ಚಿತ್ರದುರ್ಗ: ಸಂವಿಧಾನ ಸುಡುವ ಮಾತನಾಡುತ್ತಿರುವ ಸಂದರ್ಭದಲ್ಲಿ ಧಮ್ಮ ಕೇಂದ್ರದಲ್ಲಿ ಸಂವಿಧಾನದ ಪೀಠಿಕೆ ಮೇಲೆ ರಂಗ ಪ್ರವೇಶವೊಂದನ್ನು ನಡೆಸುವುದು ವಿಶೇಷವೇ ಸರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ಡಾ.ಬಿ.ಎಂ.ಗುರುನಾಥ್ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಧಮ್ಮ ಸಾಂಸ್ಕೃತಿಕ ಕೇಂದ್ರ, ವಿಮುಕ್ತಿ ವಿದ್ಯಾ ಸಂಸ್ಥೆ ಚಿತ್ರದುರ್ಗ, ಕಿಶೋರಿಯರ ಪಾರ್ಟಿಮೆಂಟ್ ಇವರ ವತಿಯಿಂದ ಇಲ್ಲಿನ ಧಮ್ಮ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿಶೋರಿಯರಿಗೆ ರಂಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಸಂವಿಧಾನದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅರ್ಥಮಾಡಿಕೊಳ್ಳುವುದು ಇಂದಿನ ಅಗತ್ಯವಿದೆ. ಆದ್ದರಿಂದ ಧಮ್ಮ ಕೇಂದ್ರದ ಮುಖ್ಯಸ್ಥರ ಕಾರ್ಯಾ ಪ್ರಶಂಸನೀಯ ಎಂದರು.
ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸೆಪ್ಖರ್ ಮಂಜುನಾಥ್ ಮಾತನಾಡಿ, ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ನಾಟಕವನ್ನು ಪ್ರದರ್ಶನ ಮಾಡುವುದು ಇಂದಿನ ತುರ್ತು ಎಂದರು.
ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಕಿಶೋರಿಯರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಒಂದು ಅವಕಾಶವನ್ನು ಧಮ್ಮ ಕೇಂದ್ರ ಕಲ್ಪಿಸಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆಯಿದ್ದು, ಅದನ್ನು ಬಳಸಿಕೊಳ್ಳುವುದು ರೂಢಿಸಿಕೊಳ್ಳಬೇಕು ಎಂದರು.
ಟಿವಿ ಮಾಧ್ಯಮಾದಲ್ಲಿ ಚಿತ್ರದುರ್ಗ ಜಿಲ್ಲೆಯ ಹಲವು ಜನ ಪ್ರತಿಭಾನ್ವಿತರು ಅವಕಾಶ ಪಡೆದುಕೊಂಡಿರುವ ಸಮಯದಲ್ಲಿ ಗ್ರಾಮೀಣ ಮಕ್ಕಳು ಸಹ ತಮ್ಮ ಪ್ರತಿಭೆಯಿಂದ ಕಲೆಯನ್ನು ಬೆಳೆಸಿಕೊಂಡರೆ ಅತ್ಯುತ್ತಮ ಬೆಳವಣಿಗೆ ಎಂದರು.
ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ ಮಾತನಾಡಿ, ವಿಮುಕ್ತಿ 32 ವರ್ಷಗಳಿಂದ ನಡೆದು ಬಂದ ಹಾದಿಯ ವಿವರಣೆಯನ್ನು ನೀಡಿದರು.
ಬಸವೇಶ್ವರ ವೃದ್ಯಕೀಯ ಕಾಲೇಜಿನ ಅಧ್ಯಾಪಕರಾದ ಡಾ.ಪೂರ್ಣಿಮಾ ಮಾತನಾಡಿ, ಬಾಲಕಿಯರಿಗಾಗಿ ರಂಗ ತರಬೇತಿ ನಡೆಸುತ್ತಿರುವುದು ನಿಜಕ್ಕೂ ಆಸಕ್ತಿದಾಯಕ. ಹಾಗಾಗಿ ತರಬೇತಿ ಸಂದರ್ಭದಲ್ಲೂ ಬಂದು ಭಾಗವಹಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಆರ್.ವಿಶ್ವ ಸಾಗರ್, ಸಂಯೋಜಕ ಅರಣ್ಯ ಸಾಗರ್, ಬೀಬಿಜಾನ್, ನಾಗರತ್ನಮ್ಮ, ಅಲೆಮಾರಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ವಸಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.




