ಲೋಕಾಯುಕ್ತ ಸಂಸ್ಥೆಯ ವಿರುದ್ಧ ಧರಣಿ, ಪ್ರತಿಭಟನೆ, ಮುತ್ತಿಗೆ: ಕರ್ನಾಟಕ ರಾಷ್ಟ್ರ ಸಮಿತಿ

3 years ago

ಭ್ರಷ್ಟ, ಅದಕ್ಷ, ನಾಲಾಯಕ್ ಲೋಕಾಯುಕ್ತ ಸಂಸ್ಥೆಯ ವಿರುದ್ಧ ಧರಣಿ, ಪ್ರತಿಭಟನೆ, ಮುತ್ತಿಗೆ: ಕರ್ನಾಟಕ ರಾಷ್ಟ್ರ ಸಮಿತಿ

ಬೆಂಗಳೂರು: ಭ್ರಷ್ಟ ಮಾಡಾಳ್ ವಿರೂಪಾಕ್ಷನನ್ನು ಬಂಧಿಸದೆ ಕಾಲಹರಣ ಮಾಡಿ ಆತ ಜಾಮೀನು ಪಡೆಯಲು ಸಹಕರಿಸಿದ ಭ್ರಷ್ಟ, ಅದಕ್ಷ, ನಾಲಾಯಕ್ ಲೋಕಾಯುಕ್ತ ಸಂಸ್ಥೆಯ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದಿಂದ ಲೋಕಾಯುಕ್ತ ಸಂಸ್ಥೆಯ ವಿರುದ್ಧ ಧರಣಿ, ಪ್ರತಿಭಟನೆ, ಮುತ್ತಿಗೆ ಹಾಕಲು ಕರ್ನಾಟಕ ರಾಷ್ಟ್ರ ಸಮಿತಿ ನಿರ್ಧರಿಸಿದೆ.

ಇಂದು, ಸೋಮವಾರ, 13-03-2023,
ಬೆಳಗ್ಗೆ 10:30 ರಿಂದ 12:30 ವರೆಗೆ
ಬೆಂಗಳೂರಿನ Freedom Park’ನಲ್ಲಿ
ಧರಣಿ/ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 12:30ಕ್ಕೆ ಅಲ್ಲಿಂದ ಪಾದಯಾತ್ರೆಯಲ್ಲಿ ಹೊರಟು ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ.

ಈ ಪ್ರತಿಭಟನೆಯಲ್ಲಿ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಮತ್ತು ಪಕ್ಷದ ಶಿಸ್ತುಬದ್ಧ ಸೈನಿಕರು ಭಾಗವಹಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.

Leave a Reply