ಯಾವ ರೀತಿಯಲ್ಲಿ ಆಂಬುಲೆನ್ಸ್ ಗಳಿಗೆ ಮತ್ತು ವಾಯು ಬ್ರಿಗೇಡ್ ಗಳಿಗೆ ನಿರ್ದಿಷ್ಟವಾದ ಸಂಖ್ಯೆಯನ್ನು ನಿಗದಿಪಡಿಸಿರುತ್ತೀರೋ, ಅದೇ ರೀತಿಯಲ್ಲಿ ಸಂಚಾರ ಪೊಲೀಸರು ಸಹ ಒಂದು ಸಹಾಯವಾಣಿ ಸ್ಥಾಪಿಸಿ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ನಗರದ ಯಾವುದೇ ರಸ್ತೆಯಲ್ಲಿ ವಾಹನಗಳ ಸಾಂಧ್ರತೆ ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾದ ಸಂದರ್ಭದಲ್ಲಿ ಈ ಸಂಖ್ಯೆಗೆ ಸಾರ್ವಜನಿಕರು ದೂರವಾಣಿಯನ್ನು ಮಾಡಿ ಸ್ಥಳದ ವಿಡಿಯೋವನ್ನು ಕಳುಹಿಸಿದ ತಕ್ಷಣ ಸಕಾಲದಲ್ಲಿ ಸಂಚಾರಿ ಪೊಲೀಸರು ಬಂದು ವಾಹನ ಸಂಚಾರದ ತೊಂದರೆಯನ್ನು ನಿವಾರಿಸುವಂತಹ ವ್ಯವಸ್ಥೆಯನ್ನು ಈ ಸಂಖ್ಯೆ ಕಾರ್ಯನಿರ್ವಹಿಸಲಿ.
ಬೆಂಗಳೂರು ನಗರದಲ್ಲಿ ಪ್ರತಿದಿನವೂ ಅನೇಕ ರಸ್ತೆಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಸಣ್ಣಪುಟ್ಟ ರಸ್ತೆಗಳಲ್ಲೂ ಸಹ ವಾಹನದ ದಟ್ಟಣೆ ಹೆಚ್ಚಾಗಿರುತ್ತದೆ. ಕೆಲವು ಬಾರಿ ಅಪಘಾತಗಳು ಸಂಭವಿಸಿದ ಕಾರಣದಿಂದ ಮತ್ತು ವಾಹನಗಳು ಕೆಟ್ಟು ನಿಂತ ಕಾರಣದಿಂದ, ಶಿಸ್ತು ಉಲ್ಲಂಘಿಸಿ ಕೆಲವು ಚಾಲಕರು ವಾಹನಗಳನ್ನು ಚಾಲನೆ ಮಾಡುವುದರಿಂದ, ಇವುಗಳು ಸಂಭವಿಸುತ್ತಿದೆ.
ಈ ಹಿನ್ನೆಲೆಯಲ್ಲಿ ತುರ್ತಾಗಿ ಬಂದು ಸಾರ್ವಜನಿಕರಿಗೆ ನೆರವಾಗಲು ಸಂಚಾರಿ ಪೊಲೀಸರು ಒಂದು ನಿರ್ದಿಷ್ಟವಾದ ಸಂಖ್ಯೆಯನ್ನು ನಿಗದಿಪಡಿಸಿ ಸಾರ್ವಜನಿಕರಿಗೆ ಅನುಕೂಲವನ್ನು ಕಲ್ಪಿಸಿಕೊಡಿ.
– ಕೆ ಎಸ್ ನಾಗರಾಜ್, ಬೆಂಗಳೂರು




