ಬೆಂಗಳೂರು: ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ ವತಿಯಿಂದ 72 ಕ್ರೈಸ್ತ ಡಾಕ್ಟರೇಟ್ ಪದವೀಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೊ, ಕ್ರೈಸ್ತ ಸಮುದಾಯದ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬರ್ತಲೋಮ್, ಐ.ಪಿ.ಎಸ್.ಪೊಲೀಸ್ ಅಧಿಕಾರಿ ರಿಶ್ವಂತ್ , ಸಂಗೀತ ನಿರ್ದೇಶಕ, ನಟ ಸಾಧಕೋಕಿಲ, ಆರೋಗ್ಯಸ್ವಾಮಿ, ಶಿಕ್ಷಣ ತಜ್ಞೆ ಗ್ಲೋರಿ, ವಕೀಲರಾದ ಬಾಲರಾಜ್, ಸಮಾಜದ ಮುಖಡರಾದ ಕಿರೀಟಪ್ಪ, ಶಾಂತಪ್ಪ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಏಸುಕ್ರಿಸ್ತ ಕುರಿತು ಭಕ್ತಿಗೀತೆಗಳನ್ನು ಹಾಡಲಾಯಿತು.
ಡಾ.ಪೀಟರ್ ಮಚಾಡೊ ಮಾತನಾಡಿ, ಕ್ರೈಸ್ತ ಸಮುದಾಯ ವಿಶ್ವಕ್ಕೆ ಶಾಂತಿ ಸಾರುವ ಧರ್ಮವಾಗಿದೆ. ಎಲ್ಲ ಧರ್ಮ ಮತ್ತು ವರ್ಗದವರಿಗೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳನ್ನು ತೆರದು ವಿದ್ಯಾವಂತ ಸಮಾಜ ನಿರ್ಮಾಣಕ್ಕೆ ಕ್ರೈಸ್ತ ಸಮುದಾಯ ಅಪಾರ ಕೊಡುಗೆ ನೀಡಿದೆ ಎಂದರು.
ಕ್ರೈಸ್ತರನ್ನು ಗುರುತಿಸುವ ಕೆಲಸವಾಗಬೇಕು ಎಂದು ಡಾಕ್ಟರೇಟ್ ಪಡೆದವರಿಗೆ ಸನ್ಮಾನಿಸಲಾಗುತ್ತಿದೆ. ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತ ಜಾಗೃತಿ ವೇದಿಕೆ 15 ವರ್ಷಗಳಿಂದ ಕ್ರೈಸ್ತ ಸಮುದಾಯ ಸಂಘಟನೆ ಮತ್ತು ಕ್ರೈಸ್ತ ಸಮುದಾಯದವರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದರು.
ಐ.ಪಿ.ಎಸ್. ಅಧಿಕಾರಿ ಸಿ.ಬಿ.ರಿಶ್ವಂತ್ ಮಾತನಾಡಿ, ಕ್ರೈಸ್ತ ಸಮುದಾಯದ ಡಾಕ್ಟರೇಟ್ ಪಡೆದವರಿಗೆ ಗುರುತಿಸಿ, ಸನ್ಮಾನ ಮಾಡುವುದು ಒಳ್ಳೆಯ ಕೆಲಸ. ಉತ್ತಮ ಕೆಲಸ ಮಾಡುವ ಎಲ್ಲ ಸಂಘದವರಿಗೆ ಅಭಿನಂದನೆಗಳು. ಒಳ್ಳೆಯ ಕೆಲಸ ಮಾಡಲು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರು ಒಂದುಗೂಡಿ ಕೆಲಸ ಮಾಡಬೇಕು ಎಂದರು.
ವೇದಿಕೆಯ ಯೇಸುದಾಸ್, ಅರುಳಪ್ಪ, ಸಗಾಯರಾಜ್ ಪ್ರಕಾಶ್ ಎ.ಜಿ.ಮತ್ತು ಕ್ರೈಸ್ತ ಸಮುದಾಯದ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








