ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ವಾರ್ಡ್ ಸಂಖ್ಯೆ 4ರ ಕಡವಿನಬಾಗಿಲು ಹಾಗೂ ರಿಫಾಯಿ ನಗರದ 200 ಕ್ಕೂ ಅಧಿಕ ನಾಗರೀಕರಿಗೆ ಹಲವಾರು ವರ್ಷಗಳಿಂದ ಶುದ್ಧೀಕರಣ ಮಾಡದ ಕಲುಷಿತ ನೀರನ್ನೇ ಪೋರೈಕೆ ಮಾಡುತ್ತಿದ್ದು, ಇದರಿಂದ ನಾಗರಿಕರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇದರ ಬಗ್ಗೆ ವಾರ್ಡ್ ಸಭೆ, ಗ್ರಾಮ ಸಭೆ ಮತ್ತು ಪಂಚಾಯತ್ ಅಧಿಕಾರಿಗಳ ಗಮನವನ್ನು ಎಸ್.ಡಿ.ಪಿ.ಐ ಸದಸ್ಯರು ತಂದರು.
ಈ ವಿಷಯವನ್ನು ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. @sdpikarnataka ಇಳಂತಿಲ ಘಟಕದ ವತಿಯಿಂದ PDO ಗೆ ಮನವಿ ನೀಡಿ ಸಮಸ್ಯೆ ಬಗೆಹರಿಸಲು ಗಡುವು ಸಹ ನೀಡಲಾಗಿತ್ತು. @osd_cmkarnataka ತಾವು ಮದ್ಯ ಪ್ರವೇಶಿಸಿ ಸಂಭಂದಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡುವಂತೆ ಮತ್ತೊಮ್ಮೆ ಆಗ್ರಹಿಸಿದ್ದಾರೆ.



