ಅನೇಕ ಪ್ರಕರಣಗಳಲ್ಲಿ ಒಪ್ಪಿಸಿದ ಮರುದಿನವೇ ಅಧಿಕಾರಿಗಳನ್ನು ನೇಮಿಸಿ ತನಿಖೆಯನ್ನು ಆರಂಭಿಸುವ ಸಿಬಿಐನವರು ಬೆಂಗಳೂರಿನ ಬಸವನಗುಡಿಯ ಸಹಸ್ರಾರು ನಾಗರೀಕರ ಬದುಕನ್ನು ಮಣ್ಣು ಪಾಲು ಮಾಡಿದ ಶ್ರೀ ಗುರು ರಾಘವೇಂದ್ರ ಮತ್ತು ವಶಿಷ್ಠ ಹಾಗೂ ಗುರು ಸಾರ್ವಭೌಮ ಕ್ರೆಡಿಟ್ ಸೊಸೈಟಿ ಇವುಗಳ ಅಕ್ರಮದ ವಿರುದ್ಧ ತನಿಖೆಯನ್ನು ನಡೆಸಲು ಸಮಯವಿಲ್ಲವೇ?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯ ಸರ್ಕಾರ ಈ ಪ್ರಕರಣಗಳ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಒಂದು ವರ್ಷ ವಾಗುತ್ತಿದೆ. ದಾಖಲೆಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿ ತನಿಖೆಗೆ ಅನುಕೂಲವನ್ನು ಕಲ್ಪಿಸಿಕೊಡಲಾಗಿದೆ. ಸಿಬಿಐನವರಿಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲವೋ ಅಥವಾ ಸಿಬಿಐನವರು ಈ ವಿಚಾರದಲ್ಲಿ ತುರ್ತು ತನಿಖೆ ಮಾಡದಂತೆ ಕಾಣದ ಕೈಗಳು ತಮ್ಮ ಪ್ರಭಾವವನ್ನು ಬಳಸಿ ಒತ್ತಡವನ್ನು ಹಾಕಿದ್ದಾರೋ ಅರ್ಥವಾಗುತ್ತಿಲ್ಲ.
ವಾಲ್ಮೀಕಿ ನಿಗಮದ ವಿಚಾರದಲ್ಲಿ ತನಿಖೆಯನ್ನು ಮಾಡುತ್ತಿರುವುದು ಸಂತೋಷದ ಸಂಗತಿ. ಅನ್ಯಾಯವನ್ನ ಯಾರೇ ಮಾಡಿದ್ದರು ಸರ್ಕಾರದ ಹಣವನ್ನು ಯಾರೇ ತಿಂದಿದ್ದರು ನಯಾ ಪೈಸೆ ಬಿಡದಂತೆ ವಸೂಲಿ ಮಾಡಲಿ. ಅದು ಮಾಡಲೇಬೇಕಾದ ಕೆಲಸ. ಇಂತಹ ಅಯೋಗ್ಯರಿಗೆ ಶಿಕ್ಷೆಯು ಆಗಲಿ.
ಇದೇ ಒಂದು ಉತ್ಸಾಹ ಮತ್ತು ಆಸಕ್ತಿ ಸಿಬಿಐನವರು ಕೂಡಲೇ ಗುರು ರಾಘವೇಂದ್ರ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳ ವಿಚಾರದಲ್ಲಿ ತನಿಖೆಯನ್ನು ಮಾಡಿ ಸಹಸ್ರಾರು ಜನರ ಬದುಕನ್ನು ಹಾಳು ಮಾಡಿರುವ ವಂಚಕರಿಗೆ ಶಿಕ್ಷೆಯನ್ನ ಕೊಡುವಂತಹ ಕೆಲಸವನ್ನ ಮಾಡಲೇಬೇಕೆಂದು ಒತ್ತಾಯಿಸುತ್ತೇವೆ.
– ಕೆ ಎಸ್ ನಾಗರಾಜ್, ಬೆಂಗಳೂರು




