ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಕುರುಹಿನಶೆಟ್ಟಿ ಸಮಾಜದವರು ಇದ್ದಾರೆ: ಬಿ.ಲಿಂಗೇಶ್ವರ್

10 months ago

ಕುರುಹಿನಶೆಟ್ಟಿ ಕೇಂದ್ರ ಸಂಘದ ಚುನಾವಣೆ

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸ್ಥಾನಕ್ಕೆ ಬಿ.ಲಿಂಗೇಶ್ವರ್ ನಾಮಪತ್ರ ಸಲ್ಲಿಕೆ

ಕುರುಹಿನಶೆಟ್ಟಿ ಸಮುದಾಯ ಸಂಘಟನೆ, ನೂತನ ಕಟ್ಟಡ ನಿರ್ಮಾಣ, ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನನ್ನ ಹೋರಾಟ: ಬಿ.ಲಿಂಗೇಶ್ವರ್

ಬೆಂಗಳೂರು: ವಿ.ವಿ.ಪುರಂನ ಕುರುಹಿನಶೆಟ್ಟಿ ಕೇಂದ್ರ ಸಂಘ(ರಿ) 2025ನೇ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಶ್ರೀ ಬಿ.ಲಿಂಗೇಶ್ವರ್ ರವರ ನಾಮಪತ್ರ ಸಲ್ಲಿಕೆ ಮಾಡಿದರು.

ಅಧ್ಯಕ್ಷೀಯ ಅಭ್ಯರ್ಥಿಯಾದ ಬಿ.ಲಿಂಗೇಶ್ವರರವರು ಚನಾವಣೆಯಾಧಿಕಾರಿಗೆ ನಾಮಪತ್ರ ಸಲ್ಲಿಕೆ ವೇಳೆ ಸಮಾಜದ  ಮುಖಂಡರಾದ ಜಿ.ಸೋಮಣ್ಣ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ರೂಪಲಿಂಗೇಶ್ವರ್ ಮತ್ತು ರಾಜ್ಯದ ಕುರುಹಿನಶೆಟ್ಟಿ ಸಮುದಾಯದವರು, ಕಾರ್ಯಕರ್ತರು, ಅಭಿಮಾನಿಗಳು, ಬಿ.ಲಿಂಗೇಶ್ವರರವರ ಅಭಿಮಾನಿಗಳು, ಸ್ನೇಹಿತರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೀಯ ಅಭ್ಯರ್ಥಿ ಬಿ.ಲಿಂಗೇಶ್ವರ್, ರಾಜ್ಯದಲ್ಲಿ ಕುರುಹಿನಶೆಟ್ಟಿ ಸಮಾಜದವರು 15 ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ. ಹಂಚಿಹೋಗಿರುವ ನಮ್ಮ ಸಮಾಜವನ್ನು ಒಗ್ಗೂಡಿಸುವ ಸಂಘಟನೆ ಮಾಡಲಾಗುತ್ತದೆ ಎಂದರು.

ಪಾರದರ್ಶಕ ಆಡಳಿತ ಮತ್ತು ಸಮಾಜದ ಏಳಿಗೆಗಾಗಿ ಮತ್ತು ನೂತನ ಕಟ್ಟಡ ನಿರ್ಮಾಣ ಮಾಡಲು ಕಾರ್ಯಯೋಜನೆ ರೂಪಿಸಲಾಗುವುದು ಎಂದರು.

ನಮಗೆ ನೇಕಾರಿಕೆ ಕುಲಕಸಬು ಆಗಿದೆ.ಶನೇಕಾರ ಉದ್ಯಮ ನಶಿಸಿ ಹೋಗುತ್ತಿದೆ, ನೇಕಾರಿಕೆಗೆ ಪ್ರೋತ್ಸಾಹ, ಸಹಕಾರ ನೀಡಬೇಕು. ಈ ಉದ್ಯಮದಲ್ಲಿ ನಮ್ಮ ಸಮಾಜದ ಯುವಕರು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಯಲ್ಲಿ ಸಮನ್ವಯ ಸಾಧಿಸಿ ಕುರುಹಿನ ಶೆಟ್ಟಿ ಸಮುದಾಯ ಅಭಿವೃದ್ದಿಗೆ ಶ್ರಮವಹಿಸಲಾಗುವುದು ಎಂದರು.

ಶಿಕ್ಷಣ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕುರುಹಿನ ಶೆಟ್ಟಿ ಸಮುದಾಯಕ್ಕೆ ಹೆಚ್ಚಿನ ಅವಕಾಶಕ್ಕೆ ಕೊಡಿಸಲು ಹೋರಾಟ ಮಾಡಲಾಗುವುದು. ಹೋರಾಟ ನಿತ್ಯ ನಿರಂತರ. ಕುರುಹಿನಶೆಟ್ಟಿ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶ ನನ್ನದು. ರಾಜ್ಯಾದ್ಯಂತ ನಮ್ಮ ತಂಡಕ್ಕೆ ಉತ್ತಮ ಬೆಂಬಲವಿದೆ ಮತ್ತು ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply