ಆನಂದ್ ತೇಲ್ತುಂಬ್ಡೆ ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ

2 years ago

ಬೆಂಗಳೂರು: ಖ್ಯಾತ ವಿಚಾರವಾದಿ, ಎಡ ಪಂಥೀಯ ನಾಯಕ, ಮಹಾರಾಷ್ಟ್ರದ ಆನಂದ್ ತೇಲ್ತುಂಬ್ಡೆ ಅವರಿಗೆ ರಾಜ್ಯ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಿ ಗೌರವಿಸಲಾಗಿದೆ. ಕಳೆದ ಎರಡು ಸಾಲಿನಿಂದ ನೆನೆಗುದಿಗೆ ಬಿದ್ದಿದ್ದ ಪ್ರಶಸ್ತಿಗಳನ್ನು ಪ್ರಕಟಿಸಲು ನಿರ್ಧರಿಸಿದ್ದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕಾಗಿ ತಜ್ಞರ ಸಮಿತಿ ರಚಿಸಿತ್ತು.

ಅದರಂತೆ ಖ್ಯಾತ ಸಾಹಿತಿ ಗೋ.ರು.ಚನ್ನಬಸಪ್ಪ ನೇತೃತ್ವದ ಆಯ್ಕೆ ಸಮಿತಿ ಕಳೆದ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ವಿಚಾರವಾದಿ ಆನಂದ್ ತೇಲ್ತುಂಬ್ಡೆ ಮತ್ತು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಧಾರವಾಡದ ಡಾ.ಎನ್.ಜಿ.ಮಹಾದೇವಪ್ಪ ಅವರನ್ನು ಆಯ್ಕೆ ಮಾಡಿದೆ.

ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಧಾರವಾಡದ ಜಿನದತ್ತ ದೇಸಾಯಿ ಹಾಗೂ ಗುಜರಾತ್‌ನ ಗಾಂಧೀ ಸೇವಾಶ್ರಮ ಆಯ್ಕೆಯಾಗಿದೆ.

ಟಿ.ಚೌಡಯ್ಯ ಪ್ರಶಸ್ತಿಗೆ ಕೊಳಲು ವಾದಕ ನಿತ್ಯಾನಂದ ಹಳದಿಪುರ ಹಾಗೂ ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು ಅವರು ಆಯ್ಕೆಯಾಗಿದ್ದಾರೆ.

ಗಾಯನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿಗೆ ಹಿಂದೂಸ್ಥಾನಿ ಗಾಯಕ ಧಾರವಾಡದ ಪಂ. ಸೋಮನಾಥ ಮರಡೂರ ಹಾಗೂ ಕರ್ನಾಟಕಿ ಸಂಗೀತದ ಮೈಸೂರಿನ ಡಾ. ನಾಗಮಣಿ ಶ್ರೀನಾಥ್ ಭಾಜನರಾಗಿದ್ದಾರೆ. ಪ್ರಶಸ್ತಿ ಹತ್ತು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಚಿನ್ನದ ಪದಕವನ್ನೊಳಗೊಂಡಿರಲಿದೆ.

ಸಾಹಿತ್ಯ ಪ್ರಕಾರದ ವಿವಿಧ ಪ್ರಶಸ್ತಿಗಳ ಆಯ್ಕೆಗೆ ನೇಮಿಸಿದ್ದ  ಡಾ. ಬರಗೂರು ರಾಮಚಂದ್ರಪ್ಪ ಅವರು ಆಯ್ಕೆ ಸಮಿತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮರಾಠಿ ಮತ್ತು ಕನ್ನಡ ಸಾಹಿತ್ಯದ ಕೊಂಡಿಯಂತೆ ಕೆಲಸ‌ ಮಾಡುವ ಮೂಲಕ ಗಡಿ ಜಿಲ್ಲೆಯ ಸೌಹಾರ್ದ ವಾತಾವರಣ ಮೂಡಿಸಲು ಶ್ರಮಿಸಿದ ಹಿರಿಯ ಸಾಹಿತಿ ಚಂದ್ರಕಾಂತ ಪೋಕಳೆ ಅವರಿಗೆ ಪ್ರಸಕ್ತ ಸಾಲಿನ ಕುಂದಣಗಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ ಸಾಲಿನ ಕುಂದಣಗಾರ ಪ್ರಶಸ್ತಿಗೆ  ಮಹಾರಾಷ್ಟ್ರದ ಡಾ. ಕೆ.ವಿಶ್ವನಾಥ್ ಕಾರ್ನಾಡ್ ಅವರನ್ನು ಆಯ್ಕೆ ಮಾಡಲಾಗಿದೆ.

