ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕಳತಾವೂರ್ ಮಳಾವ್ -02, ಸಜ್ಜನರ ಸಲ್ಲಾಪ -02, ಮೀನಾರೋ ಪಾಮಣೋ-ತಿಂಗಳ ಅಥಿತಿ ಸಮಾರಂಭ ನಡೆಯಿತು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಎ.ಆರ್. ಗೋವಿಂದಸ್ವಾಮಿ, ಅಕಾಡಮಿಯು ಅತ್ಯಂತ ಕಡಿಮೆ ಅನುದಾನ ಇದ್ದರು ನಿರಂತರವಾಗಿ ಸಂಸ್ಕೃತಿ ಮತ್ತು ಭಾಷೆಯ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಭಾರತದಲ್ಲಿನ ಸುಮಾರು 463 ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳಲ್ಲಿ ಬಂಜಾರರ ಕಲೆ ಸಂಸ್ಕೃತಿ ವೇಷಭೂಷಣಗಳ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಸಜ್ಜನರ ಸಲ್ಲಾಪ ಕಾರ್ಯಕ್ರಮ ಬಂಜಾರರ ಮುಂದಿನ ಪೀಳಿಗೆಗೆ ಆದರ್ಶಪ್ರಾಯ ಈ ಹಿನ್ನೆಲೆಯಲ್ಲಿ ಪ್ರಥಮ ಅತಿಥಿಯಾಗಿ ನಾಡೋಜ ಹಂಪ ನಾಗರಾಜಯ್ಯ ಹಾಗೂ ಎರಡನೇ ಅತಿಥಿಯಾಗಿ ಡಾ. ಸಣ್ಣರಾಮ ಅವರನ್ನು ಆಹ್ವಾನಿಸಿ ಅವರ ಬದುಕು ಬರಹ ಮತ್ತು ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸೂರಪ್ಪ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಬೀದರ್ ನಿಂದ ಚಾಮರಾಜನಗರದವರೆಗೆ ಪರಿಚಯಿಸುವಲ್ಲಿ ಅಧ್ಯಕ್ಷ ಡಾ. ಎ. ಆರ್. ಗೋವಿಂದಸ್ವಾಮಿ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ತಿಂಗಳ ಅತಿಥಿಯಾಗಿ ಭಾಗವಹಿಸಿದ ಡಾ. ಸಣ್ಣರಾಮ ಮಾತನಾಡಿ, ಬಂಜಾರರ ಸಂಸ್ಕೃತಿಯ ಅನನ್ಯತೆಯನ್ನು ಕುರಿತು ಪ್ರಸ್ತಾಪಿಸಿ, ಜನಪದ ವಿದ್ವಾಂಸರ ಪ್ರಕಾರ ಶ್ರೇಷ್ಠ ಕನಿಷ್ಠ ಎಂಬುದು ಆಯಾ ಸಂಸ್ಕೃತಿ ಮತ್ತು ಚಾರಿತ್ರಿಕ ಅಂಶಗಳು ಬೆಳಕು ಚೆಲ್ಲುತ್ತದೆ ಎಂದರು.
ಜಾನಪದ ಮತ್ತು ಮೌಖಿಕ ಪರಂಪರೆಯ ಪ್ರಕಾರ ಬಂಜಾರರ ಮೂಲ ಪುರುಷ ದಾದಾ ಮೌಲ ತ್ರೇತಾ ಯುಗದಲ್ಲಿ ಶ್ರೀ ಕೃಷ್ಣನ ಗೋವುಗಳನ್ನು ಪಾಲನೆ ಮಾಡುತ್ತಿದ್ದರು. ಬಂಜಾರರ ಪರಂಪರೆ ಕ್ರಿ.ಪೂ.10ನೇ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಹೇಳಿದರು.
ಬಂಜಾರರ ಇತಿಹಾಸವು ಬೌದ್ಧ ಧರ್ಮದ ಕಾಲದಲ್ಲಿ ಒಂದು ವ್ಯಾಪಾರಿ ಸಮುದಾಯ ಬೌದ್ಧ ಧರ್ಮದ ಜನರಿಗೆ ದವಸ ಧಾನ್ಯಗಳನ್ನು ಲಕ್ಷಾಂತರ ಎತ್ತುಗಳ ಮೇಲೆ ಸಾಗಿಸುತ್ತಿದ್ದರು ಆ ಸಮಯದಲ್ಲಿ ಬಂಜಾರ ಸಮುದಾಯವು ಒಂದು ಎಂದರು.
ಸರಂಗಿ ಉಮಾ ನಾಯಕ್, ನಾಗರಾಜ ನಾಯ್ಕ್, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







