ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೆ, ಮಹಿಳೆಯರಿಗೆ “ಶಕ್ತಿ” ಯೋಜನೆಯ ಉಚಿತ ಬಸ್ ಪ್ರಯಾಣದಿಂದ ರಾಜ್ಯದಲ್ಲಿ ಮೌಢ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೈಚಾರಿಕತೆ ನಶಿಸುತ್ತಿದೆ. ರಜೆ ಹಾಗು ಭಾನುವಾರಗಳಲ್ಲಿ ಪಯಣಿಸುವ ಗಂಡಸರಿಗೆ ನರಕ. ಯಮ ಹಿಂಸೆ. ಉಚಿತ ಬಸ್ ಪ್ರಯಾಣವಾದ್ದರಿಂದ 90% ಮಹಿಳೆಯರು ಅನಗತ್ಯ ದೇವಸ್ಥಾನಗಳಿಗೆ ಹೋಗುತ್ತಾರೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆ ಅವರು ತಮ್ಮನ್ನು ಅಭಿನಂದಿಸಲು ಕಾರಣ ಏನು ಹೇಳಿ? ಅವರ ಬೊಕ್ಕಸಕ್ಕೆ ದಿನವೂ ಲಕ್ಷಲಕ್ಷ ಹಣ ಹರಿದು ಬರುತ್ತಿದೆ. ತಮಗೆ ಧನ್ಯವಾದ ಹೇಳಲೇಬೇಕು ಅಲ್ಲವೆ?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈಗ ಸೌಜನ್ಯ ಕೊಲೆ ಪ್ರಕರಣದಿಂದ ಅವರ ಪಾಪದ ಕೊಡ ತುಂಬಿದೆ. ಯೂಟ್ಯೂಬರ್ ಸಮೀರನ ವಾಸ್ತವದ ಮಾಹಿತಿಯ ವಿಡಿಯೋದಿಂದ ಜನರಲ್ಲಿ ಪ್ರಜ್ಞೆ ಮೂಡುತ್ತಿದೆ. ಸಮೀರನ ವಿರುದ್ಧದ ಬಳ್ಳಾರಿ ಪೊಲೀಸರ ಕಳ್ಳಾಟದ ಸುಳ್ಳು ದೂರನ್ನು ಕೋರ್ಟಿನಲ್ಲಿ ನ್ಯಾಯಾಧೀಶರು ಹೊಸಕಿಹಾಕಿದ್ದಾರೆ. ಹೀಗಿದ್ದರೂ ಅಂಧ ಭಕ್ತ 99% ಮಹಿಳೆಯರು ವಿರೇಂದ್ರ ಹೆಗ್ಗಡೆ ಕುಟುಂಬದ ಆಸ್ತಿ ಆಗಿರೋ ಮಂಜುನಾಥ ಸ್ವಾಮಿ ಬೊಕ್ಕಸ ತುಂಬುತ್ತಿದ್ದಾರೆ. (ಜೈನ ಧರ್ಮಕ್ಕು, ಹಿಂದೂ ಹೆಸರಿನ ಮಂಜುನಾಥನಿಗೂ ಯಾವ ಸಂಬಂಧವೋ ಇತಿಹಾಸಕಾರರು ಹೇಳಬೇಕು!)
ಮಾನ್ಯ ಕಾಂಗ್ರೆಸ್ ಮುಖಂಡರೆ, ಧರ್ಮಸ್ಥಳ ಬಿಟ್ಟುಬಿಡಿ, ರಾಜ್ಯದ ಹೆಸರಾಂತ 90% ದೇವಸ್ಥಾನಗಳು ನಿಮ್ಮ ಬಿಟ್ಟಿ ಭಾಗ್ಯದ ಬಸ್ ಪ್ರಯಾಣದಿಂದ ದಿನವೂ ತಿಜೋರಿ ತುಂಬಿಕೊಳ್ಳುತ್ತಿವೆ. ಇದರಿಂದ ಸರ್ಕಾರಕ್ಕೇನಾದರೂ ಲಾಭ ಆಗಿದೆಯೆ? ಯಾವನೋ ಶ್ರೀಮಂತನಾಗಲು ಯಾಕ್ರಿ ಹಡಬಿಟ್ಟಿ ಭಾಗ್ಯ ಕೊಟ್ರಿ?
