ಲಂಚಕೋರರು ಸ್ವದೇಶಿಯರನ್ನೇ ಸುಲಿಗೆ ಮಾಡುವ ಜನದ್ರೋಹಿಗಳು, ಸಾಮಾಜಿಕ ನ್ಯಾಯದ ಶತ್ರುಗಳು, ಭ್ರಷ್ಟರ ಅಡಿಯಾಳುಗಳು, ದುಷ್ಟವ್ಯವಸ್ಥೆಯ ರಕ್ಷಕರು, ನೆಲದ ಕಾನೂನನ್ನು ಪಾಲಿಸದೆ ಮತ್ತು ಜಾರಿ ಮಾಡದೆ ಸಂವಿಧಾನವನ್ನು ದುರ್ಬಲ ಮಾಡುವವರು, ಭ್ರಷ್ಟ ರಾಜಕಾರಣಿಗಳಿಗೆ ಬಲ ತುಂಬುವವರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಇಂತಹ ಅಪಾಯಕಾರಿ ವ್ಯಕ್ತಿಗಳ ವಿರುದ್ಧ ಮಾತನಾಡುವ ಮತ್ತು ವಿರೋಧಿಸುವ ಮನಸ್ಥಿತಿಯನ್ನು ಸಮಾಜದಲ್ಲಿ ನಿರ್ಮಿಸಬೇಕು ಮತ್ತು ಆ ಮೂಲಕ ಬಡವರ ಮತ್ತು ದುರ್ಬಲ ವರ್ಗದವರಿಗೆ ಸಿಗಬೇಕಾದ ಸೌಲಭ್ಯಗಳು ಮತ್ತು ಹಕ್ಕುಗಳು ಅಬಾಧಿತವಾಗಿ ಸಿಗಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ಹೊಸ ಅಭಿಯಾನ ಆರಂಭಿಸುತ್ತಿದೆ. ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು.
ಭ್ರಷ್ಟರನ್ನು ಸಾರ್ವಜನಿಕವಾಗಿ ಪ್ರಶ್ನಿಸುವುದು, ಸನ್ಮಾನ ಮಾಡುವ ಹೆಸರಿನಲ್ಲಿ ಅವಮಾನಿಸುವುದು, ಲೋಕಾಯುಕ್ತಕ್ಕೆ ದೂರು ನೀಡುವುದು, ಲಂಚಕೋರರು ನೌಕರಿ ಕಳೆದುಕೊಳ್ಳುವಂತೆ ಮಾಡುವುದೂ ಸೇರಿದಂತೆ ಹಲವು ರೀತಿಯ ಜನಚೈತನ್ಯ ಕೆಲಸಗಳನ್ನು ಇಂದು ನಾಡಪ್ರೇಮಿಗಳು ಮಾಡಬೇಕಿದೆ. ಯಾರು ಮಾಡಲಿ ಬಿಡಲಿ, KRS ಸೈನಿಕರು ಇದನ್ನು ದೇಶವನ್ನು ಪ್ರೀತಿಸುವ ಪ್ರಜಾಪ್ರಭುತ್ವವಾದಿ ಜನತೆಯ ಸಹಯೋಗದೊಂದಿಗೆ ಮಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ, ನಿಮ್ಮ ನ್ಯಾಯಬದ್ಧ ಕೆಲಸಕ್ಕೆ ಯಾವುದೇ ಭ್ರಷ್ಟ ಅಧಿಕಾರಿ ನಿಮ್ಮಿಂದ ಖುದ್ದಾಗಿ ಲಂಚ ಕೇಳಿದ್ದರೆ, ಅಥವ ನೀವು ಈಗಾಗಲೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡಿದ್ದರೆ ಮತ್ತು ಅದನ್ನು ಸಾರ್ವಜನಿಕವಾಗಿ ಹೇಳುವ ಧೈರ್ಯವನ್ನು ನೀವು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, 99864-99551 ಸಂಖ್ಯೆಗೆ ಕರೆ/WhatsApp ಮಾಡಿ ಮಾಹಿತಿ ನೀಡಿ.
