ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ
ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಅನುಶ್ರುತ ಫೌಂಡೇಷನ್ ಟ್ರಸ್ಟ್ ಮತ್ತು ಶ್ರೀ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್, ಸಮಾನ ಮನಸ್ಕರ ವೇದಿಕೆ, ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಜಾಗೃತಿ ನಡಿಗೆ ಕಾರ್ಯಕ್ರಮ ನಡೆಯಿತು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಬಸವೇಶ್ವರ ನಗರದ ಹಾವನೂರು ಸರ್ಕಲ್ ನಿಂದ ಪ್ರಾರಂಭವಾಗಿ ಶಂಕರಮಠದ ಸ್ವಾಮಿ ವಿವೇಕಾನಂದರ ಉದ್ಯಾನವನದವರೆಗೆ ಸಾವಿರಾರು ಯುವಕ, ಯುವತಿಯರಿಂದ ಜಾಗೃತಿ ನಡಿಗೆ ಜಾಥಾ ನಡೆಯಿತು.
ಮಾಜಿ ಸಚಿವ, ಶಾಸಕ ಕೆ.ಗೋಪಾಲಯ್ಯ ಮತ್ತು ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಉಪ ಮೇಯರ್, ಹೇಮಲತಾ ಗೋಪಾಲಯ್ಯ, ಕೆ.ರಂಗಣ್ಣ, ಎಸ್.ಹರೀಶ್, ಮಾಜಿ ವಿಧಾನಪರಿಷತ್ ಸದಸ್ಯ ಲಕ್ಷ್ಮಿನಾರಾಯಣ್, ಮಹಾನಗರ ಮಾಜಿ ಸದಸ್ಯರುಗಳು, ಸ್ಥಳೀಯ ರಾಜಕೀಯ ಮುಖಂಡರು, ಶಾಲಾ ಮಕ್ಕಳು, ಸ್ವಯಂ ಸೇವಕರು, ಯುವಕ, ಯುವತಿಯರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಸ್ಕೇಟಿಂಗ್ ಮೂಲಕ ನೂರಾರು ಬಾಲಕ, ಬಾಲಕಿಯರು ಜಾಥದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಮಾತನಾಡಿದ ಕೆ.ಗೋಪಾಲಯ್ಯ, ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವಾಗಿ ಅಚರಿಸಲಾಗುತ್ತಿದೆ. 1863ರಲ್ಲಿ ಹುಟ್ಟಿದರು 39 ವರ್ಷಗಳ ಕಾಲ ಬದುಕಿದ್ದರು, ಅಷ್ಟು ಅವಧಿಯಲ್ಲಿ ವಿಶ್ವನಾಯಕರಾಗಿ ಹೊರಹಮ್ಮಿದ್ದರು. ಜಿನಿವಾ ಸಮ್ಮೇಳನದಲ್ಲಿ ಸಹೋದರತ್ವ ಭಾಷಣದಿಂದ ಇಡಿ ವಿಶ್ವದ ಗಮನ ಸೆಳೆದರು. ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶವನ್ನು ಯುವ ಜನತೆಗೆ ಕೊಟ್ಟರು. ಸ್ಪೂರ್ತಿದಾಯಕ, ಆದರ್ಶಪ್ರಾಯ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಎಲ್ಲರು ಪಾಲಿಸೋಣ ಎಂದು ಕರೆ ನೀಡಿದರು.
ನೆ.ಲ.ನರೇಂದ್ರಬಾಬು ಮಾತನಾಡಿ, ಯುವ ಜನ ಜಾಗೃತಿ ಜಾಥಾ ಹಾವನೂರು ವೃತ್ತದಿಂದ ಶಂಕರಮಠ ವಿವೇಕಾನಂದರ ಪ್ರತಿಮೆವರಗೆ ನಡಿಗೆ ಜಾಥಾ ಮಾಡಲಾಯಿತು. ನಿಸ್ವಾರ್ಥವಾಗಿ ಬದುಕಬೇಕು, ಸ್ವಾರ್ಥದಿಂದ ಬದುಕುವವರು ಬದುಕಿದರು ಸತ್ತಂತೆ ಎಂದರು.
ದೇಶದಲ್ಲಿ ಶೇಕಡ 60ರಷ್ಟು ಯುವ ಜನರು ಇದ್ದಾರೆ. ಸರಿಯಾದ ಗುರಿ, ಮಾರ್ಗದರ್ಶನ ಅವರಿಗೆ ಸಿಕ್ಕರೆ ಭವ್ಯ ಭಾರತ ನಿರ್ಮಾಣ ಸಾಧ್ಯ. ಮಾರಕ ಪೀಡಗುಗಳಾದ ಮದ್ಯಪಾನ ಹಾಗೂ ನಶೆಯ, ಅಮಲು ಬರುವ ವಸ್ತುಗಳಿಂದ ಯುವ ಜನತೆ ದೂರ ಉಳಿಯಬೇಕು ಮತ್ತು ಯುವಜನರ ಒಳಿತಿಗಾಗಿ ಪರಿಸರ ಸ್ನೇಹಿ ವಾತವರಣ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಯುವ ದಿನವಾದ ಯುವ ಭವಿಷ್ಯಕ್ಕಾಗಿ ನಶೆ ಮುಕ್ತ ಸಮಾಜ, ನಿರುದ್ಯೋಗ ನಿವಾರಣೆ, ಸ್ವಯಂ ಉದ್ಯೋಗ, ಸ್ವಚ್ಚತೆ ಮತ್ತು ಹಸಿರುಪಡೆ ಸ್ಥಾಪನೆ ಕೆರೆ, ಮರಗಳನ್ನು ರಕ್ಷಣೆ ಮಾಡುವುದು ಮತ್ತು ಯುವ ಜನರ ಆಶಯಗಳನ್ನು ಸಾಕರಗೊಳಿಸಲು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.








