ನಿವೃತ್ತಿಯಾಗಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ‘ನಾನು ಅಪಾರ ಬದ್ಧತೆಯಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ, ಇತಿಹಾಸ ನನ್ನ ಹೇಗೆ ನೆನಪಿಸಿಕೊಳ್ಳುತ್ತದೆ ಎಂದು ತಿಳಿಯಲು ಕಾತುರದಿಂದ್ದೇನೆ’ ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಹೌದು ಮೈ ಲಾರ್ಡ್, ಬಾಯಲ್ಲಿ ಸಂವಿಧಾನ, ಆಚರಣೆಯಲ್ಲಿ ಸನಾತನ ಪಾಲಿಸಿದ ನಿಮ್ಮನ್ನು ಇತಿಹಾಸ ಖಂಡಿತ ನೆನಪಿಸಿಕೊಳ್ಳುತ್ತದೆ.
ಪರಂಜೋ ಗುಹಾ ಅವರು ಹೇಳಿದಂತೆ
ಸಂವಿಧಾನದ ಆಶಯವನ್ನು, ಸೆಕ್ಯುಲರ್ ತತ್ವವನ್ನು ಬುಡಮೇಲು ಮಾಡಿದ ರಾಮಜನ್ಮಭೂಮಿ ತೀರ್ಪಿನ ಭಾಗವಾಗಿದ್ದಕ್ಕೆ, ಆ ತೀರ್ಪನ್ನು ಸಹಭಾಗಿತ್ವದಲ್ಲಿ ಬರೆದ ಕಾರಣಕ್ಕೆ.. ಸಾಕ್ಷಿಯನ್ನು ಆಧರಿಸದೆ ಬಹುಸಂಖ್ಯಾತರ ಮತೀಯ ಭಾವನೆಯನ್ನು ಆಧರಿಸಿ ತೀರ್ಪು ನೀಡಿದ್ದಕ್ಕೆ…
ನಿಮ್ಮ ಮುಖ್ಯ ನ್ಯಾಯಮೂರ್ತಿಗಳ ಅವಧಿಯಲ್ಲಿ ಉಮರ್ ಖಲೀದ್, ಶಾರ್ಜಿಲ್ ಇಮಾಮ್ ಮುಂತಾದ ಸಂಶೋಧನಾ ವಿದ್ಯಾರ್ಥಿಗಳು, ಮಾನವ ಹಕ್ಕುಗಳ ಹೋರಾಟಗಾರರು ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೂಡಿ ಹಾಕಿದ್ದಕ್ಕೆ, ಜಾಮೀನು ನಿರಾಕರಿಸಿದ್ದಕ್ಕೆ..
ಆರೋಪ ಸಾಬೀತಾಗದೆ ಹೋದರೂ ಜೈಲಿನಲ್ಲಿಯೇ ನರಳಿ ನಿಧನರಾದ ಸ್ಟಾನ್ ಸ್ವಾಮಿ ಮತ್ತು ಅನಗತ್ಯವಾಗಿ ಜೈಲಿನಲ್ಲಿ ಹಿಂಸೆ ಅನುಭವಿಸಿದ ಕಾರಣಕ್ಕೆ ನಿಧನರಾದ ಜಿ. ಎನ್. ಸಾಯಿಬಾಬಾ ಅವರ ದಾರುಣ ಅಂತ್ಯಕ್ಕೆ…
ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನವನ್ನು ರದ್ದುಗೊಳಿಸಿದ ಕ್ರಮವನ್ನು ಸಮರ್ಥಿಸಿದ ತೀರ್ಪಿನ ಭಾಗವಾಗಿದ್ದಕ್ಕೆ…
ಚುನಾವಣಾ ಬಾಂಡ್ ಅಕ್ರಮ ಎಂದು ರದ್ದುಪಡಿಸಿ, ನಂತರ ಈ ಹಗರಣದಲ್ಲಿ ಭಾಗಿಯಾದ ವಿರುದ್ಧ ಕ್ರಮ ತೆಗೆದುಕೊಳ್ಳಲು, ಶಿಕ್ಷಿಸಲು ನಿರಾಕರಿಸಿದ್ದಕ್ಕೆ…
ಮಹಾರಾಷ್ಟ್ರದಲ್ಲಿ ಶಿಂಧೆ/ ಫಡ್ನವೀಸ್ ಸರ್ಕಾರ ಕಾನೂನು ಬಾಹಿರ ಎಂದು ಹೇಳಿಯೂ ಆ ಸರ್ಕಾರ ಮುಂದುವರಿಸಲು ಅನುಮತಿ ಕೊಟ್ಟಿದ್ದಕ್ಕೆ…
ಹಿಂಡನ್ಬರ್ಗ್ ಸಂಸ್ಥೆ ಬಂಡವಾಳಶಾಹಿ ಅದಾನಿ ಕುಟುಂಬದ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದಾಗ ಈ ಆರೋಪಿಯನ್ನು ತನಿಖೆಗೆ ಮಾಡಲು ಅದಾನಿಯ ಫಲಾನುಭವಿಗಳಿರುವ ಸೆಬಿಯಂತಹ ಭ್ರಷ್ಟ ಸಂಸ್ಥೆಗೆ ಜವಾಬ್ದಾರಿ ಕೊಟ್ಟಿದ್ದಕ್ಕೆ… ತನಿಖೆ ನೆಪದಲ್ಲಿ ತಿಪ್ಪೆ ಸಾರಿಸಿದ ಈ ಸೆಬಿ ಅದಾನಿಗೆ ಕ್ಲೀನ್ ಚಿಟ್ ಕೊಟ್ಟಿದ್ದನ್ನು ಮರುಮಾತಿಲ್ಲದೆ ಮಾನ್ಯ ಮಾಡಿದ್ದಕ್ಕೆ..
ಇಷ್ಟೆಲ್ಲಾ ಸಾಲದು ಎಂಬಂತೆ ಶೋಷಿತರು ಮತ್ತು ಶೋಷಕರು, ಆರೋಪಿಗಳು ಮತ್ತು ನಿರಪರಾಧಿಗಳು ಯಾರು ಗೊತ್ತಾಗಲು ಹಾಗೂ ಅನುಕೂಲಕರವಾಗಿ ನಿರ್ಣಯಿಸಲು ನ್ಯಾಯದೇವತೆಯ ಕಣ್ಣು ಪಟ್ಟಿ ತೆಗೆದು ಹಾಕಿದ್ದಕ್ಕೆ…
ಮುಂದೆ ಬರುವ ನ್ಯಾಯಮೂರ್ತಿಗಳಿಗೆ ದೇವರನ್ನು ನಂಬಿ ತೀರ್ಪು ಕೊಡಬೇಕೆನ್ನುವ ಮೇಲ್ಪಂಕ್ತಿ ಹಾಕಿದ್ದಕ್ಕೆ…
ಈ ಎಲ್ಲಾ ಕಾರಣಗಳಿಗಾಗಿ ಇತಿಹಾಸ ನಿಮ್ಮನ್ನು ಖಂಡಿತವಾಗಿ ನೆನಪಿಸಿಕೊಳ್ಳುತ್ತದೆ ಮೈ ಲಾರ್ಡ್…
– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




