ರಾಜ್ಯದಲ್ಲಿ ಕೆಲವೇ ಕೆಲವು ಮಂತ್ರಿಗಳು ತಮ್ಮ ಇಲಾಖೆಯ ಪ್ರಗತಿ ಮತ್ತು ಹೊಸ ಹೊಸ ಯೋಜನೆಗಳ ಮೂಲಕ ಪ್ರತಿದಿನವೂ ಸುದ್ದಿಯಲ್ಲಿರುತ್ತಾರೆ. ತಮ್ಮ ಮಂತ್ರಿಗಿರಿಯನ್ನ ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ. ತಮಗೆ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಸಾಧನೆಯನ್ನ ಮಾಡುತ್ತಾ, ಜನರ ಹಿತವನ್ನು ಕಾಯುತ್ತಿದ್ದಾರೆ. ಆದರೆ ಕೆಲವು ಮಂತ್ರಿಗಳು ಯಾವ ಇಲಾಖೆಯವಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಜನಸಾಮಾನ್ಯರಿಗೆ ತಿಳಿದಿಲ್ಲ. ಕಾರಣ ಆ ಮಂತ್ರಿಗಳು ಪ್ರತಿದಿನವೂ ಸುದ್ದಿಯಲ್ಲಿರುವುದು ತಮ್ಮ ಇಲಾಖೆಗಳಲ್ಲಿನ ಯೋಜನೆಗಳ ಮೂಲಕ ಅಲ್ಲ ಅಥವಾ ಕಾರ್ಯಕ್ರಮಗಳ ಮೂಲಕ ಅಲ್ಲ, ರಾಜಕಾರಣದ ಮಾತುಗಳ ಮೂಲಕವೇ ಅದರಲ್ಲೂ ವಿಶೇಷವಾಗಿ, ವಿವಾದಾತ್ಮಕವಾದ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿ ಇರುತ್ತಾರೆ. ಇಂತಹ ಹೇಳಿಕೆಗಳು ಮಾಧ್ಯಮದವರಿಗೆ ಆಹಾರವನ್ನ ಒದಗಿಸಿಕೊಡುತ್ತಿದೆ ಹೊರತು, ಇದರಿಂದ ಸರ್ಕಾರದ ವರ್ಚಸ್ಸು ಹಾಳಾಗುತ್ತದೆ ಮತ್ತು ಪಕ್ಷಕ್ಕೂ ಸಹ ಹಿನ್ನಡೆಯಾಗುತ್ತದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇನ್ನು ಮುಂದಾದರೂ ಮಂತ್ರಿಗಳು ತಮ್ಮ ಇಲಾಖೆಯ ಬಗ್ಗೆ ಮಾತನಾಡಲಿ. ಸರ್ಕಾರದ ವ್ಯವಸ್ಥೆಯ ಬಗ್ಗೆ, ಅಧಿಕಾರದ ಪಾಲುದಾರಿಕೆಯ ಬಗ್ಗೆ ಮಾತನಾಡಲು ಪಕ್ಷವಿದೆ ಮತ್ತು ಇದಕ್ಕೆ ಆದಂತಹ ವರಿಷ್ಠರು ಇದ್ದಾರೆ. ಈ ಹಿನ್ನೆಲೆಯಲ್ಲಿ ಮಂತ್ರಿಗಳು ತಮ್ಮತಮ್ಮ ಇಲಾಖೆಯ ವಿಚಾರವನ್ನು ಮಾತನಾಡಿ ಮುಂದಿನ ದಿನಗಳಲ್ಲಿ ತಮ್ಮ ಇಲಾಖೆಯ ಕಾರ್ಯವೈಖರಿ, ಕಾರ್ಯಕ್ರಮಗಳ ಮೂಲಕ ಜನರಿಗೆ ಪರಿಚಿತರಾಗಲಿ.
ಮಾಧ್ಯಮದವರಂತೂ ಕೆಲವು ಮಂತ್ರಿಗಳ ಮಾತುಗಳು ತಮಗೆ ಆಹಾರವಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಇವರನ್ನು ಕಂಡ ಕಡೆಯಲ್ಲೆಲ್ಲಾ ಇವರ ಮುಂದೆ ಮೈಕ್ಗಳನ್ನ ಹಿಡಿಯುತ್ತಾರೆ. ಇದನ್ನು ನೋಡಿದ ತಕ್ಷಣ ಇವರು ಉತ್ಸಾಹದಿಂದ ಮಾತುಗಳನ್ನಾಡಿ ಅನಾವಶ್ಯಕವಾದ ಚರ್ಚೆಗಳಿಗೆ ವಸ್ತುಗಳಾಗುತ್ತಿದ್ದಾರೆ.
ಜನರಿಗೆ ಬೇಕಿರುವುದು ಪ್ರತಿಯೊಬ್ಬ ಮಂತ್ರಿಯ ಇಲಾಖೆಯಿಂದ ಒಂದಷ್ಟು ಒಳ್ಳೆಯ ಕೆಲಸಗಳು, ಒಂದಷ್ಟು ಯೋಜನೆಗಳು ಮತ್ತು ಅವುಗಳ ಅನುಷ್ಠಾನ. ಜನಸಾಮಾನ್ಯರಿಗೆ ಅಧಿಕಾರ ಹಂಚಿಕೆ ಸೂತ್ರಗಳು, ತಾಪತ್ರಯಗಳು, ಬೇಕಿಲ್ಲದ ವಿಚಾರಗಳಾಗಿರುತ್ತದೆ.
ಜನಸಾಮಾನ್ಯರು ನಂಬಿಕೆಯಿಂದ ಕೊಟ್ಟಿರುವಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೆನಪಿನಲ್ಲಿ ಉಳಿಯುವಂತೆ ಒಂದಷ್ಟು ಕಾರ್ಯವನ್ನು ಮಾಡಿ. ಮಾಡಲು ಮಂತ್ರಿಗಳಿಗೆ ಸಾಕಷ್ಟು ಕೆಲಸಗಳಿವೆ. ಸಮಸ್ಯೆಗಳು ಸಾಲು ಸಾಲು ಪ್ರತಿದಿನವೂ ಜನರನ್ನ ಬಾಧಿಸುತ್ತಿದೆ. ರಾಜಕಾರಣದ ಮಾತು ಸಾಕು ಮಾಡಿ. ಜನರ ಬದುಕಿನ ಬಗ್ಗೆ ಚಿಂತಿಸಿ.
– ಕೆ ಎಸ್ ನಾಗರಾಜ್, ಬೆಂಗಳೂರು




