ಸಿರುಗುಪ್ಪದ ವಿದ್ಯಾ ಎಲ್ ಬೈಲಪತ್ತಾರ್‌ಗೆ ಬಿಎ ಪದವಿಯಲ್ಲಿ 3ನೇ ರ್ಯಾಂಕ್

2 years ago

ಬಳ್ಳಾರಿ: ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ವಿಭಾಗದ ಫಲಿತಾಂಶ ಪ್ರಕಟವಾಗಿದೆ. ಸಿರುಗುಪ್ಪ ಪಟ್ಟಣದ ವಿದ್ಯಾ ಎಲ್ ಬೈಲಪತ್ತಾರ್‌ ಬಿ.ಎ., ಪದವಿಯಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ.

ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯಾಗಿರುವ ವಿದ್ಯಾ ಅವರು 3 ವರ್ಷದ ಬಿ.ಎ.ಪದವಿಯಲ್ಲಿ ಎಲ್ಲಾ ಸೆಮಿಸ್ಟರ್ವಾರು ಒಟ್ಟು 4100 ಅಂಕಗಳಿಗೆ 3721 ಅಂಕ ಗಳಿಸಿದ್ದಾರೆ.

ಶೇ.90.76 ಪ್ರತಿಶತ ಸಾಧನೆ ತೋರಿರುವ ವಿದ್ಯಾ ಎಲ್ ಬೈಲಪತ್ತಾರ್ ಅವರಿಗೆ ಕಾಲೇಜಿನ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ತಂದೆ ಲಕ್ಷ್ಮಣ ಬೈಲಪತ್ತಾರ್ ಸೇರಿದಂತೆ ಕುಟುಂಬ ವರ್ಗ, ಬಂಧು ಮಿತ್ರರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply