ಕಲಘಟಗಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಂದರೆ ಎಲ್ಲರಿಗೂ ಒಂದು ವಿಶೇಷ ಆಕರ್ಷಣೆ. ವಿಶೇಷ ವಸ್ತ್ರವಿನ್ಯಾಸ, ಸರಳ ವಸ್ತ್ರವಿನ್ಯಾಸ, ಕಣ್ಣಿಗೆ ಕೂಲಿಂಗ್ ಗ್ಲಾಸ್, ಯಾವ ಕಾರ್ಯಕ್ರಮಕ್ಕೆ ಯಾವ ಪೋಷಾಕು ಧರಿಸಬೇಕು ಎಂಬ ವಿಶೇಷ ಆಯ್ಕೆ ಅವರದಾಗಿರುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇನ್ನು ಸುದ್ದಿ ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಮತ್ತು ಜವಾರಿ ಶೈಲಿಯ ಉತ್ತರಗಳನ್ನು ಕೊಡುವ ಮೂಲಕ ಪ್ರಶ್ನಿಸುವವರನ್ನೇ ದಂಗುಬಡಿಸುವ ಚಾಕಚಾಕ್ಯತೆ ಇವರಿಗೆ ಕರಗತವಾಗಿದೆ. ಸುವರ್ಣ ಟಿವಿಯ ನಿರೂಪಕ ಅಜಿತ್ ಹನುಮಕ್ಕನವರ್ ಅವರಿಗೆ ನೀಡಿದ ಸಂದರ್ಶನ ಇವರನ್ನು ರಾತ್ರೋರಾತ್ರಿ ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿತ್ತು.
ಹೌದು. ಇಂತಹ ವಿಶೇಷ ವ್ಯಕ್ತಿ ಕಣ್ಣೀರು ಹರಿಸಲು ಕಾರಣವಾದರೂ ಏನು?: ಅದು ಜನರ ನೋವಿಗೆ ಮಿಡಿಯುವ ಸಮಯ. ಯೆಸ್. ವಿಶೇಷಚೇತನರ ಸಂಕಷ್ಟಗಳನ್ನು ಕೇಳಿ, ಕಣ್ಣಾರೆ ಕಂಡು ಕಣ್ಣೀರುಇ ಹರಿಸಿದ್ದು ಇದೇ ಖಡಕ್, ಜವಾರಿ ಸಚಿವ ಸಂತೋಷ್ ಲಾಡ್.
ಅದು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜನ ಸ್ಪಂದನಾ ಕಾರ್ಯಕ್ರಮ. ವಯಸ್ಕ ಮಗ ವಿಶೇಷಚೇತನನಿದ್ದು, ಏಳಲು, ಅಡ್ಡಾಡಲು ಬರುವದಿಲ್ಲ. ಮನೆಯ ಆರ್ಥಿಕ ಸ್ಥಿತಿ ಚನ್ನಾಗಿಲ್ಲ. ಮಗನನ್ನು ಸಾಕಿ, ಸಲುಹಲು ಸಹಾಯ ಮಾಡಿ ಎಂದು ವಿಶೇಷಚೇತನನ ತಾಯಿ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರೂ ಆಗಿರುವ ಸಂತೋಷ್ ಲಾಡ್ ಅವರ ಬಳಿ ಮನವಿಮಾಡಿದರು.
ಈ ವೇಳೆ ಅವರ ಪರಿಸ್ಥಿತಿಯನ್ನು ಪ್ರತ್ಯಕ್ಷ ನೋಡಿ, ಕಣ್ಣೀರಿಟ್ಟ ಸಂತೋಷ್ ಲಾಡ್, ತಮ್ಮ ಫೌಂಡೇಶನ್ ದಿಂದ ಸಹಾಯ ಮಾಡುವದಾಗಿ ತಿಳಿಸಿದರು. ಜೊತೆಗೆ ಆರೋಗ್ಯ, ಅಂಗವಿಕಲ ಕಲ್ಯಾಣ ಇಲಾಖೆಯಿಂದ ಯೋಜನೆಗಳ ಸಹಾಯ ಮಾಡಿಸುವುದಾಗಿ ಭರವಸೆ ನೀಡಿದರು. ಅಗತ್ಯ ಚಿಕಿತ್ಸೆ, ಔಷಧಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚನೆಯನ್ನೂ ನೀಡಿದರು.
ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಎಂಬುವವರ ಮಗ ನಾಗರಾಜ ಅಂಗವಿಕಲ. ಈತನಿಗೆ ನಡೆದಾಡಲು ಬರುವುದಿಲ್ಲ. ತಾಯಿಯನ್ನು ಬಿಟ್ಟು ಆತನಿಗೆ ಯಾರೂ ಇಲ್ಲ. ಕಾರಣ ಸರಕಾರದಿಂದ ವಿಶೇಷ ಸೌಲಭ್ಯವನ್ನು ನೀಡಬೇಕು ಎಂದು ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದರು.
ಈ ಸಭೆಯಲ್ಲಿ ಹಾಜರಿದ್ದ ಸಂತೋಷ್ ಲಾಡ್, ವಿಕಲಾಂಗರ ಪರಿಸ್ಥಿತಿಯನ್ನು ಕಂಡು ಕಣ್ಣೀರಿಟ್ಟಿದ್ದಲ್ಲದೆ, ಸ್ಥಳದಲ್ಲೇ ಸಾಧ್ಯವಾದ ಪರಿಹಾರೋಪಾಯಗಳನ್ನೂ ಸೂಚಿಸಿ, ಸೂಕ್ತ ನೆರವಿನ ಭರವಸೆಯನ್ನೂ ನೀಡಿದರು.













