ಬಳ್ಳಾರಿ ಕಾರ್ಯಕಾರಿ ಸಮಿತಿಯ ಸಭೆಗೂ ಮುನ್ನ ಅಧ್ಯಕ್ಷ ಮಹೇಶ್ ಜೋಶಿ ತನ್ನ ಪಟಾಲಂ ಜಿಲ್ಲಾಧ್ಯಕ್ಷರ ಗೌಪ್ಯ ಸಭೆ ಕರೆದು ಕಾರ್ಯತಂತ್ರ ರೂಪಿಸಿ ಚರ್ಚೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಅಲ್ಲಿ ಜೋಶಿಯವರ ಈ ತಂತ್ರಗಳು ಫಲಕಾರಿ ಆಗಲು ಜೀತದಾರ ಜಿಲ್ಲಾಧ್ಯಕ್ಷರು ಮುಂದಾಗಲಿದ್ದಾರೆ ಎಂಬ ಮಾಹಿತಿ ಇದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಮಂಡ್ಯದ ಮುದ್ದೇಗೌಡ, ದಾವಣಗೆರೆಯ ವಾಮದೇವಪ್ಪ, ಚಿಕ್ಕಮಗಳೂರಿನ ಸೂರಿ ಶ್ರೀನಿವಾಸ, ಹಾಸನದ ಡಬ್ಬಲ್ ಹುದ್ದೆಯ ಸರದಾರ ಮಲ್ಲೇಶ್ ಗೌಡ, ಹಾವೇರಿಯ ಲಿಂಗಯ್ಯ ಹಿರೇಮಠ, ಗದಗದ ವಿವೇಕಾನಂದ ಪಾಟೀಲ, ಕಲಬುರ್ಗಿಯ ತೇಗಲತೊಪ್ಪಿ, ಕೋಶಾಧ್ಯಕ್ಷ ಪಟೇಲ್ ಪಾಂಡು ಈ ಗೌಪ್ಯ ಸಭೆಯ ಸರದಾರರಾಗಿ ಭಾಗಿಯಾಗಿದ್ದಾರೆ.
ಏನಾದರಾಗಲಿ, ಮುಂದಿನ ವರ್ಷ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟು ತರಾತುರಿಯಲ್ಲಿ ಸಭೆ ನಡೆಸಿ, ಸಮ್ಮೇಳನಾಧ್ಯಕ್ಷೆಯಾಗಿ ಬೂಕರ್ ಗೌರವ ಪಡೆದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡುವುದು ಸೂಕ್ತವಲ್ಲ. ಅವರಾದರೂ ಜೋಶಿ ನೇತೃತ್ವದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಭಾಗಿಯಾಗಬಾರದು. ಒಂದು ಮೂಲದ ಪ್ರಕಾರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಜೊತೆ ಮಾತಾಡಿರುವ ಜೋಶಿ, ತಮ್ಮವರೆ ಆದ ಬಾನು ಮುಷ್ತಾಕ್ ಅವರನ್ನು ಸಮ್ಮೇಳನಾಧ್ಯಕ್ಷೆ ಮಾಡಲಾಗುವುದು ಎಂದು ಮೂಗಿಗೆ ತುಪ್ಪ ಸವರಿರುವ ಮಾಹಿತಿಯೂ ಇದೆ.
ಈಗಾಗಲೆ ಜೋಶಿಗೆ ಹೊಡೆತಗಳ ಮೇಲೆ ಹೊಡೆತ ಬಿದ್ದಿದೆ. ಇಬ್ಬರು ಗೌರವ ಕಾರ್ಯದರ್ಶಿಗಳ ರಾಜೀನಾಮೆಯೂ, ಸರ್ವಸದಸ್ಯರ ಸಭೆ ನಡೆಯದೆ ರದ್ದು ಮಾಡಿದ್ದು, ಇವೆಲ್ಲ ಜೋಶಿಗೆ ಮುಖಭಂಗ ಆಗಿವೆ. ತನ್ನ ಮೇಲಿನ ಆಪಾದನೆಯಿಂದ ಮುಕ್ತವಾಗಲು ಜೋಶಿಯ ತಂತ್ರ ಶುರುವಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.





One Response
ಮನುವ್ಯಾದಿ ಹಿಡಿತದಿಂದ ಸಾಹಿತ್ಯ ಪರಿಷತ್ ಮುಕ್ತ ಆಗಬೇಕು,, ಇಲ್ಲಾಂದ್ರೆ ಅದನ್ನೂ ಒಂದು ನಿಶ್ಚಿತ ವರ್ಗದ ಪರವಾಗಿ ಒಂದು ನಿಶ್ಚಿತ ರಾಜಕೀಯ ಪಕ್ಷದ ಪರವಾಗಿ ಬಕೆಟ್ ಹಿಡಿಯುವ ತಿರುಪೆ ಕೆಲಸಕ್ಕೆ ಬಳಸಿಕೊಳ್ಳುವರು