ಧಾರವಾಡ: ಮಾನವ ಕುಲದ ಆರೋಗ್ಯಕರ ಬದುಕಿಗೆ ಆಸರೆ ನೀಡಿ, ಪೋಷಿಸಿ, ಬೆಳೆಸುವ ಭೂಮಿ, ನೀರು ಸಸ್ಯಕಾಶಿ ಸೇರಿದಂತೆ ಎಲ್ಲ ರೀತಿಯ ಪರಿಸರದ ಬಗ್ಗೆ ಪ್ರೀತಿ, ಅಭಿಮಾನಗಳನ್ನು ಮಕ್ಕಳಲ್ಲಿ ಶಾಲಾ ಹಂತದಲ್ಲಿಯೇ ಬೆಳೆಸಬೇಕು. ಎಲ್ಲದಕ್ಕೂ ಮೀಗಿಲಾಗಿ ಪ್ರತಿ ಮಗುವಿನಲ್ಲಿ ನಾಗರಿಕ ಪ್ರಜ್ಞೆ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು, ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದರು.
ಇಂದಿನ ದಿನಗಳಲ್ಲಿ, ಪರಿಸರದ ಬಗ್ಗೆ ಕಾಳಜಿ, ಪರಿಸರ ಪ್ರಜ್ಞೆ ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ. ಪರಿಸರ ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು. ಏಕಬಳಕೆ ಪ್ಲಾಸ್ಟಿಕ್ ಬಳಸಲು ಜನರಲ್ಲಿ ಜಾಗೃತಿ ಮೂಡಿಸಬೇಕು. ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸದಂತೆ ಎಲ್ಲೆಡೆ ಜನಜಾಗೃತಿ ಕಾರ್ಯ ಮಾಡಬೇಕು ಎಂದರು.
ಭೂಮಿಯ ಮಣ್ಣು, ನೀರು, ಗಾಳಿ ಮತ್ತು ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಮಣ್ಣು, ನೀರು, ಗಾಳಿ ಆರೋಗ್ಯವಾಗಿದ್ದರೆ, ನಾವು ಆರೋಗ್ಯವಾಗಿರುತ್ತೇವೆ. ಅವು ಮಲೀನವಾಗದಂತೆ ನಾವೇಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಮನುಷ್ಯನ ಸ್ವಾರ್ಥಕ್ಕೆ ನೈಸರ್ಗಿಕ ಸಂಪನ್ಮೂಲಗಳು ಅತೀಯಾದ ಬಳಕೆ ಆಗುತ್ತಿವೆ. ಅರಣ್ಯ ನಾಶ ತಡೆಗಟ್ಟಬೇಕು. ಹೆಚ್ಚು ಸಸಿಗಳನ್ನು ನೆಡಬೇಕು. ಪರಿಸರದ ಸಮತೋಲನ ಕಾಪಾಡಬೇಕು ಎಂದರು.
ಪ್ರತಿ ಮನೆಯಲ್ಲಿ ಹಬ್ಬಹರಿದಿನಗಳು, ಹುಟ್ಟುಹಬ್ಬದ ದಿನಗಳು, ಕುಟುಂಬ ಕಾರ್ಯಕ್ರಮಗಳ ದಿನಗಳಂದು ಒಂದು ಸಸಿ ನೆಡುವ ಪರಂಪರೆ ಆರಂಭಿಸಬೇಕು ಎಂದರು.
ಅರಣ್ಯ ಇಲಾಖೆಯಿಂದ ಕಳೆದ 2024 ನೇ ಸಾಲಿನಲ್ಲಿ 129 ಕಿ.ಮೀ ಪ್ರದೇಶದಲ್ಲಿ 42,886 ಸಸಿಗಳನ್ನು ನೆಡಲಾಗಿದೆ. 1,18,000 ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಮಳೆಗಾಲದಲ್ಲಿ 762.5 ಹೆಕ್ಟೆರ್ ಪ್ರದೇಶದಲ್ಲಿ 2,67,574 ಸಸಿಗಳನ್ನು ನೆಡುವ ಮತ್ತು 239.826 ಹೆಕ್ಟೆರ ಅರಣ್ಯೇತರ ಪ್ರದೇಶದಲ್ಲಿ 86,800 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರಿಗೆ ವಿತರಿಸಲು 1,05,967 ಸಸಿಗಳನ್ನು ಸಿದ್ದಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ್ ಕರಿಕಟ್ಟಿ ಅವರು ಸ್ವಾಗತಿಸಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಚ್.ನಾಯಕ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ದ ಜಿಲ್ಲಾ ಪದಾಧಿಕಾರಿಗಳಾದ ವಿ.ವಿ.ಕಟ್ಟಿ, ಬಸವರಾಜ ಕಡಕೋಳ, ಭಾಗೀರತಿ ತಲಕಾಂಬಕರ್, ಎಸ್.ಎನ್.ಸಾವಳಗಿ, ಎಂ.ವಿ. ಅಡಿವೆರ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಎಸ್.ಎಂ.ಹುಡೇದಮನಿ, ಡಾ.ರೇಣುಕಾ ಅಮಲಜೇರಿ. ಎಸ್.ಎನ್.ಪೂಜಾರ್ ಸೇರಿದಂತೆ ವಿವಿಧ ಅಧಿಕಾರಿಗಳು, ವಿವಿಧ ಶಾಲೆಗಳು ವಿದ್ಯಾರ್ಥಿಗಳು ಹಾಜರಿದ್ದರು.




