ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವ ದಾಲ್ಮಿಯಾ ಸಿಮೆಂಟ್

1 year ago

ದಾಲ್ಮಿಯಾ ಸಿಮೆಂಟ್ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ: ಪ್ರಭಾತ್ ಕುಮಾರ್ ಸಿಂಗ್
  
ಬೆಳಗಾವಿ: ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯು CSR ಅಡಿಯಿಲ್ಲಿ ಮಹಿಳೆಯರ  ಜೀವನೋಪಾಯ ಅಭಿವೃದ್ಧಿಪಡಿಸಲು ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ 4 ಲಕ್ಷ ರೂಪಾಯಿಗಳ ಚೆಕ್ ವಿತರಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ತಿಸುತ್ತಿದೆ.

ಇದರೊಂದಿಗೆ ದಾಲ್ಮಿಯಾ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಿಗೆ 70 ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಕಾರ್ಖಾನೆಯ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್ ಮಾತನಾಡಿ, ಫಲಾನುಭವಿಗಳು ತಮ್ಮ ಕುಟುಂಬದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದರು.

ಸ್ಪೂರ್ತಿ ಲೇಡಿಸ ಕ್ಲಬ್ ನ ಅಧ್ಯಕ್ಷೆ ಮಂದನಾಸಿಂಗ್ ಮಾತನಾಡಿ, ಮಹಿಳೆಯರ ಸಬಲೀಕರಣವು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ಅವರ ಮಕ್ಕಳ ಶಿಕ್ಷಣವನ್ನು ಬಲಪಡಿಸಲು ಅನುವು ಮಾಡಿಕೊಡುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಬೆಳಗಾವಿ ಮುಖ್ಯಸ್ಥ ಮನೀಶ್ ಕುಮಾರ್, ಮಹೇಶ್ವರಿ ತಾಂತ್ರಿಕ ವಿಭಾಗದ ಮುಖ್ಯಸ್ಥ ಅವದೇಶ ಕುಮಾರ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅರವಿಂದಸಿಂಗ್, ಹಣಕಾಸು ವಿಭಾಗದ ಮುಖ್ಯಸ್ಥ ಜಯಶಂಕರ್ ತಿವಾರಿ, ಸುರಕ್ಷತಾ ವಿಭಾಗದ ಮುಖ್ಯಸ್ಥ ಸಮಿರ ಕುಮಾರ ಅಗರವಾಲ್, ಸಿವಿಲ್ ವಿಭಾಗದ ಮುಖ್ಯಸ್ಥ ಗೊಲಪ್ಪನಾತ, ಪ್ರೋಸೆಸ್ ವಿಭಾಗದ ಮುಖ್ಯಸ್ಥರು ವಿಜಯಕುಮಾರ ತಿವಾರಿ, ಪ್ಯಾಕಿಂಗ್ ವಿಭಾಗದ ಮುಖ್ಯಸ್ಥ, ಅಜಿತ ಸಿಂಗ್ ವಿದ್ಯುತ ವಿಭಾಗದ ಮುಖ್ಯಸ್ಥ ಡಾ ನಿಲಕಂಟಗೌಡ, ವೈದ್ಯಾಧಿಕಾರಿಗಳು, ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ವರ್ಗ, CSR ಸಿಬ್ಬಂದಿ ವರ್ಗ, ಆಡಳಿತ ವಿಭಾಗ ಹಾಗು ಇನ್ನಿತರೆ ಅಧಿಕಾರಿ ವರ್ಗದವರು, ಸ್ಪೂರ್ತಿ ಲೇಡಿಸ್ ಕ್ಲಬನ ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮದ ಜನ ಭಾಗವಹಿಸಿದರು.

Leave a Reply