ಎಲ್ಲ ಪ್ರಕರಣಗಳನ್ನು ಸಿಬಿಐಗೆ ಕೊಡುವುದಾದರೆ ರಾಜ್ಯದ ಪೊಲೀಸರು ಏನು ಮಾಡಬೇಕು?
2013ರಿಂದ 2018ರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯನವರು ಅನೇಕ ಪ್ರಕರಣಗಳ ವಿಚಾರಣೆಯನ್ನು ಸಿಬಿಐಗೆ ತನಿಖೆಗೆ ವಹಿಸಿದರು. ಆದರೆ ಬಿಜೆಪಿಯವರು 2006 ರಿಂದ 2012ರ ಅವಧಿಯಲ್ಲಿ ಮತ್ತು 2019 ರಿಂದ 2023ರ ಅವಧಿಯಲ್ಲಿ ತಾವು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅನೇಕ ಗಂಭೀರವಾದಂತಹ ಪ್ರಕರಣಗಳು ಜರುಗಿದರು ಸಹ ಅಪರಾಧದ ಕೃತ್ಯದ ವ್ಯಾಪ್ತಿ ಅಂತರ ರಾಜ್ಯದ ಮತ್ತು ವಿದೇಶದಲ್ಲಿಯೂ ವಿಸ್ತರಿಸಿಕೊಂಡಂತಹ ಅನೇಕ ಪ್ರಕರಣಗಳು ಸಂಭವಿಸಿದರು ಸಹ ಯಾವುದನ್ನು ಸಿಬಿಐಗೆ ಒಪ್ಪಿಸಲಿಲ್ಲ. ವಿಶೇಷವಾಗಿ ಬಿಟ್ ಕಾಯಿನ್ ಪ್ರಕರಣ ಮತ್ತು ಹಲವಾರು ಬ್ಯಾಂಕುಗಳಲ್ಲಿ ಸಹಸ್ರರು ಕೋಟಿ ರೂಪಾಯಿಗಳ ಅಕ್ರಮದ ಪ್ರಕರಣಗಳನ್ನು ಸಹ ಸಿಬಿಐಗೆ ಒಪ್ಪಿಸಲಿಲ್ಲ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಆದರೆ ಸಿದ್ದರಾಮಯ್ಯನವರು ಅನೇಕ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದರು. ಆ ಎಲ್ಲ ಪ್ರಕರಣಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಆರೋಪಗಳೆಲ್ಲವೂ ಸುಳ್ಳು ಎಂಬುದು ಸಾಬೀತಾಯಿತು. ಆದರೂ ಸಹ ಈಗಲೂ ಬಿಜೆಪಿಯವರು ಎಲ್ಲ ಪ್ರಕರಣಕ್ಕೂ ಸಿಬಿಐ ವಿಚಾರವನ್ನ ಪ್ರಸ್ತಾಪ ಮಾಡಿದ್ದೀರಿ. ನಿಮ್ಮ ಕಾಲದಲ್ಲಿ ರಾಜ್ಯದ ಪೊಲೀಸರು ಅತ್ಯಂತ ಶುದ್ಧವಾಗಿದ್ದರೂ ಅವರ ತನಿಖೆಗಳು ಪ್ರಾಮಾಣಿಕವಾಗಿತ್ತು. ಆದರೆ, ಈಗ ಅದೇ ಪೊಲೀಸ್ ಅಧಿಕಾರಿಗಳು ಮಾಡುವ ತನಿಖೆಗಳೆಲ್ಲವೂ ಅನುಮಾನದಿಂದ ಕೂಡಿರುತ್ತದೆ ಎನ್ನುವ ನಿಮ್ಮ ಧೋರಣೆ ಯಾರು ಒಪ್ಪುವಂತದ್ದಲ್ಲ.
ಕರ್ನಾಟಕ ರಾಜ್ಯದ ಪೊಲೀಸ್ ಅಧಿಕಾರಿಗಳು ಇಡೀ ದೇಶದಲ್ಲಿಯೇ ಅತ್ಯಂತ ಸೂಕ್ಷ್ಮವಾಗಿ ಹಾಗೂ ಚತುರತೆಯಿಂದ ತನಿಖೆಯನ್ನು ನಡೆಸಬಲ್ಲ ಬುದ್ಧಿವಂತರು ಎಂಬ ಮಾತಿಗೆ ಅನೇಕ ಉದಾಹರಣೆಗಳಿವೆ. ಆದರೆ ಬಿಜೆಪಿಯವರಿಗೆ ಮತ್ತು ಜೆಡಿಎಸ್ ನವರಿಗೆ ರಾಜ್ಯದ ಪೊಲೀಸ್ ಅಧಿಕಾರಿಗಳ ಮೇಲೆ ಅನುಮಾನವಿದೆ. ಇವರ ಅನುಮಾನವನ್ನ ಒಪ್ಪಿಕೊಂಡು ರಾಜ್ಯದ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಲು ಸಮರ್ಥರಲ್ಲ ಎಂದು ಸಾಬೀತುಪಡಿಸುವ ಸಲುವಾಗಿ ಸಿಬಿಐಗೆ ಕೊಡಲು ಮುಂದಾಗಬೇಕೆ?
ಎಲ್ಲ ಪ್ರಕರಣವನ್ನು ಸಿಬಿಐಗೆ ನೀಡಿ ತನಿಖೆ ನಡೆಸುವುದಾದರೆ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಯಾಕೆ ಇರಬೇಕು? ನಿಮ್ಮ ಮಾತಿನಂತೆ ನಡೆಯುವುದಾದರೆ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯನ್ನೇ ನಿಷ್ಕ್ರಿಯಗೊಳಿಸಿ, ಸಿಬಿಐಯನ್ನು ರಾಜ್ಯದಲ್ಲಿ ಮತ್ತಷ್ಟು ವಿಸ್ತಾರ ಗೊಳಿಸಬೇಕೆಂಬುದು ನಿಮ್ಮ ವಾದವಾಗಿದೆ.
ನೀವು ಅಧಿಕಾರದಲ್ಲಿದ್ದಾಗ ಒಂದು ಮಾತು, ಕಾಂಗ್ರೆಸ್ ಅಧಿಕಾರ ಮತ್ತೊಂದು ಮಾತು. ಇಂತಹ ನಿಮ್ಮ ಇಬ್ಬಂದಿ ನೀತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ರಾಜ್ಯದ ಪೊಲೀಸ್ ಅಧಿಕಾರಿಗಳು ಸಮರ್ಥರಿದ್ದಾರೆ, ಪ್ರಾಮಾಣಿಕರಿದ್ದಾರೆ, ಯೋಗ್ಯರಿದ್ದಾರೆ. ತನಿಖೆಯನ್ನು ನಡೆಸಿ ನಿಜವಾದಂತಹ ಅಪರಾಧಿಗಳು ಯಾವುದೇ ಪ್ರಕರಣದಲ್ಲಿದ್ದರೂ ಶಿಕ್ಷಿಸುವಂತಹ ಶಕ್ತಿ ಕಾನೂನಿನ ಜ್ಞಾನ ಅವರಿಗಿದೆ. ಆದುದರಿಂದ ಬಿಜೆಪಿ ಅವರು ಪದೇ ಪದೇ ಹೇಳಿದ್ದೇ ಹೇಳಿ ಜನರ ಮುಂದೆ ಹಾಸ್ಯಕ್ಕೆ ಗುರಿಯಾಗಬೇಡಿ.
– ಕೆ ಎಸ್ ನಾಗರಾಜ್, ಬೆಂಗಳೂರು



