ಕಮರ್ಶಿಯಲ್ ಸಿನೇಮಾ ಅಂದರೆ ದೂರ ಇರುವ ಸಾವಿರಾರು ಜನರನ್ನು “ಲ್ಯಾಂಡ್ ಲಾರ್ಡ್” ಥಿಯೇಟರಿಗೆ ಸೆಳೆದಿದೆ
ನಾನೂ ಲ್ಯಾಂಡ್ ಲಾರ್ಡ್ ಸಿನೆಮಾ ನೋಡಿದೆ.
ಭಾರತ ಸಂವಿಧಾನದ ಆಶಯಗಳ ಪರವಾಗಿ ಧ್ವನಿ ಎತ್ತುವುದು, ಸಹ ನಾಗರಿಕರನ್ನು ಪ್ರಭಾವಿಸುವುದು ದೇಶದ ಪ್ರಜೆಗಳ ಕರ್ತವ್ಯ. ಸಾಂಸ್ಕೃತಿಕ ಕ್ಷೇತ್ರವೂ, ಕಲಾವಿದರೂ ಇದಕ್ಕೆ ಹೊರತಲ್ಲ. ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವದಂತಹ ಸಂವಿಧಾನಾತ್ಮಕ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮ ವೃತ್ತಿ, ವ್ಯವಹಾರ, ಫ್ರಂಡ್ ಶಿಪ್ ಸರ್ಕಲ್ ನಲ್ಲಿ ಮಾತನಾಡುವುದು ಬೇಡ, ಬೆರಸುವುದು ಬೇಡ ಎಂದು ಕೆಲವರು ಹೇಳುವುದು ಇದೆ. ಈ ಎಲ್ಲಾ ಸ್ಪೇಸ್ ಗಳನ್ನು ಬಿಟ್ಟರೆ ಮತ್ತೆಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದು, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು?
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
- ಮೊದಲ ಸಿನಿಮಾ ಚಿತ್ರ ಬಿಡುಗಡೆ ನೆನಪು ಮಾಡಿಕೊಂಡ ಅನಿರುದ್ಧ
- ಮಲೆನಾಡ ಶೈಲಿಯ ಬಿಸಿಬಿಸಿ ‘ನೀರುಪ್ಪಿಟ್ಟು’ ಮಾಡುವ ವಿಧಾನ
- ದಸರಾ ಪುಸ್ತಕ ಮೇಳದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅರ್ಜಿ ಆಹ್ವಾನ
- ಎಸ್ಐಆರ್ ರಾಜಕೀಯಕ್ಕೆ ಬಳಕೆ ಸರಿಯಲ್ಲ: ಡಿ ಕೆ ಶಿವಕುಮಾರ್
ಕಮರ್ಶಿಯಲ್ ಸಿನೇಮಾ ಅಂದರೆ ಸ್ವಲ್ಪ ದೂರ ಇರುವ ನಮ್ಮಂತಹ ಸಾವಿರಾರು ಜನರನ್ನು “ಲ್ಯಾಂಡ್ ಲಾರ್ಡ್” ಥಿಯೇಟರಿಗೆ ಸೆಳೆದಿದೆ. ದುನಿಯಾ ವಿಜಯ್, ಜಡೇಶ್ ಕನ್ನಡ ಸಿನೆಮಾ ರಂಗದಲ್ಲಿ ಭಿನ್ನ ದಾರಿ ತುಳಿದಿದಾರೆ, ದೊಡ್ಡ ಸಾಹಸಕ್ಕೆ ಮುಂದಾಗಿದ್ದಾರೆ. ಅವರು ಮತ್ತು ಇಡೀ ತಂಡ ಅಭಿನಂದನಾರ್ಹರು. ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿತನ್ಯಾ, ಗೆಳೆಯರಾದ ಸಂಪತ್ ಮೈತ್ರೇಯ ಮತ್ತು ಎಲ್ಲರ ಅಭಿನಯ ಅಮೋಘ.
ನಮ್ಮ ಜನ ಕೇವಲ ಮನರಂಜನೆ, ಗ್ಲಾಮರ್ ಪರ ಇಲ್ಲ, ಅವರು ಸತ್ಯ, ಸರಳತೆ, ಮಾನವಿಯ ಗುಣ, ಶ್ರಮ ಜೀವಿಗಳ ಪರ ಇದ್ದಾರೆ ಅನ್ನುವುದು ಇತ್ತೀಚೆಗೆ ಅವರು ರಿಯಾಲಿಟಿ ಶೋ ಗಳಿಗೆ ಸ್ಪಂದಿಸುವ ರೀತಿ ನೋಡಿ, ಒಳ್ಳೆಯ ಸಿನೆಮಾಗಳಿಗೆ ಸ್ಪಂದಿಸುತ್ತಿರುವ ರೀತಿ ನೋಡಿ ತಿಳಿಯಬಹುದು. ಲ್ಯಾಂಡ್ ಲಾರ್ಡ್ ಸಿನೆಮಾಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿನೇಮಾದಲ್ಲಿನ ಸಂದೇಶ ಅದು ನಮ್ಮದೇ ಹೃದಯದ ಕೂಗು ಅನಿಸುತ್ತಿದೆ ಎಲ್ಲರಿಗೂ.
ಎಲ್ಲರೂ ಸಿನೇಮಾ ನೋಡಿ. ಭಾರತಕ್ಕೆ, ಸಂವಿಧಾನಕ್ಕೆ ಜಯಕಾರ ಕೂಗಿ.
– ಜನಾರ್ದನ ಕೆಸರಗದ್ದೆ




