ಸರ್ವಾಧಿಕಾರ ಬೆಂಬಲಿಸುತ್ತ, ಹುಚ್ಚು ಭ್ರಮೆಯಲ್ಲಿರುವ ಮಬ್ಭಕ್ತರಿಗೆ ಲಡಾಖ್ ಪಾಠವಾಗಬೇಕು

2 years ago

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನವನ್ನು ರದ್ದುಗೊಳಿಸಿ ಲಡಾಖ್ ಅನ್ನು ಅದರಿಂದ ಪ್ರತ್ಯೇಕಿಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗ ನಿಮ್ಮದು ಮುಸ್ಲಿಂ ಮುಕ್ತ ರಾಜ್ಯ ಎಂದು ಮತೀವಾದಿಕರಣಗೊಳಿಸಲು ಯತ್ನಿಸಿದರು. ಲಡಾಖ್ ನ ಬಹುಸಂಖ್ಯಾತರಾದ ಗಿರಿಜನರ ಮುಂಗೈಗೆ ಬೆಲ್ಲ ಸವರಿದರು. ಟಿಬೆಟಿಯನ್ ಬೌದ್ಧ ಮತವನ್ನು ಅನುಸರಿಸುವ ಅಲ್ಲಿನ ಬೌದ್ಧರಿಗೆ ಮುಸ್ಲಿಮರಿಂದ ಬಿಡುಗಡೆ ಎಂದು ಹಾದಿ ತಪ್ಪಿಸಿದರು.

ಆಗ ಪ್ರತ್ಯೇಕ ಸ್ಥಾನ ಎಂದು ಬೀಗಿದ ಲಡಾಖ್ ನ ಜನ ಐದು ವರ್ಷಗಳ ನಂತರ ಅದು ಸ್ವಾಯತ್ತತೆ ಅಲ್ಲ ಗುಲಾಮಗಿರಿ ಎಂದು ಗೊತ್ತಾಗಿ ಕಂಗೆಟ್ಟಿದ್ದಾರೆ. ಅವರ ನೆಲ, ಜಲ, ಎಲ್ಲವೂ ಹೊರಗಿನವರ ಆಕ್ರಮಣಕ್ಕೆ ಒಳಗಾಗಿದೆ. ಸ್ಥಳೀಯರಿಗೆ ಉದ್ಯೋಗವಿಲ್ಲ. ಅತ್ತ ರಾಜ್ಯವೂ ಇಲ್ಲ, ಇತ್ತ ಸ್ವಾತಂತ್ರ್ಯವೂ ಇಲ್ಲ.

ಮೋದಿ ನೇತೃತ್ವದ ಸರ್ಕಾರ ಊರು ಕೊಳ್ಳೆ ಹೊಡೆದ ನಂತರ ಎಚ್ಚೆತ್ತುಕೊಂಡ ಲಡಾಖ್ ನ ಜನ ಈಗ ಬೆಚ್ಚಿಬಿದ್ದು ಪ್ರತಿಭಟಿಸುತ್ತಿದ್ದಾರೆ.

ಲಡಾಖ್ ನ ಗಿರಿಜನರು ತಮಗಾದ ವಂಚನೆಯ ಕಾರಣ ಹುಡುಕುವ ಕುದಿಯುತ್ತಿದ್ದಾರೆ. ಅವರ ಹೋರಾಟದ ಪ್ರತಿನಿಧಿಯಾಗಿ ಜನಪ್ರಿಯ ಇಂಜಿನಿಯರ್ ಸೋನಮ್ ವಾಂಗ್ಚುಕ್ ಆರಂಭಿಸಿದ ಉಪವಾಸ ಮುಷ್ಕರ 21ನೆ ದಿನಕ್ಕೆ ಕಾಲಿಟ್ಟಿದೆ.

ಹಿಂದೂ ದೇಶ ಎಂದು ತಕಪಕ ಕುಣಿಯುತ್ತಾ, ಸರ್ವಾಧಿಕಾರವನ್ನು ಬೆಂಬಲಿಸುತ್ತ, ಹುಚ್ಚು ಭ್ರಮೆಯಲ್ಲಿರುವ ಮಬ್ಭಕ್ತರಿಗೆ ಲಡಾಖ್ ಪ್ರಕರಣ ಪಾಠವಾಗಬೇಕು. ಇಂದು ಲಡಾಖ್ ಗೆ ಆದ ದುರ್ಗತಿ ನಾಳೆ ಇಡೀ ದೇಶಕ್ಕೂ ಅನ್ವಯಿಸುತ್ತದೆ ಎನ್ನುವ ಕನಿಷ್ಠ ಸಾಮಾನ್ಯ ಜ್ಞಾನ ಪ್ರದರ್ಶಿಸುವಿರಾ ಲಂಭಕ್ತರೇ?

  • ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply