ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಮತ್ತೆ ಮತ್ತೆ ಧರ್ಮದ ಮೊರೆ: ಎಚ್.ಸಿ.ಮಹದೇವಪ್ಪ

4 years ago

ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಮತ್ತೆ ಮತ್ತೆ ಧರ್ಮದ ಮೊರೆ: ಎಚ್.ಸಿ.ಮಹದೇವಪ್ಪ

ಬೆಂಗಳೂರು: ಉಡುಪಿಯಲ್ಲಿ ಆರಂಭವಾದ ಹಿಜಬ್ ಮತ್ತು ಕೇಸರಿ ಶಾಲು ವಿವಾದ ಬೇರೆ ಜಿಲ್ಲೆಗಳಿಗೂ ಸಾಂಕ್ರಾಮಿಕ ರೋಗದ ಮಾದರಿಯಲ್ಲಿ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಸಿ‌.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಈಗ ಉಡುಪಿಯಲ್ಲಿ ನಡೆಯುತ್ತಿರುವ ಹಿಜಾಬ್ ಘಟನೆಯು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಕಾಳಜಿಯಿಂದ ರೂಪುಗೊಂಡಿರುವಂತದ್ದಲ್ಲ ಎಂದಿದ್ದಾರೆ.

ಈಗಾಗಲೇ ಹತ್ತಾರು ರೀತಿಯಲ್ಲಿ ನಿಮ್ನ ವರ್ಗಗಳ ಶೋಷಣೆಯು ನಿರಂತರವಾಗಿ ಇರುವಾಗ ಹೆಣ್ಣು ಮಕ್ಕಳ ಸಮಾನ ಹಕ್ಕುಗಳ ಪರವಾಗಿ ಕೋಮು ಸಂಘಟನೆಗಳು ಮಾತನಾಡುತ್ತವೆ ಎಂಬುದು ಬರೀ ಭ್ರಮೆ ಎಂದಿದ್ದಾರೆ.

ನನ್ನ ಪ್ರಕಾರ ಈಗಿನ ಬಿಜೆಪಿ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಮತ್ತೆ ಮತ್ತೆ ಧರ್ಮದ ಮೊರೆ ಹೋಗಲಾಗುತ್ತಿದೆ ಎಂದಿದ್ದಾರೆ.

ಬೇಸರದ ಸಂಗತಿಯೆಂದರೆ ಇವರ ಈ ವಂಚನೆಯ ಜಾಲಕ್ಕೆ ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಎನ್ನದೇ ಶಿಕ್ಷಣ ಪಡೆಯುವ ಮಕ್ಕಳು ದುರುಪಯೋಗವಾಗುತ್ತಿರುವುದು. ಇಂತಹ ಬೆಳವಣಿಗೆಯು ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಹಳಷ್ಟು ಅಪಾಯಕಾರಿ ಆಗಿದೆ ಎಂದಿದ್ದಾರೆ.

Leave a Reply