ಚಾಮರಾಜನಗರ: ನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆ ಕರ್ನಾಟಕ ರಂಗ ಪರಿಷತ್ತು ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕಲಾವಿದರ ಸಂಘ ಇವರ ಸಂಯುಕ್ತ ಆಶಯದಲ್ಲಿ ಜನವರಿ 27 ಮತ್ತು 28ರಂದು ಇಲ್ಲಿನ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಸಿಜಿಕೆ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
27 ಶನಿವಾರ ಸಂಜೆ 6 ಗಂಟೆಗೆ ಉದ್ಘಾಟನೆಯ ಅಂಗವಾಗಿ ಶ್ರೀ ಕೃಷ್ಣ ಸಂಧಾನ ಎಂಬ ನಗೆ ನಾಟಕ, 28 ಭಾನುವಾರ ಸಂಜೆ 5:30ಕ್ಕೆ ಅಕ್ಕ ನಾಗಲಾಂಬಿಕೆ ಎಂಬ ನಾಟಕವನ್ನು ಹಾವೇರಿ ಜಿಲ್ಲೆಯ ಸಿರಿಗೇರಿ ಧಾತ್ರಿ ಸಂಸ್ಥೆಯವರು ಅಭಿನಯಿಸಲಿದ್ದಾರೆ.
ಪ್ರಸಿದ್ಧ ರಂಗನಟ ಹಾಗೂ ರಂಗ ಸಂಘಟಕ ಪುರುಷೋತ್ತಮ್ ಹಾಗೂ ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾರ್ಮೋನಿಯಂ ಮಾಸ್ಟರ್ ಮಂಗಲ ಶಿವಣ್ಣ ಅವರಿಗೆ ರಾಜ್ಯ ಮಟ್ಟದ ಸಿಜಿಕೆ ರಂಗ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