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಹಾಸನದ ಬಾನು ಮುಷ್ತಾಕ್ (2022–23), ರಾಯಚೂರಿನ ಎಚ್‌.ಎಸ್.ಮುಕ್ತಾಯಕ್ಕ (2023–24)
ಬಿ.ವಿ.ಕಾರಂತ ಪ್ರಶಸ್ತಿ: ಬೆಂಗಳೂರಿನ ಸಿ.ಬಸವಲಿಂಗಯ್ಯ (2022–23), ಮಂಗಳೂರಿನ ಸದಾನಂದ ಸುವರ್ಣ (2023–24)
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ತುಮಕೂರಿನ ಚನ್ನಬಸಯ್ಯ ಗುಬ್ಬಿ (2022–23) , ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ (2023–24)
ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಹಂಪಿ ಡಾ. ಮೊಗಳ್ಳಿ ಗಣೇಶ್ (2021–22), ಉತ್ತಮ ಕಾಂಬ್ಳೆ (2022–23), ದಾವಣಗೆರೆಯ ಬಿ.ಟಿ.ಜಾಹ್ನವಿ (2023–24)
ಈ ಪ್ರಶಸ್ತಿಗಳು ತಲಾ ₹5 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗದ ಪ್ರಶಸ್ತಿಗಳ ಆಯ್ಕೆಗೆ ನೇಮಿಸಿದ್ದ ಬಿ.ಟಿ.ಲಲಿತಾ ನಾಯಕ್ ಅವರು ಈ ಪ್ರಶಸ್ತಿಗಳ ಆಯ್ಕೆ ಸಮಿತಿಯು, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಬೆಂಗಳೂರಿನ ಕೆ. ಮರುಳಸಿದ್ದಪ್ಪ (2020–21), ಬೆಳಗಾವಿಯ ಹಸನ್‌ ನಯೀಂ ಸುರಕೋಡ (2021–22), ಕೋಲಾರದ ಕೆ. ರಾಮಯ್ಯ (2022–23), ಬಳ್ಳಾರಿಯ ವೀರಸಂಗಯ್ಯ (2023–24)
ಅಕ್ಕಮಹಾದೇವಿ ಪ್ರಶಸ್ತಿ: ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020–21), ಮಂಡ್ಯದ ಡಾ. ಆರ್.ಸುನಂದಮ್ಮ (2021–22), ಕಲಬುರಗಿಯ ಮೀನಾಕ್ಷಿ ಬಾಳಿ (2022–23), ಬೆಂಗಳೂರಿನ ಡಾ. ವಸುಂಧರಾ ಭೂಪತಿ (2023–24)
ಕನಕಶ್ರೀ ಪ್ರಶಸ್ತಿ: ಹಾವೇರಿಯ ಡಾ. ಲಿಂಗದಹಳ್ಳಿ ಹಾಲಪ್ಪ (2021–22), ಮಂಗಳೂರಿನ ಡಾ. ಬಿ.ಶಿವರಾಮ ಶೆಟ್ಟಿ (2022–23)ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕಲಾ ವಿಭಾಗದ ಪ್ರಶಸ್ತಿಗಳ ಆಯ್ಕೆಗೆ ನೇಮಿಸಿದ್ದ ಡಾ. ವಿ.ಟಿ.ಕಾಳೆ ಅವರ ನೇತೃತ್ವದ ಆಯ್ಕೆ ಸಮಿತಿ,ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ  ಮೈಸೂರಿನ ಜಿ.ಎಲ್.ಎನ್.ಸಿಂಹ (2022–23), ಕಲಬುರಗಿಯ ಬಸವರಾಜ್ ಎಲ್. ಜಾನೆ (2023–24)
ಜಾನಪದಶ್ರೀ ಪ್ರಶಸ್ತಿ– ವಾದನ: ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (2022–23), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (2023–24)
ಜಾನದಪಶ್ರೀ ಪ್ರಶಸ್ತಿ– ಗಾಯನ: ಬೀದರ್‌ನ ಕಲ್ಲಪ್ಪ ಮಿರ್ಜಾಪುರ (2022–23), ಚಿತ್ರದುರ್ಗದ ಹಲಗೆ ದುರ್ಗಮ್ಮ (2023–24) ಅವರನ್ನು ಆಯ್ಕೆ ಮಾಡಿದೆ.ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ
ಸಂಗೀತ, ನೃತ್ಯ ಪ್ರಶಸ್ತಿಗಳ ಆಯ್ಕೆಗೆ ನೇಮಿಸಿದ್ದ ಖ್ಯಾತ ಸಂಗೀತಗಾರ ಡಾ. ನರಸಿಂಹಲು ವಡವಾಟಿ ಅಧ್ಯಕ್ಷತೆಯ ಸಮಿತಿ,ನಿಜಗುಣ–ಪುರಂದರ ಪ್ರಶಸ್ತಿಗೆ  ಮೈಸೂರಿನ ಎಂ.ಕೆ.ಸರಸ್ವತಿ (2022–23), ಧಾರವಾಡದ ಅಕ್ಕಮಹಾದೇವಿ ಮಠ (2023–24)
ಕುಮಾರವ್ಯಾಸ ಪ್ರಶಸ್ತಿ: ಗದುಗಿನ ಸಿದ್ದೇಶ್ವರ ಶಾಸ್ತ್ರಿ (2022–23), ಮೈಸೂರಿನ ಕೃಷ್ಣಗಿರಿ ರಾಮಚಂದ್ರ (2023–24)
ಶಾಂತಲಾ ನಾಟ್ಯ ಪ್ರಶಸ್ತಿ: ಬೆಂಗಳೂರಿನ ಚಿತ್ರಾ ವೇಣುಗೋಪಾಲ್ (2022–23), ಬೆಂಗಳೂರಿನ ರೇವತಿ ನರಸಿಂಹನ್‌ (2023–24)
ಸಂತ ಶಿಶುನಾಳ ಷರೀಫ ಪ್ರಶಸ್ತಿ: ಬೆಂಗಳೂರಿನ ಕಸ್ತೂರಿ ರಂಗನ್‌ (2022–23), ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ (2023–24) ಅವರನ್ನು ಆಯ್ಕೆ ಮಾಡಿದೆ.
ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ
ಹಿರಿಯ ಸಾಹಿತಿ, ಶಿವಮೊಗ್ಗದ ನಾ. ಡಿಸೋಜಾ ಅವರಿಗೆ 2023–24ನೇ ಸಾಲಿನ ಪಂಪ ಪ್ರಶಸ್ತಿ ಲಭಿಸಿದೆ.

Leave a Reply