ಪ್ರತಿದಿನ ಜಿಲ್ಲೆಯ ಜನರ ಅಹವಾಲು ಆಲಿಕೆ; ಕಷ್ಟ ಸುಖಗಳಿಗೆ ಸ್ಪಂದನೆ
ಕಲಘಟಗಿ: ನಾನು ಸಚಿವನಾದ ನಂತರ ವಾರದ ಬಹುತೇಕ ದಿನಗಳನ್ನು ನನ್ನ ಮತಕ್ಷೇತ್ರ ಹಾಗೂ ಜಿಲ್ಲೆಯ ಜನರ ಮಧ್ಯದಲ್ಲಿದ್ದು, ಅವರ ದೂರು, ಅಹವಾಲುಗಳಿಗೆ ಪ್ರತಿದಿನ ಸ್ಪಂದಿಸುತ್ತಿದ್ದೇನೆ. ನಿತ್ಯ ಜನತಾದರ್ಶನ ನಡೆಸುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹೋಯಗದಲ್ಲಿ ಆಯೋಜಿಸಿದ್ದ ಜನ ಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಜನರ ಮಧ್ಯದಲ್ಲಿದ್ದು ಜನರ ಸಮಸ್ಯೆಗಳಿಗೆ ನಿತ್ಯ ಧ್ವನಿ ಆಗಿದ್ದೇವೆ. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ, ಅಲ್ಲಿನ ಜನಪ್ರತಿನಿಧಿಗಳ, ಗ್ರಾಮಸ್ಥರೊಂದಿಗೆ ಗ್ರಾಮದ ಸಮಸ್ಯೆ, ಬೇಡಿಕೆಗಳನ್ನು ಚರ್ಚಿಸಿ, ಪರಿಹಾರ ಕಲ್ಪಿಸಲಾಗಿದೆ ಎಂದರು.
ನಾನು ಒಬ್ಬ ಸಚಿವನಾಗಿ, ರಾಜ್ಯದಲ್ಲಿ ಮೊದಲ ಬಾರಿಗೆ ಮತಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ, ಸ್ವತಃ 28 ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಜನಸಂಪರ್ಕ ಸಭೆ ಜರುಗಿಸಿದ್ದೇನೆ ಎಂದರು.
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಐದು ಜನಸಂಪರ್ಕ ಸಭೆಗಳನ್ನು ಜರುಗಿಸಿ, ಜನರ ಅಹವಾಲುಗಳನ್ನು ಸ್ವೀಕರಿಸಿ, ಶೇ.75 ರಷ್ಟು ದೂರುಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಇನ್ನುಳಿದವುಗಳು ಸರಕಾರ, ಇಲಾಖೆಗಳ ಹಂತದಲ್ಲಿ ಆಗಬೇಕಿದೆ. ಮತ್ತು ಕೆಲವು ನ್ಯಾಯಾಲಯ ಪ್ರಕರಣಗಳು ಇವೆ. ಇವುಗಳನ್ನು ಹಂತಹಂತವಾಗಿ ಪರಿಹರಿಸುವದಾಗಿ ಭರವಸೆ ನೀಡಿದರು.
ಸರಕಾರವೇ ಜನರ ಮನೆ ಬಾಗಿಲಿಗೆ ಹೋಗುತ್ತಿದೆ. ಅವರ ಬೇಕು, ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ಧಾರವಾಡ ಜಿಲ್ಲಾಡಳಿತ ಜನಸಂಪರ್ಕ, ಜನಸ್ಪಂದನೆ ಕಾರ್ಯಕ್ರಮಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಲಘಟಗಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 263 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಶೇ.40 ರಷ್ಟು ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಉಳಿದಂತೆ ಬಹುತೇಕ ಅರ್ಜಿಗಳು ವಾಸಕ್ಕೆ ಮನೆ ಬೇಕು, ಜಮೀನು ಸರ್ವೆ ಮಾಡಿಸಿ, ಪೌತಿ, ಪೊಡಿಗಾಗಿ ಅರ್ಜಿ ಸಲ್ಲಿಕೆ ಆಗಿವೆ. ಇವುಗಳನ್ನು ಸಹ ಮುಂದಿನ ದಿನಗಳಲ್ಲಿ ನಿಯಮಾನುಸಾರ, ಕಾನೂನುಬದ್ದವಾಗಿ ಪರಿಶೀಲಿಸಿ , ಇತ್ಯರ್ಥ ಪಡಿಸಲಾಗುವುದು ಎಂದರು.
ವಿಶೇಷಚೇತನರ ಕಂಡು ಕಣ್ಣೀರಿಟ್ಟ ಸಂತೋಷ್ ಲಾಡ್: ವಯಸ್ಕ ಮಗ ವಿಶೇಷಚೇತನನಿದ್ದು, ಏಳಲು, ಅಡ್ಡಾಡಲು ಬರುವದಿಲ್ಲ. ಮನೆಯ ಆರ್ಥಿಕ ಸ್ಥಿತಿ ಚನ್ನಾಗಿಲ್ಲ. ಮಗನನ್ನು ಸಾಕಿ, ಸಲುಹಲು ಸಹಾಯ ಮಾಡಿ ಎಂದು ವಿಶೇಷಚೇತನನ ತಾಯಿ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಇಂದಿನ ಜಿಲ್ಲಾಧಿಕಾರಿಗಳ ಜನಸ್ಪಂದನದಲ್ಲಿ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.
ಅವರ ಪರಿಸ್ಥಿತಿ ನೋಡಿ, ಕಣ್ಣೀರಿಟ್ಟ ಸಂತೋಷ್ ಲಾಡ್, ತಮ್ಮ ಫೌಂಡೇಶನ್ ದಿಂದ ಸಹಾಯ ಮಾಡುವದಾಗಿ ತಿಳಿಸಿದರು. ಮತ್ತು ಆರೋಗ್ಯ, ಅಂಗವಿಕಲ ಕಲ್ಯಾಣ ಇಲಾಖೆಯಿಂದ ಯೋಜನೆಗಳ ಸಹಾಯ ಮಾಡಿಸುವದಾಗಿ ತಿಳಿಸಿದರು. ಅಗತ್ಯ ಚಿಕಿತ್ಸೆ, ಔಷಧಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಎಂಬುವವರ ಮಗ ನಾಗರಾಜ ಅಂಗವಿಕಲನಿದ್ದು, ನಡೆದಾಡಲು ಬರುವುದಿಲ್ಲ. ತಾಯಿಯನ್ನು ಬಿಟ್ಟು ಆತನಿಗೆ ಯಾರು ಇಲ್ಲ. ಕಾರಣ ಸರಕಾರದಿಂದ ವಿಶೇಷ ಸೌಲಭ್ಯವನ್ನು ನೀಡಬೇಕು ಎಂದು ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದರು.




