ಅಂತರರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ
ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಸಮಾರಂಭ
ರಾಮಚಾರಿ ಹಾಡಿಗೆ ನೃತ್ಯ ಮಾಡಿ ಮಹಿಳೆಯರನ್ನ ರಂಜಿಸಿದ ವಿ.ರವಿಚಂದ್ರನ್ ಮತ್ತು ಮಾಲಾಶ್ರೀ
ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯ ಡಾ||ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ವಿಶ್ವ ಮಹಿಳಾ ದಿನಾಚರಣೆಯನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹಿರಿಯ ಚಲನಚಿತ್ರ ನಟ ವಿ.ರವೀಂದ್ರನ್, ನಟಿ ಮಾಲಾಶ್ರೀ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ಐ.ಎ.ಎಸ್.ಅಧಿಕಾರಿಗಳಾದ ಮೌನೀಶ್ ಮೌದ್ದೀಲ್, ಸ್ನೇಹಾಲ್, ಸೂರಳ್ಕರ್ ವಿಕಾಸ್ ಕಿಶೋರ್, ಡಾ||ಹರೀಶ್ ಕೆ.ಮತ್ತು ಕೆ.ಎ.ಎಸ್ ಅಧಿಕಾರಿ ಡಾ||ಮಂಜುನಾಥಸ್ವಾಮಿರವರು, ಜಂಟಿ ಆಯುಕ್ತೆ ಲಕ್ಷ್ಮಿದೇವಿ, ಎ.ಅಮೃತ್ ರಾಜ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ.ರವಿಚಂದ್ರನ್, ಮಾತನಾಡಿ ಹೆಣ್ಣು ಸ್ಪೂರ್ತಿ ಅವಳು ಇಲ್ಲದೇ ಹೋದರೆ ಜೀವನ ವ್ಯರ್ಥ. ಹೆಣ್ಣು ಇಲ್ಲವೆಂದರೆ ಸಮಾಜದಲ್ಲಿ ಏನೂ ಇಲ್ಲ, ಪುರುಷರಗಿಂತ ಮಹಿಳೆಯರೇ ಹೆಚ್ಚು ಶಕ್ತಿಶಾಲಿಗಳು ಎಂದು ಹೇಳಿದರು.

ನನ್ನ ತಾಯಿಯ ಜೊತೆಯಲ್ಲಿ ಆತ್ಮೀಯ ಒಡನಾಟದಿಂದ ನನಗೆ ಮಹಿಳೆಯರಿಗೆ ಬಗ್ಗೆ ಹೆಚ್ಚು ಗೌರವ ಮೂಡುವಂತೆ ಮಾಡಿತು. ನಾವು ಎಷ್ಟೆ ಡೊಡ್ಡವರಾದರು, ತಾಯಿಗೆ ನಮ್ಮ ಚಿಕ್ಕ ಮಕ್ಕಳಾಗಿ ಇರುತ್ತೇವೆ. ಅಭಿಮಾನಿಗಳ ಜನರ ಕಣ್ಣಿನಲ್ಲಿರುವ ಪ್ರೀತಿ ನೋಡಿದರೆ ನನ್ನ ತಂದೆ, ತಾಯಿ ನೆನಪಾಗುತ್ತಾರೆ ಎಂದು ಹೇಳಿದರು.

ನಾನು ಮನೆಯಿಂದ ಹೋರ ಹೋಗಬೇಕಾದರೆ ಹೆಂಡತಿ ಅಥವಾ ಮಗಳ ಮುಖ ನೋಡಿಕೊಂಡು ಮುಂದಿನ ಕಾರ್ಯರಂಭವಾಗುತ್ತದೆ ನನ್ನದು. ಮಹಿಳೆಯರು ಕಷ್ಟ, ಅಳು ದುಖಃ ಹಂಚಿಕೊಳ್ಳುವುದಿಲ್ಲ, ನಗುವ ಮೂಲಕ ಎಲ್ಲರ ಮನಸ್ಸನ ಗೆಲ್ಲುತ್ತಾರೆ ಎಂದರು.
ಡಾ.ರಾಜ್ ಕುಮಾರ್, ಅಂಬರೀಷ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಒಡನಾಟದಿಂದ ಚಲನಚಿತ್ರರಂಗದಲ್ಲಿ ಬೆಳೆಯಲು ಸಾಧ್ಯವಾಯಿತು. ಪ್ರೇಮಲೋಕ ಭಾಗ-2 ಶೀಘ್ರದಲ್ಲಿ ಆರಂಭವಾಗಲಿದೆ. ಜೀವನದಲ್ಲಿ ಜನರ ಪ್ರೀತಿ ಇದ್ದರೆ ಸಾಕು ಜೀವನ ಗೆದ್ದಂತೆ ಎಂದರು.
ಚಲನಚಿತ್ರ ನಟಿ ಮಾಲಾಶ್ರೀ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೆ ಸಾಧನೆ ಮಾಡುತ್ತಾರೆ, ಹೆಣ್ಣು ಮಕ್ಕಳು ಜೀವನದ ಸ್ಪೂರ್ತಿಯಾಗಿದ್ದಾರೆ. ಮಹಿಳೆಯರು ಸಮಾಜದ ಕಣ್ಣು ಮತ್ತು ಮಹಿಳೆಯರಿಗೆ ಗೌರವ ಕೊಟ್ಟರೆ ದೇವರೆ ಒಲಿಯುತ್ತಾನೆ ಎಂದು ಪುರಾಣದಲ್ಲಿ ಹೇಳುತ್ತಾರೆ ಎಂದು ಹೇಳಿದರು.

