ಇದೊಂದು ಮಹತ್ವದ ಕೃತಿ. ಸುಭದ್ರ ಸರ್ಕಾರಿ ನೌಕರಿಗೆ ಬೆನ್ನು ಹಾಕಿ ತಾವೇ ಖುದ್ದಾಗಿ ಹಳ್ಳಿಗಳತ್ತ ತೆರಳಿ, ಹಳ್ಳಿಗಳನ್ನು ಕಟ್ಟಿದ ಸಮಾಜ ವಿಜ್ಞಾನಿಯ ಕಥನ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಡಾ ಪ್ರಕಾಶ ಭಟ್ ಅವರ ಕಾರಣದಿಂದಾಗಿ ಇಂದು 75 ಹಳ್ಳಿಗಳ ಮುಖದಲ್ಲಿ ಸಂತಸದ ಬುಗ್ಗೆ ಇದೆ. 7 ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತ್ಮವಿಶ್ವಾಸವಿದೆ. ಇಷ್ಟು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೇಗೆ ಬರಗಾಲವನ್ನು ಒದ್ದು ಓಡಿಸಬೇಕು ಎನ್ನುವ ಮಾದರಿಯನ್ನು ಇವರು ಹಾಕಿಕೊಟ್ಟಿದ್ದಾರೆ. ಇದರ ಭಾಗವಾಗಿಯೇ 20 ಲಕ್ಷಕ್ಕೂ ಹೆಚ್ಚು ಮರಗಳು ನೆಡಲ್ಪಟ್ಟಿವೆ. 50 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗಿದೆ.

ಈ ಎಲ್ಲಾ ಕೆಲಸಗಳಿಗೆ ಸಾಕ್ಷಿಯಾದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ತೇಜಸ್ವಿ ಕಟ್ಟೀಮನಿ ಅವರು- ಡಾ ಪ್ರಕಾಶ ಭಟ್ ಅವರ ಈ ಕಥನ ಅಭಿವೃದ್ಧಿ ಚಳುವಳಿಯೊಂದರ ಆತ್ಮಕಥೆಯಂತೆ ಗೋಚರಿಸುತ್ತದೆ, ಅಭಿವೃದ್ದಿ ಚಳುವಳಿಗೊಂದು ದೇಹ ಇರುತ್ತದೆ, ಆತ್ಮ ಇರುತ್ತದೆ, ಆತ್ಮಕಥೆಯೂ ಇರುತ್ತದೆ, ಮನಸ್ಸೂ ಇರುತ್ತದೆ, ಅದಕ್ಕೂ ಹಸಿವು-ನೀರಡಿಕೆ ಆಗುತ್ತದೆ. ಕೆಲಸಗಾರರ ಏಳುಬೀಳುಗಳೊಂದಿಗೆ ಅಭಿವೃದ್ಧಿ ಹಾಸು ಹೊಕ್ಕಾಗಿದೆ. ಈ ಕಾರಣದಿಂದ ಈ ಗ್ರಂಥ ಡಾ. ಭಟ್ ಅವರ ಬದುಕಿನ ಅತ್ಯಂತ ಫಲಪ್ರದವಾದ ಕಾರ್ಯದ ಆತ್ಮಕಥೆಯಾಗಿದೆ ಎನ್ನುತ್ತಾರೆ.

ಸಮಾಜ ವಿಜ್ಞಾನಕ್ಕೆ, ಗ್ರಾಮೀಣ ಅಭಿವೃದ್ದಿಗೆ ಇದೊಂದು ಮಹತ್ವದ ಪಠ್ಯವೇ ಸರಿ.
—
ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ
ಲೇ: ಡಾ ಪ್ರಕಾಶ ಭಟ್
ಪ್ರ: ಬಹುರೂಪಿ
ಪುಟ: 280
ಬೆಲೆ: ರೂ 300
ಪ್ರತಿಗಳಿಗಾಗಿ ಸಂಪರ್ಕಿಸಿ: 70191 82729


