ಸಂತ ಶಿಶುನಾಳ ಷರೀಫ್ ಸೌಹಾರ್ದತೆಯ ಸಂಕೇತ

2 years ago

ಚಿತ್ರದುರ್ಗದ ಮುಸ್ಲಿಂ ಕಲ್ಚರಲ್  ಅಕಾಡೆಮಿ ವತಿಯಿಂದ ತತ್ವ ಪದಗಳ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗುರುಗೋವಿಂದ ಭಟ್ ಮತ್ತು ಶಿಶುನಾಳ ಷರೀಫ್ ಅವರು ನಾಡಿಗೆ ನೀಡಿರುವ ಸಂದೇಶವು ಮನುಷ್ಯತ್ವ, ಮಾನವೀಯತೆಗಳನ್ನು ಮೃೆಗೊಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಮತ್ತು  ಸಹಬಾಳ್ವೆಯಿಂದ ಜೀವಿಸುವ ಸಂದೇಶವು ಇಂದಿಗೆ ಪ್ರಸ್ತುತ. ಜೀವನ ತತ್ವಗಳನ್ನು  ತಮ್ಮ ಸುತ್ತಮುತ್ತಲಿನ ಜನರಲ್ಲಿ ಬೆಳೆಸುವ ಪ್ರಯತ್ನವೂ ಇಂದಿನ ಪೀಳಿಗೆಯ ಜನರಿಗೂ ದಾರಿದೀಪ.

ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಕೆಲಸ ಮಾಡಿರುವ ಗೋವಿಂದಭಟ್ ಮತ್ತು ಶಿಶುನಾಳ ಷರೀಫ್ ಅವರು ಜನಸಾಮಾನ್ಯರಿಗೆ ಕೋಮು ಸಾಮರಸ್ಯದ ಪಾಠ ಹೇಳಿದ್ದು, ಸೌಹಾರ್ದತೆ ಹಾಗೂ ಸಹಬಾಳ್ವೆಯ ಜೀವನ ನಡೆಸಲು ಮಾರ್ಗದರ್ಶನ ಮಾಡಿರುವುದು ಇಂದಿನ ಕಾಲಕ್ಕೂ ಸರಿಯಾಗಿದೆ.

ತತ್ವ ಪದಗಳ ಮೂಲಕ ಜೀವನ ಮೌಲ್ಯಗಳನ್ನು ಸಾರಿದ ಷರೀಫ್ ಅವರು ತನ್ನ ಗುರುವಿನ ಮಾರ್ಗದರ್ಶನವನ್ನು  ಇಡೀ ಸಮಾಜಕ್ಕೆ ಬಿತ್ತುವ ಮುಖಾಂತರ ಸಮಾಜವನ್ನು  ಸಮಾನತೆಯಿಂದ ನೋಡುವ ಪರಿಪಾಠವನ್ನು ಬೆಳೆಸಿದರು.

ಪ್ರಸ್ತುತ ಕಾಲಘಟ್ಟದಲ್ಲಿ,ಮನುಷ್ಯ ಮನುಷ್ಯರ ಮಧ್ಯೆ ವಿಷಬೀಜ ಬಿತ್ತುವ ಮೂಲಕ ದ್ವೇಷದ ಬೆಳೆ ಪಡೆಯುವ ಹವಣಿಕೆಯಲ್ಲಿರುವ ವಿಷಕಂಕಟಂಕರು, ವಿಶ್ವಕ್ಕೆ ಕಂಟಕರಾಗುವ ದಿನಮಾನಗಳು ದೂರ ಉಳಿದಿಲ್ಲ!

ಯಾವ ಭೂಮಿ ಮಾನವೀಯತೆ, ಮನುಷ್ಯತ್ವ, ಮಾತೃತ್ವವನ್ನು ಬೆಳೆಸಿಕೊಂಡು ಬಂದಿತ್ತೊ ಅಂತಹ ಭೂಮಿಯಲ್ಲಿ ಇಂದು ದ್ವೇಷ, ಹಗೆತನ ಬೆಳೆಸಿ ಧರ್ಮ ಧರ್ಮಗಳ ನಡುವೆ ಕಚ್ಚಾಟಗಳನ್ನು ಇಡುತ್ತಿರುವುದು ಗೋವಿಂದ ಭಟ್, ಶಿಶುನಾಳ ಷರೀಫ್ ಅವರ ತತ್ವ, ವಿಚಾರ, ಸಂದೇಶಗಳಿಗೆ ಮಾಡಿದಂತ ಅಪಚಾರ.

ಕನ್ನಡ ನಾಡಿನಲ್ಲಿ ಸಾಧು, ಸಂತರು, ಶರಣರು, ವಚನಕಾರರು ಬಂದುಹೋಗಿದ್ದಾರೆ. ಎಲ್ಲರ ಸಂದೇಶವು ಒಂದೇ ಆಗಿತ್ತು. ಅದೇ ಶಾಂತಿ ಮತ್ತು  ಸೌಹಾರ್ದತೆ.

ಶಿಶುನಾಳ ಷರೀಫ್ ರ ತತ್ವ ಗೀತಾ ಗಾಯನ ಮಾಡುವ ಮೂಲಕ ಸಮಾಜಕ್ಕೆ  ಉತ್ತಮ ಸಂದೇಶ ನೀಡುವ ಕಾರ್ಯವನ್ನು ಗೆಳೆಯ ಮಹಮದ್ ಹನೀಫ್ ಮತ್ತು  ತಂಡದವರು ಮುಸ್ಲಿಂ ಕಲ್ಚರಲ್  ಅಕಾಡೆಮಿಯ ಮೂಲಕ ಮಾಡುವ ಪ್ರಯತ್ನವು ಅತ್ಯುತ್ತಮವಾಗಿತ್ತು.

– ನರೇನಹಳ್ಳಿ ಅರುಣ್ ಕುಮಾರ್, ಪತ್ರಕರ್ತರು

Leave a Reply