿಕುಮಾರ್, ಡಿಎಸ್ಪಿ ಕವಿತಾ, ಪಿಐಗಳಾದ ಸುನೀಲ್, ಬಾಲರಾಜ್, ಅವಿನಾಶ್ ರನ್ನು ನೇಮಿಸಲಾಗಿದೆ.
ಬಿಜೆಪಿ ಶಾಸಕ ಮುನಿರತ್ನ ಮೂರು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. 2 ಕೇಸ್ ಗಳಿಂದ ಜಾಮೀನಿನ ಮೇಲೆ ಹೊರ ಬಂದು ಮತ್ತೊಂದರಲ್ಲಿ ಜೈಲು ಪಾಲಾಗಿದ್ದಾರೆ. ಇದರ ನಡುವೆ ಮುನಿರತ್ನ ಬೆಂಬಲಿಗರು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿಬಿಎಂಪಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಹಾಗೂ ದಲಿತ ಮುಖಂಡರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮುನಿರತ್ನ ಬೆಂಬಲಿಗರ ಬೆದರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಪ್ರಕರಣದ ತನಿಖೆ ವೇಗಪಡೆದುಕೊಂಡಿದೆ.