ತುಷಾರ್ ಗಿರಿನಾಥ್ ಮಾತನಾಡಿ, ಬಿಬಿಎಂಪಿಯಲ್ಲಿ ಶೇಕಡ 50ರಷ್ಟು ಮಹಿಳೆಯರಿಗೆ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರಲ್ಲಿ ಶೇಕಡ 80ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಾ ಇದ್ದಾರೆ. ಬಿಬಿಎಂಪಿ ಇರುವುದು ನಾಗರಿಕರ ಸೇವೆ ಮಾಡಲು, ಒಳ್ಳೆಯ ಸೇವೆ ನೀಡಲು ಮಹಿಳಾ ಸಿಬ್ಬಂದಿ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.
ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ ಅತ್ತೆ, ಮಾವ, ಪತಿಯ ನೋಡಿಕೊಂಡು ಕೆಲಸದಲ್ಲಿ ಉತ್ತಮ ಸೇವೆ ಮಾಡುವ ಮಹಿಳೆ ದಿಟ್ಟತನ ಮೆಚ್ಚಬೇಕು. ಮಹಿಳೆ ಮಾತೃಸ್ವರೂಪಿಯಾಗಿ ನಿಲ್ಲುತ್ತಾಳೆ ಎಂದರು.
ಎ.ಅಮೃತ್ ರಾಜ್ ಮಾತನಾಡಿ, ಮಹಿಳೆ ತಾಯಿಯಾಗಿ, ಅಕ್ಕ, ತಂಗಿ ವಿವಿಧ ರೂಪದಲ್ಲಿ ಇಡಿ ಕುಟುಂಬವನ್ನು ಸಲುಹುವಳು. ಮಹಿಳೆ ಅಬಲೆಯಲ್ಲ ಸಬಲೆ ಎಂದು ರೂಪಿಸಿದ್ದಾರೆ. ಚಲನಚಿತ್ರ, ನಾಟಕ, ಸಾಹಿತ್ಯ, ಕಲೆ ರಾಜಕೀಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.
ಕುಟುಂಬ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಮಹಿಳೆಯರ ಪ್ರಮುಖ ಪಾತ್ರವಹಿಸಿದ್ದಾರೆ. ಅಂತಹ ಸಾಧಕ ಮಹಿಳೆಯರಿಗೆ ಗೌರವಿಸುವ ಶುಭ ದಿನವೆ ವಿಶ್ವ ಮಹಿಳಾ ದಿನಾಚರಣೆ ಎಂದರು.
ಸಾಧಕಿಯರಿಗೆ ದಿಟ್ಟ ಮಹಿಳೆ ಪ್ರಶಸ್ತಿಯನ್ನು ಚಲನಚಿತ್ರ ನಟಿ ವಿನಯಪ್ರಸಾದ್, ಖ್ಯಾತ ಹಿನ್ನಲೆ ಗಾಯಕಿ ಎಂ.ಡಿ.ಪಲ್ಲವಿ, ಯುನೈಟೆಡ್ ಆಸ್ಪತ್ರೆಯ ನಿರ್ದೇಶಕಿ ಡಾ||ವೀಣಾ ಸಿದ್ದಾರೆಡ್ಡಿ, ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಸಿ.ಕವಿತಾ, ಚಲನಚಿತ್ರ ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ, ಹಿರಿಯ ವಕೀಲೆ ಶೀದೇವಿ ಪಾಟೀಲ್, ಟಿ.ವಿ.9ನಿರೂಪಕಿ ಶುಭಶ್ರೀ ಜೈನ್, ಹಿರಿಯ ಪತ್ರಕರ್ತೆ ಪ್ರತಿಮಾ ಭಟ್, ವಿಸ್ತಾರ್ ನ್ಯೂಸ್ ಹಿರಿಯ ನಿರೂಪಕಿ ಪ್ರತಿಭಾ ಪ್ರಕಾಶ್, ಸಿಂಧಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಚಿತ್ರಾ ಮತ್ತು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಮಹಿಳೆಯರಿಗೆ ಸನ್ಮಾನಿಸಲಾಯಿತು.
ಯುನೈಟೆಡ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಶೇಖರ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಪರೀಕ್ಷೆ ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಸೋಮಶೇಖರ್, ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ, ಸಂತೋಷ್ ಕುಮಾರ್, ಹೆಚ್.ಬಿ.ಹರೀಶ್ ಉಪಸ್ಥಿತರಿದ್ದರು.