ನೀವು ನೀಡುವ ಮಾಹಿತಿಯನ್ನು ಸಾರ್ವಜನಿಕವಾಗಿ ಹೇಳಲು ಸಿದ್ದರಿದ್ದವರು ಮಾತ್ರ ಮೇಲಿನ ಸಂಖ್ಯೆಗೆ ಕರೆ ಮಾಡಿ. ಲಂಚ ಕೇಳಿದ ಅಧಿಕಾರಿಗೆ ಇನ್ನೂ ಲಂಚ ಕೊಟ್ಟಿಲ್ಲ ಎಂದಾದರೆ ಮತ್ತು ಆ ವ್ಯಕ್ತಿಯನ್ನು ಲೋಕಾಯುಕ್ತದ ಬಲೆಗೆ ಬೀಳಿಸಿ ಜೈಲಿಗೆ ತಳ್ಳಲು ಸಾಧ್ಯ ಎಂದಾದರೆ ದಯವಿಟ್ಟು ನಿಮ್ಮ ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ.
ಈ ನಿಟ್ಟಿನಲ್ಲಿ ನಿಮಗೆ ಯಾವುದೇ ಸಲಹೆ ಅಥವ ಸಹಾಯ ಬೇಕಿದ್ದಲ್ಲಿ ದಯವಿಟ್ಟು 88842-77730 ಸಂಖ್ಯೆಗೆ ಕರೆ ಮಾಡಿ. ಅವರು ಗೌಪ್ಯವನ್ನು ಕಾಪಾಡಿಕೊಂಡು ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
ಹಾಗೆಯೇ, ಲಂಚ ತೆಗೆದುಕೊಳ್ಳುತ್ತಿರುವಾಗ “ರೆಡ್ ಹ್ಯಾಂಡ್” ಆಗಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದ ವ್ಯಕ್ತಿ ಮತ್ತೆ ಕೆಲಸಕ್ಕೆ ವಾಪಸಾಗಿರುವ ಸಂಗತಿ ನಿಮ್ಮ ವ್ಯಾಪ್ತಿಯಲ್ಲಿ ನಿಮಗೆ ಖಚಿತವಾಗಿ ಗೊತ್ತಿದ್ದರೆ ದಯವಿಟ್ಟು 99864-99551 ಸಂಖ್ಯೆಗೆ ಕರೆ/WhatsApp ಮಾಡಿ ಮಾಹಿತಿ ನೀಡಿ. ಸಾಧ್ಯವಾದರೆ ಅಂತಹವರಿಗೂ ಸನ್ಮಾನ ಮಾಡೋಣ.
ನೆನಪಿರಲಿ, ಇದೆಲ್ಲವನ್ನೂ ಮಾಡುತ್ತಿರುವುದು ಸಾಮಾಜಿಕ ನ್ಯಾಯದ ಇಂದಿನ ಅತಿದೊಡ್ಡ ಶತ್ರುವಾಗಿರುವ ಭ್ರಷ್ಟಾಚಾರವನ್ನು ನಿಲ್ಲಿಸಲು ಮತ್ತು ತಮ್ಮ ಹಕ್ಕುಗಳಿಗೆ ಹೋರಾಡಲು ಜನರಿಗೆ ಧೈರ್ಯ ಮತ್ತು ಚೈತನ್ಯ ನೀಡಲು, ಜಾಗೃತಿ ಮೂಡಿಸಲು, ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ನಾಗರಿಕರಾಗಲು. ದಯವಿಟ್ಟು ಧೈರ್ಯದಿಂದ ಕೈಜೋಡಿಸಿ. ನಾಡದ್ರೋಹಿ ಭ್ರಷ್ಟರ ವಿರುದ್ಧ ಒಗ್ಗಟ್ಟಾಗಿ, ಹೋರಾಡಿ.
ಭ್ರಷ್ಟಾಚಾರವನ್ನು ತಡೆಯಬೇಕಾದ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವಾಗ ಮತ್ತು ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ, ಭ್ರಷ್ಟಾಚಾರ ದೊಡ್ಡ ವಿಷಯವೇ ಅಲ್ಲ ಎಂದು ಭ್ರಷ್ಟರ ಪರ ನಿಂತು ಕೆಲವು ಬುದ್ಧಿಜೀವಿ ಮತ್ತು ಚಿಂತಕರು ಜಾತಿಯ ಆಯಾಮ ತಂದು ಅಪಮೌಲ್ಯಗಳನ್ನು ಹರಡುತ್ತಿರುವಾಗ ನಾವೆಲ್ಲರೂ ಹಲವು ರೀತಿ ಮತ್ತು ಆಯಾಮಗಳಲ್ಲಿ ಸಮಾಜದಲ್ಲಿಯ ಅನೀತಿ ಮತ್ತು ಅಕ್ರಮಗಳನ್ನು ವಿರೋಧಿಸಬೇಕಿದೆ, ಹೋರಾಟ ಮಾಡಿ ಗೆಲ್ಲಬೇಕಿದೆ. “Eternal vigilance is the price of liberty.”
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
– ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ




