ಮನುಷ್ಯನಿಗೆ ಸಾಧನೆ ಮಾಡುವುದು ಜೀವನದ ಗುರಿಯಾಗಬೇಕು
ಅಭಿಮಾನಿ, ಸ್ನೇಹಿತರಿಂದ ಎಮ್.ಶಿವರಾಜು ಹುಟ್ಚುಹಬ್ಬದ ಸಂಭ್ರಮಾಚರಣೆ
ಬೆಂಗಳೂರು: ಶಂಕರಮಠ, ಕಮಲನಗರದಲ್ಲಿರುವ ಜನಸಂಪರ್ಕ ಕಛೇರಿಯಲ್ಲಿ ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಅದ್ದೂರಿಯಾಗಿ ಆಚರಿಸಿದರು.
ಶಂಕರಮಠ ಮತ್ತು ಶಕ್ತಿಗಣಪತಿನಗರ ವಾರ್ಡ್ನನ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಆಗಮಿಸಿ, ಹುಟ್ಟುಹಬ್ಬದ ಶುಭ ಕೋರಿ, ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಮ್.ಶಿವರಾಜು, ಮನುಷ್ಯ ಹುಟ್ಟು ಉಚಿತ, ಸಾವು ಖಚಿತ. ಇದರ ನಡುವೆ ಸಾಧನೆ ಮಾಡುವುದು ಜೀವನದ ಗುರಿಯಾಗಬೇಕು. ಸಮಾಜ ಸೇವಕರಾದ ಮಹದೇವಪ್ಪರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಮಹದೇವಮ್ಮರವರ ಮಾರ್ಗದರ್ಶನದಲ್ಲಿ ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಜನರ ಪ್ರೀತಿಯಿಂದ ಶಕ್ತಿಗಣಪತಿನಗರ ಹಾಗೂ ಶಂಕರಮಠ ವಾರ್ಡ್ ನಲ್ಲಿ ಬಿಬಿಎಂಪಿ ಸದಸ್ಯನಾಗಿ ಮೂರು ಬಾರಿ ಸೇವೆ ಮಾಡುವ ಅವಕಾಶ ಸಿಕ್ಕಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಜನತೆಗೆ ನೀಡಿದ 5 ಗ್ಯಾರಂಟಿ ಯೋಜನೆಗಳು ಯಶ್ವಸಿಯಾಗಿ ನಾಡಿನ ಜನರ ಪ್ರತಿ ಮನೆಗೆ ತಲುಪಿವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮತ್ತು ವಾರ್ಡಿನ ಸಮಸ್ತ ನಾಗರಿಕರು ನನ್ನ ಹೋರಾಟ, ಸಮಾಜ ಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರ, ಬೆಂಬಲ ನೀಡಿ ಪ್ರೋತ್ಸಾಹ ನೀಡಿರುವುದಕ್ಕೆ ಹೃತ್ವೂರ್ವಕ ಧನ್ಯವಾದಗಳು, ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಬಯಸುತ್ತೇನೆ ಎಂದು ಹೇಳಿದರು.




