ಧಾರವಾಡ: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ.ಅರುಣಕುಮಾರ ಸಿ. ಸಸಿ ನೆಟ್ಟು ಅದಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಿಮ್ಹಾನ್ಸ್ ನ ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ನಾಯಕ್, ಶುಶ್ರೂಷಕ ಅಧಿಕ್ಷಕರಾದ ಗಾಯತ್ರಿ ಶಿಂಧೆ, ಮನೋವೈದ್ಯರು ಹಾಗೂ ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಭಜಂತ್ರಿ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಿಬ್ಬಂದಿಗಳಾದ ಅಶೋಕ ಕೋರಿ, ಆರ್.ಎಮ್.ತಿಮ್ಮಾಪೂರ, ಅನಂತರಾಮು ಬಿ.ಜಿ, ನಸಿರ್ಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುನಂದಾ ಜಿ.ಟಿ, ಡಾ.ಶ್ರೀಧರ ಕುಲಕರ್ಣಿ, ವೈದ್ಯಾಧಿಕಾರಿ ಡಾ.ವಾಯ್.ಎಲ್.ಕಲಕುಟಕರ್, ಶುಶ್ರೂಷಕ ಅಧಿಕಾರಿಗಳು, ಡಿಮ್ಹಾನ್ಸ್ ಸಂಸ್ಥೆಯ ಇತರ ವಿಭಾಗದ ಸಿಬ್ಬಂದಿ, ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು, ಎಂ.ಫಿಲ್ ವಿದ್ಯಾರ್ಥಿಗಳು, ಎಸ್.ವಿ.ವಾಯ್.ಎಮ್ಸಂಸ್ಥೆಯ ಡಾ.ಮೋಹನಕುಮಾರ ಥಂಬದ ಹಾಗೂ ಇತರರು ಭಾಗವಹಿಸಿದ್ದರು.
ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಯಿತು.




