ರಾಷ್ಟ್ರೀಯ ಲೋಕ ಅದಾಲತ್‌:  ಒಟ್ಟು 235 ಪ್ರಕರಣಗಳ ಇತ್ಯರ್ಥ

1 year ago

ಕರ್ನಾಟಕ ಉಚ್ಛ ನ್ಯಾಯಾಲಯ – ಧಾರವಾಡ ಪೀಠ

ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ರಾಷ್ಟ್ರೀಯ  ಲೋಕ ಅದಾಲತ್‌ ಅನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ  ಶ್ರೀನಿವಾಸ್ ಹರೀಶ ಕುಮಾರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.

ಈ  ಅದಾಲತನಲ್ಲಿ  ನ್ಯಾಯಮೂರ್ತಿಗಳಾದ  ಜೆ.ಎಮ್. ಖಾಜಿ ಮತ್ತು  ಟಿ. ಜಿ. ಶಿವಶಂಕರೆಗೌಡ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರುಗಳಾದ  ಎಮ್. ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು  ವಿ. ಜಿ. ದಳವಾಯಿ ಈ ರೀತಿಯಾಗಿ ಒಟ್ಟು ಮೂರು ಪೀಠಗಳನ್ನು ಆಯೋಜಿಸಲಾಗಿತ್ತು.

ಸದರಿ ಅದಾಲತ್ ನಲ್ಲಿ ಒಟ್ಟು 5೦೦ ಪ್ರಕರಣಗಳನ್ನು ಕೈಗೈತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 235 ಪ್ರಕರಣಗಳನ್ನು ರೂ. 5,86,30,660/- ಮೊತ್ತಕ್ಕೆ  ಇತ್ಯರ್ಥಪಡಿಸಲಾಯಿತು.

ಲೋಕ ಅದಾಲತ್ ನಲ್ಲಿ ಸುಮಾರು 10 ವರ್ಷಗಳಿಂದ ಬಗೆಹರಿಯದ ದಿವಾಣಿ ಪ್ರಕರಣವನ್ನು  ನ್ಯಾಯಮೂರ್ತಿ ಟಿ. ಜಿ. ಶಿವಶಂಕರೆಗೌಡ ಮತ್ತು ನ್ಯಾಯವಾದಿ ವಿ. ಜಿ. ದಳವಾಯಿ ಸದಸ್ಯರನ್ನೊಳಗೊಂಡ ಪೀಠ ಸೂಕ್ತ ಸಲಹೆ ನೀಡುವುದರ ಮೂಲಕ ಮತ್ತು ಉಭಯ ಕಕ್ಷಿದಾರರ ವಕೀಲರುಗಳಾದ  ಕಿರಣಕುಮಾರ ಎಸ್. ಚಟ್ಟಿಮಠ ಮತ್ತು ವಸಂತ ಬಿ. ಹೊಲ್ಕರ ಇವರ ಪ್ರಯತ್ನದೊಂದಿಗೆ ಪ್ರಕರಣವನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಕಾರ್ಯದರ್ಶಿಗಳಾದ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ತಿಳಿಸಿದ್ದಾರೆ.

Leave a Reply