ಇಡಿ ಅಧಿಕಾರಿಗಳೇ ಬ್ಯಾಂಕಿನಲ್ಲಿ ಸಹಸ್ರಾರು ಜನರಿಗೆ ಮೋಸ ಮಾಡಿರುವ ತೋಳಗಳನ್ನು ಹಿಡಿಯುವ ಕೆಲಸ ಮಾಡಿ
ರಾಜಕೀಯ ದ್ವೇಷದ ಕಾರಣಕ್ಕೆ, ಕೇವಲ ರಾಜಕಾರಣವನ್ನ ಮಾಡುವ ಸಲುವಾಗಿ, ಕೇಂದ್ರ ಸರ್ಕಾರ ಮುಡಾ ಹಗರಣದ 14 ನಿವೇಶನಗಳ ಸಂಬಂಧದಲ್ಲಿ ಇಡಿಯವರು ಕೂಡಲೇ ಗಮನಹರಿಸಿ ಅದೆಷ್ಟು ಆಸಕ್ತಿಯಿಂದ ತನಿಖೆಯನ್ನ ನಡೆಸುತ್ತಿದ್ದೀರಿ, ಇದನ್ನು ನೋಡಿದಾಗ ನಿಮ್ಮ ಆದ್ಯತೆಗಳು ಯಾವುದು ಎನ್ನುವುದು ಚೆನ್ನಾಗಿ ಗೊತ್ತಾಗುತ್ತದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಬೆಂಗಳೂರು ನಗರದಲ್ಲಿ ಸುಮಾರು 50 ಸಾವಿರ ಜನರ ಬದುಕನ್ನು ಹಾಳು ಮಾಡಿದಂತಹ, ಮೂರು ಸಾವಿರ ಕೋಟಿ ರೂಪಾಯಿಗಳ ದೊಡ್ಡ ಹಗರಣವಾಗಿರುವ, ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ಶ್ರೀ ಗುರುಸಾರ್ವಭೌಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಾಗೂ ವಶಿಷ್ಠ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಇವುಗಳಲ್ಲಿ ಹಿರಿಯ ನಾಗರಿಕರು ತಮ್ಮ ಬೆವರು ಸುರಿಸಿ ಗಳಿಸಿದ ಲಕ್ಷಾಂತರ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ಹಾಗೂ ಸಹಸ್ರಾರು ಸರ್ಕಾರಿ ನೌಕರರು ತಮ್ಮ ನಿವೃತ್ತಿಯ ನಂತರ ತಮಗೆ ಬಂದಂತಹ ಹಣವನ್ನು ಸಹ ಈ ಬ್ಯಾಂಕು ಮತ್ತು ಸೊಸೈಟಿಗಳಲ್ಲಿ ಠೇವಣಿ ರೂಪದಲ್ಲಿ ಇಟ್ಟಿದ್ದರು.
ಆದರೆ ಬಡ್ಡಿಯನ್ನು ಕೊಡದೆ, ಅವರ ಅಸಲು ವಾಪಸ್ಸು ಕೊಡದೆ, ಇದರಿಂದಾಗಿ ಈಗಾಗಲೇ ನೂರಾರು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮತ್ತಷ್ಟು ನೂರಾರು ಮಂದಿ ಸಾವು ಬದುಕಿನ ನಡುವೆ ಮಾರಣಾಂತಿಕ ಕಾಯಿಲೆಗಳಿಂದ ನರಳುತ್ತಿದ್ದಾರೆ. ಸಹಸ್ರಾರು ಮಂದಿ ಜಾತಕ ಪಕ್ಷಿಗಳಂತೆ ತಮ್ಮ ಹಣಕ್ಕಾಗಿ ಕಾಯುತ್ತಾ, ಪ್ರತಿದಿನವೂ ಬ್ಯಾಂಕಿನ ಮುಂದೆ ಬಂದು ನಿಂತು ಕಣ್ಣೀರನ್ನು ಸುರಿಸಿಕೊಂಡು ಭಾರವಾದ ಮನಸ್ಸುಗಳೊಂದಿಗೆ ಮನೆಗಳಿಗೆ ಮರಳುತ್ತಿದ್ದಾರೆ.
ಇಂತಹ ಸಹಸ್ರಾರು ಕೋಟಿ ರೂಪಾಯಿಗಳ ಹಗರಣದ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರ ಮಾಡಿಕೊಂಡ ಮನವಿಯನ್ನ ಕಸದ ಬುಟ್ಟಿಗೆ ಹಾಕಿರುವ ಕೇಂದ್ರ ಸರ್ಕಾರ ಇಡಿಯನ್ನು ಸಹ ವಿಚಾರದಲ್ಲಿ ತನಿಖೆಗೆ ಕಳುಹಿಸಿಕೊಡಲಿಲ್ಲ. ಆದರೆ ರಾಜಕೀಯ ಕಾರಣಕ್ಕಾಗಿ ಬೇರೆ ಎಲ್ಲ ವಿಚಾರಗಳಿಗೆ ಆಸಕ್ತಿಯನ್ನು ತೋರುವ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಾತ್ರ ಜಾಣ ಮೌನವನ್ನು ಅನುಸರಿಸುತ್ತಿದೆ.
ಜೊತೆಗೆ ಬಿಜೆಪಿಯ ನಾಯಕರು ಪ್ರತಿಯೊಂದು ಸಂದರ್ಭದಲ್ಲಿ ಸಿಬಿಐ ತನಿಖೆ ನಡೆಸಬೇಕು, ಇಡಿ ಪ್ರವೇಶ ಮಾಡಬೇಕು ಎಂದೆಲ್ಲಾ ರಸ್ತೆಯ ಮೇಲೆ ನಿಂತು ಬಾಯಿ ಬಾಯಿ ಬಡೆದುಕೊಳ್ಳುವವರಿಗೆ ಸಹಸ್ರಾರು ಕೋಟಿ ರೂಪಾಯಿಗಳ ಈ ಬ್ಯಾಂಕಿನ ಹಗರಣ ಕಣ್ಣಿಗೆ ಕಾಣುತ್ತಿಲ್ಲವೇ ಅಥವಾ ಬೇರೆ ಯಾವುದಾದರೂ ಉದ್ದೇಶಗಳು ಇವರಲ್ಲಿ ಇದೆಯೇ?
ನೀವು ನಿಜಕ್ಕೂ ಈ ಬ್ಯಾಂಕಿನ ವಿಚಾರದಲ್ಲಿ ಪ್ರಾಮಾಣಿಕವಾದಂತಹ ತನಿಖೆ ಬಯಸುವುದಾದರೆ ಸಿಬಿಐ ವಿಚಾರಣೆಗೆ, ಒತ್ತಾಯಿಸುವುದರ ಮೂಲಕ ನಿಮ್ಮ ಪ್ರಾಮಾಣಿಕತೆಯನ್ನು ಸಾಕ್ಷೀಕರಿಸಿ ಇಲ್ಲದಿದ್ದರೆ, ನಿಮ್ಮ ಮಾತುಗಳೆಲ್ಲವೂ ರಾಜಕೀಯ ಪ್ರೇರಿತ, ಅಸೂಯೆಯ ಮತ್ತು ದ್ವೇಷದ ರಾಜಕಾರಣ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




