ಸಮ್ಮೇಳನ ಸಂಪುಟ ಮತ್ತು ಸಮ್ಮೇಳನ ಅಧ್ಯಕ್ಷರ ಭಾಷಣಗಳ ಸಂಗ್ರಹದ ಕೃತಿಗಳನ್ನು ರಚಿಸುವತ್ತ ಗಮನಹರಿಸಿ.
ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸುತ್ತದೆ ಬಂದಿರುತ್ತದೆ. ಸಮ್ಮೇಳನವಾದ ನಂತರ ನೆನಪಿನಲ್ಲಿ ಉಳಿಯುವುದು ಅತಿ ಕಡಿಮೆ ಆಗಿರುತ್ತದೆ. ಆದುದರಿಂದ ಇಲ್ಲಿಯ ತನಕ ನಡೆದಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿಗಳನ್ನು ಒಳಗೊಂಡ ಸಂಪುಟವನ್ನು ಬಿಡುಗಡೆ ಮಾಡಿ.
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
ಜೊತೆಗೆ ಈ ವರ್ಷದಿಂದ ಸಾಹಿತ್ಯ ಸಮ್ಮೇಳನದ ಉದ್ಘಾಟಕರ ಮಾತಿನಿಂದ ಹಿಡಿದು ಸಮಾರೋಪದ ತನಕ ನಡೆಯುವಂತಹ ಎಲ್ಲರ ಭಾಷಣಗಳು, ಗೋಷ್ಠಿಗಳಲ್ಲಿ ಮಂಡನೆಯಾಗುವ ವಿಚಾರಗಳು, ಕವಿಗೋಷ್ಠಿಯಲ್ಲಿ ವಾಚಿಸುವ ಕವನಗಳು; ಹೀಗೆ ಎಲ್ಲವನ್ನು ಒಳಗೊಂಡ ವಿಚಾರಗಳನ್ನು ಪುಸ್ತಕದ ರೂಪದಲ್ಲಿ ಪ್ರತಿವರ್ಷವು ಪ್ರಕಟಿಸುತ್ತಾ ಬಂದು ಅದನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಗ್ರಹಿಸಿದರೆ ಮುಂದಿನ ಪೀಳಿಗೆಗೆ ಸಾಹಿತ್ಯ ಸಮ್ಮೇಳನಗಳಲ್ಲಿ ನಡೆದಂತಹ ಎಲ್ಲ ವಿಚಾರಗಳು ಅಧ್ಯಯನಕ್ಕೆ ದೊರೆಯುತ್ತದೆ.
ಸಮ್ಮೇಳನ ಅಧ್ಯಕ್ಷರ ಭಾಷಣಗಳ ಪ್ರತಿಗಳನ್ನು ಒಳಗೊಂಡ ಸಂಪುಟವನ್ನು ಬಿಡುಗಡೆ ಮಾಡುವುದರಿಂದ ಸಮ್ಮೇಳನದ ಅಧ್ಯಕ್ಷರು ಹೇಳಿರುವಂತಹ ಮಾತುಗಳು, ಅವರು ಕೊಟ್ಟಿರುವ ಸಲಹೆಗಳು, ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ ಎಂಬುದನ್ನ ವಿಮರ್ಶಿಸಲು ಸಹ ಈ ಕೃತಿಗಳು ಅನುಕೂಲವಾಗುತ್ತದೆ. ಇದೊಂದು ಅತ್ಯಂತ ಉತ್ತಮವಾದಂತಹ ಸಂಪುಟ ವಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಪ್ರತಿಯೊಂದು ವಿಚಾರಗಳನ್ನು ದಾಖಲಿಸಿ ಕೃತಿಯನ್ನು ಬಿಡುಗಡೆ ಮಾಡುವಂತಹ ಹಾಗೂ ಪ್ರಥಮ ಸಮ್ಮೇಳನದಿಂದ ಹಿಡಿದು ಇಲ್ಲಿಯ ತನಕ ನಡೆದಿರುವ ಎಲ್ಲ ಸಮ್ಮೇಳನಗಳ ಅಧ್ಯಕ್ಷರ ಭಾಷಣದ ಸಂಗ್ರಹವನ್ನು ಬಿಡುಗಡೆ ಮಾಡಿದರೆ ತುಂಬಾ ಸಂತೋಷವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಮನಹರಿಸಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