ನಾನು ಸಾಮಾನ್ಯ KSRTC ಬಸ್ಸಲ್ಲಿ ದೂರ ಪ್ರಯಾಣ ಮಾಡುವಾಗೆಲ್ಲ ಕಣ್ಣಲ್ಲಿ ನೀರು ಬರಿಸಿಕೊಂಡಿದ್ದೇನೆ. ರಾತ್ರಿಯೆಲ್ಲಾ ಅಕ್ಷರಶಹಾ ನಿಂತು ಪ್ರಯಾಣ ಮಾಡಿದ್ದೇನೆ. ಫುಟ್ ಬೋರ್ಡ್ ಮೇಲೆ ತೂಕಡಿಸುತ್ತ ಹೋಗಿದ್ದೇನೆ. ಹಣಕೊಟ್ಟು ಟಿಕೆಟ್ ಪಡೆದ “ಹಿರಿಯ ನಾಗರಿಕರು”ಗಳಿಗೂ ಸೀಟು ಕೊಡದ ಅಮಾನವೀಯ ಮಹಿಳೆಯರು ಇದ್ದಾರೆ! ಗಂಡಸರ ಸೀಟುಗಳನ್ನು ದಯವಿಟ್ಟು “ಗಂಡಸರಿಗೇ” ಬಿಟ್ಟು ಕೊಡಿ. ಅವರಿಗೇ ಅವನ್ನು ಮೀಸಲಿಡಿ. (ಈ ಬಗ್ಗೆ ಕಂಡಕ್ಟರ್ ಅಸಹಾಯಕರಾಗಿದ್ದಾರೆ!) ಸರ್ಕಾರ ಇತ್ತ ಗಮನಹರಿಸಬೇಕು.
ಕೆಲವು ಧಾರ್ಮಿಕ ಸ್ಥಳಗಳು ದಿನಕ್ಕೆ ಲಕ್ಷ ಲಕ್ಷ, ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಿವೆ. ಮಹಿಳೆಯರಿಗೆ ನಿಮ್ಮ ಉಚಿತ ಪ್ರಯಾಣದ ಟಿಕೆಟ್ ದರದ ಎರಡು, ಹತ್ತುಪಟ್ಟು ಹಣವನ್ನು ಈ ಮಹಿಳೆಯರು ಪುರೋಹಿತರ ತಟ್ಟೆಗೆ ಹಾಕ್ತಾರೆ! ಈಗೀಗ ನಿಮ್ಮ ಸರ್ಕಾರ ಬಂದಮೇಲೆ ಕಳ್ಳರು, ಕೊಲೆಗಡುಕರು ದೇವಸ್ಥಾನದ ಮಾಲೀಕರಾಗಿ, ಪೂಜಾರಿಗಳಾಗಿ ಕೋಟ್ಯಾಧಿಪತಿಗಳಾಗಿದ್ದಾರೆ.
ಮಾನ್ಯ ಮುಂತ್ರಿಗಳೆ, “ಬಿಟ್ಟಿ ಭಾಗ್ಯದಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ನಿಲ್ಲಿಸಿ”. ಲಕ್ಷ, ಎರಡು ಲಕ್ಷ ರೂ. ಸಂಬಳ ಪಡೆವ ಮಹಿಳೆ ಯಾವತ್ತಾದರೂ ಸಿಟಿ ಬಸ್ಸಲ್ಲಿ ₹10 ಕೊಟ್ಟು ಟಿಕೆಟ್ ಪಡೆದದ್ದು ನೋಡಿದ್ದೀರಾ? ಈ ಎಚ್.ಎಂ. ರೇವಣ್ಣ ಹೇಳ್ತಾರೆ: “ಜನಾನೇ ಸ್ವ ಪ್ರೇರಣೆಯಿಂದ ಗ್ಯಾರಂಟಿಗಳನ್ನು ತ್ಯಜಿಸಲಿ!” ಇವರ ಮಾತಿಗೆ ಒಬ್ಬರಾದರೂ ಗ್ಯಾರಂಟಿ ತ್ಯಜಿಸಿದ್ದಾರಾ? ಹೋಗಲಿ, ಕೆಲವು ನಿಯಮಗಳನ್ನಾದರೂ ರೂಪಿಸಿ. ಬಡವರು, ಅಂಗವಿಕಲರು, ವಯೋವೃದ್ಧರಿಗೆ (ಹಿರಿಯ ನಾಗರಿಕರಿಗೆ) ಬೇಕಾದರೆ ಉಚಿತವೋ, ರಿಯಾಯಿತಿಯೋ ಕೊಟ್ಟು ಪಯಣ ಮಾಡಲು ಅವಕಾಶ ಕಲ್ಪಿಸಿ. ಸರ್ಕಾರಕ್ಕೇನು ದಕ್ಕೆ ಆಗೊಲ್ಲ.
ಮತ್ತೊಂದು ಪ್ರಮುಖ ಸಲಹೆ: ದಯವಿಟ್ಟು “200 ಯುನಿಡ್ ಉಚಿತ ವಿದ್ಯುತ್” ಕೊಡುವುದನ್ನು ತತ್ ಕ್ಷಣಕ್ಕೆ ನಿಲ್ಲಿಸಿ. ಯಾರೇನು ನಿಮ್ಮನ್ನ ಉಚಿತ ವಿದ್ಯುತ್ ಕೊಡಿ ಅಂತ ಕೇಳಿಲ್ಲ. 200 ಯೂನಿಟ್ ಗೆ ಹಣ ಕೊಡದಷ್ಟು ಬಡತನ ಜನರಿಗಿಲ್ಲ. ಉಳಿದ ಉಚಿತ ಕೊಡುಗೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡೊಲ್ಲ. ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.
ಒಂದು ತಿಳಕೊಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದು 100% ನಿಮ್ಮ ಉಚಿತ 5 ಗ್ಯಾರಂಟಿ ಕೊಡುಗೆಯಿಂದ ಅಲ್ಲ. ಬಿಜೆಪಿಯ ಮೂರ್ಖರು ಮಾಡಿಕೊಂಡ ನೂರಾರು ಯಡವಟ್ಟುಗಳು ಕಾರಣ. ಜನ ಅವರ ಕೋಮುವಾದ, ಭ್ರಷ್ಟಾಚಾರ, ತರತಮಗಳಿಂದ, RSSನ ಹಿಂದುತ್ವದ ಹಿಡಿತದಿಂದ ರೋಸಿಹೋಗಿದ್ದರು. ಹೀಗಾಗಿ ರಾಜ್ಯದಲ್ಲಿ ಬದಲಾವಣೆ ತಂದರು. (ಈ ಬಗ್ಗೆ ನಿಖರ ಕಾರಣಗಳನ್ನು ಕೊಟ್ಟು ಹಿಂದೆಯೇ ಬರೆದಿರುವೆ,)
ನೀವು ಅಧಿಕಾರಕ್ಕೆ ಬರಲು ಜನ ಸಮೂಹವನ್ನು ಎಚ್ಚರಿಸಲು, ಪ್ರಜ್ಞಾವಂತರನ್ನಾಗಿ ಮಾಡಲು “ನನ್ನಂಥ ಅನೇಕ ಮಿತ್ರರದೂ” ಹನಿ ಪಾಲಿದೆ. ಆದರೆ, ನಾನು ನಿಮ್ಮ ಸರ್ಕಾರದಲ್ಲಿ ಯಾವುದೇ ಸ್ಥಾನಕ್ಕೆ ಕೂರಲು (ಅರ್ಹತೆ ಇದ್ದರೂ) “ಜಾತಿ” ಅಡ್ಡಬಂದ ಕಾರಣಕ್ಕೆ ತಿರಸ್ಕೃತನಾಗಿದ್ದೇನೆ! (ಇದು ಮಾನ್ಯ ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತಿದೆ!) ಜೊತೆಗೆ ನನ್ನ ನೇರ, ನಿಷ್ಠುರ ಮಾತುಗಳೂ ನನಗೆ ಮುಳುವಾಗಿವೆ. ಹಾಗೆಂದು ನಾನು ಎಲ್ಲರೊಂದಿಗೂ ರಾಜಿ ಮಾಡಿಕೊಂಡು ಬದುಕಲಾರೆ.
– ಆರ್ ಜಿ ಹಳ್ಳಿ ನಾಗರಾಜ, ಪತ್ರಕರ್ತ – ಸಾಹಿತಿ, ಪ್ರಕಾಶಕ




