ದಾವಣಗೆರೆ: ನಗರದ ಮಾಕನೂರು ಮಲ್ಲೇಶಪ್ಪ, ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ವಿಶ್ವ ತಂಬಾಕು ರಹಿತ ದಿನಾದ ಅಂಗವಾಗಿ ಜಾಗೃತಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಸತೀಶ್ ಕಲಹಾಳ್ ಮಾತನಾಡಿ, ಕರಪತ್ರ ಹಾಗೂ ಛಾಯಚಿತ್ರಗಳನ್ನು ತೋರಿಸುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯ ಪ್ರಯುಕ್ತ ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದರ ಬಗ್ಗೆ ಹಾಗೂ ಯಾವ ರೀತಿ ಯುವಕರನ್ನು ತಂಬಾಕುಗೆ ಬಲಿಯಾಗಿಸುತ್ತಿದ್ದಾರೆ ಎಂದರು.
ಬಲಿಯಾದ ನಂತರ ಮಾನವನ ದೇಹದಲ್ಲಿ ಮುಡಿಯಿಂದ ಅಡಿಯ ವರೆಗೆ ಪ್ರತಿಯೊಂದು ಅಂಗಾಂಗಕ್ಕೂ ಖಾಯಿಲೆ ತರುವಂತಹ ಪದಾರ್ಥ ತಂಬಾಕು. ಆದ ಕಾರಣ ದೇವರು ನೀಡಿರುವಂತಹ ಆರೋಗ್ಯವಂತ ದೇಹವನ್ನ ದುಡ್ಡು ಕೊಟ್ಟು ಹಾಳು ಮಾಡಿಕೊಳ್ಳುವುದು ಬೇಡ, ಹಾಗಾಗಿ ಇಲ್ಲಿರುವಂತಹ ಎಲ್ಲಾ ಪ್ರಶಿಕ್ಷಣಾರ್ಥಿಗಳು ಮುಂಬರುವ ದಿನಗಳಲ್ಲಿ ಶಿಕ್ಷಕರಾದ ನಂತರ ತಮ್ಮ-ತಮ್ಮ ಶಾಲಾ ವ್ಯಾಪ್ತಿಯಲ್ಲಿ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ತಂಬಾಕು ಮುಕ್ತ ಯುವ ಪೀಳಿಗೆಯನ್ನಾಗಿಸಿ ಎಂದು ಕರೆ ನೀಡಿದರು.
ಡಾ. ಕೆ.ಟಿ ನಾಗರಾಜ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ‘ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ’ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ವರ್ದೆಯಲ್ಲಿ ಪ್ರಥಮ ಬಹುಮಾನ ಪಡೆದ ಕುಮಾರಿ ಚಂದನ ಎನ್.ಎಂ, ದ್ವಿತೀಯ ಬಹುಮಾನ ಕುಮಾರಿ ಸಂಗೀತ. ಹೆಚ್, ತೃತೀಯ ಬಹುಮಾನ ಕುಮಾರಿ ಕವಿತಾ ಎಂ ರವರಿಗೆ ಬಹುಮಾನ ವಿತರಿಸಲಾಯಿತು.
ಮಾಕನೂರು ಮಲ್ಲೇಶಪ್ಪ, ಶಿಕ್ಷಣ ಮಹಾವಿದ್ಯಾಲಯಕ್ಕೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ಘೋಷಣಾ ಪತ್ರವನ್ನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಜಿ.ಎಂ ಶಶಿಕಲಾ, ಡಾ. ಸಂತೋಷ್ ಕುಮಾರ್ ಆರ್, ಉಪನ್ಯಾಸಕರು ಹಾಗೂ 200 ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.




