ಬೆಂಗಳೂರು: ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಯೋಜನೆ ಜಾರಿಗೆ ತಂದಿರುವ ರಾಜ್ಯಗಳಿಗೆ ಭೇಟಿ ನೀಡಿ ಅದರ ಸಾಧಕ-ಭಾದಕಗಳನ್ನು ಪರಿಶೀಲನೆ ನಡೆಸಿ ಇನ್ನೆರಡು ತಿಂಗಳೊಳಗೆ ಆಂಧ್ರಪ್ರದೇಶದಲ್ಲಿ ಜಾರಿ ತರಲು ತೀರ್ಮಾನ ಕೈಗೊಳ್ಳುವುದು ಎಂದು ಅಲ್ಲಿನ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯದಲ್ಲಿ ಜನಪ್ರಿಯಗೊಂಡಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಆಂಧ್ರಪ್ರದೇಶದ ಗೃಹ ಸಚಿವೆ ಅನಿತಾ ಅವರ ನಿಯೋಗದಲ್ಲಿ ಬಂದಿದ್ದ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಶಾಂತಿನಗರದ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಕರ್ನಾಟಕ ರಾಜ್ಯ ಸಾರಿಗೆ ನಿಗಮ ಶಕ್ತಿ ಯೋಜನೆ ಅನುಷ್ಠಾನದ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದೇವೆ. ಇಲ್ಲಿನ ಸರ್ಕಾರ ಅನುಸರಿಸಿದ ಕ್ರಮಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಯೋಜನೆ ಜಾರಿ ತಂದಿರುವ ರಾಜ್ಯಗಳಲ್ಲಿ ಭೇಟಿ ನೀಡಿ ಸಾಧಕ-ಭಾದಕಗಳ ಬಗ್ಗೆ ತಿಳಿದುಕೊಂಡು ಇನ್ನೆರಡು ತಿಂಗಳೊಳಗಾಗಿ ಆಂಧ್ರದಲ್ಲಿ ಯೋಜನೆಯನ್ನು ಜಾರಿ ತರುತ್ತೇವೆ ಎಂದರು.
ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಯೋಜನೆ ಜಾರಿಗೆ ತರುವ ಸಂಬಂಧ ನಿಯೋಗವು ಶಕ್ತಿ ಯೋಜನೆಗಾಗಿ ಮೀಸಲಿರಿಸಿದ ವೆಚ್ಚ ಹಾಗೂ ಬಳಕೆ, ಸಾರಿಗೆ ವ್ಯವಸ್ಥೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯಿತು.
ಇದಕ್ಕೂ ಮುನ್ನ ನಿಯೋಗ ಶಕ್ತಿ ಯೋಜನೆ ಬಗ್ಗೆ ಅರಿಯಲು ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಪ್ರತಿಕ್ರಿಯೆ ಪಡೆಯಿತು. ಯೋಜನೆಯಿಂದಾಗಿ ಎಷ್ಟು ಉಪಯೋಗವಾಗಿದೆ? ಹೇಗೆ ಉಪಯೋಗವಾಗಿದೆ? ಎಂಬುದರ ಪ್ರಶ್ನೆಗೆ ಮಹಿಳಾ ಪ್ರಯಾಣಿಕರೊಬ್ಬರು ಉತ್ತರಿಸಿ, ಶಕ್ತಿ ಯೋಜನೆಯಿಂದಾಗಿ ನಮಗೆ ಅನುಕೂಲವಾಗಿದೆ. ಪ್ರತಿತಿಂಗಳು 1,200 ರೂಪಾಯಿ ಬಸ್ ಪಾಸ್ಗೆ ವೆಚ್ಚವಾಗುತ್ತಿತ್ತು. ಇದೀಗ ಉಚಿತ ಬಸ್ ಪ್ರಯಾಣದಿಂದಾಗಿ ನಮಗೆ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಮಲಿಂಗಾರೆಡ್ಡಿ ಸಲಹೆ: ಶಕ್ತಿ ಯೋಜನೆ ಜಾರಿಯ ಸಾಧಕ-ಬಾಧಕಗಳ ಬಗ್ಗೆ ತಿಳಿಸಲಾಗಿದೆ. ರಾಜ್ಯದಲ್ಲಿ ಆಧಾರ್ ಕಾರ್ಡ್ ತೋರಿಸಿ ಪ್ರಯಾಣದಂತೆ ಆಂಧ್ರದಲ್ಲಿಯೂ ಪ್ರತ್ಯೇಕ ಸ್ಮಾರ್ಟ್ ಕಾಡ್ ವಿತರಿಸಬಹುದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ಯೋಜನೆ ಜಾರಿಗೆ ಬಂದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ನಲ್ಲಿ ಜನ ಸಂಚರಿಸುತ್ತಾರೆ. ಹೀಗಾಗಿ, ಯೋಜನೆ ಜಾರಿಗೂ ಮುನ್ನ ಬಸ್ ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗುತ್ತದೆ. ಹಳೆ ಬಸ್ ಗಳ ನವೀಕರಣ ಹಾಗೂ ನಿರ್ವಹಣೆ ಬಗ್ಗೆ ಗಮನಕೊಡುವಂತೆ ನಿಯೋಗಕ್ಕೆ ಸಲಹೆ ನೀಡಿದ್ದೇನೆ ಎಂದರು.




