ಸರ್ಕಾರಿ ನೌಕರರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಕಾಲಕಾಲಕ್ಕೆ ಸಂಬಳ ಹೆಚ್ಚಾಗುತ್ತದೆ. ಆದರೆ ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳು ಮಾತ್ರ ಹೆಚ್ಚಾಗುವುದೇ ಇಲ್ಲ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸರ್ಕಾರಿ ನೌಕರರಿಗೆ ಐದು ವರ್ಷಕ್ಕೊಮ್ಮೆ ವೇತನ ಆಯೋಗದ ಶಿಫಾರಸುಗಳಂತೆ ಸಂಬಳಗಳು ಹೆಚ್ಚಾಗುತ್ತವೆ. ಇನ್ನು ಚುನಾಯಿತ ಪ್ರತಿನಿಧಿಗಳು ತಮಗೆ ಮನಸ್ಸು ಬಂದಾಗೆಲ್ಲ ಯಾವುದೇ ವಿರೋಧವಿಲ್ಲದೆ ತಮ್ಮ ಸಂಬಳಗಳನ್ನ ತಮ್ಮ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಸಾಮಾಜಿಕ ಭದ್ರತೆಯ ಯೋಜನೆ ಅಡಿಯಲ್ಲಿ ನೀಡುವಂತಹ ಪಿಂಚಣಿ ವ್ಯವಸ್ಥೆಗಳಾದ ಹಿರಿಯ ನಾಗರಿಕರ ಪಿಂಚಣಿ ವಿಧವಾ ಪಿಂಚಣಿ ಅಂಗವಿಕಲರ ಮತ್ತು ಬುದ್ಧಿಮಾಂದ್ಯರ ಪಿಂಚಣಿ ಮೊತ್ತ ಹತ್ತಾರು ವರ್ಷಗಳಾದರೂ ಸಹ ಏರಿಕೆಯಾಗುವುದೇ ಇಲ್ಲ.
ಕೇಂದ್ರ ಸರ್ಕಾರ ಅರ್ಧ ಭಾಗ ರಾಜ್ಯ ಸರ್ಕಾರ ಅರ್ಧ ಭಾಗವನ್ನು ಭರಿಸುವಂತಹ ಇಂತಹ ಯೋಜನೆಗಳಿಗೆ ಕೇಂದ್ರ ಕೊಡಲಿ ಎಂದು ರಾಜ್ಯ ನೆಪಗಳನ್ನ ಹೇಳಬಾರದು. ಇತ್ತೀಚಿನ ದಿನಗಳಲ್ಲಿ ಬೆಲೆಗಳು ಏರಿಕೆಯಾಗಿದೆ. ಬಡವರು ತಮ್ಮ ಕಾಯಿಲೆಗಳಿಗೆ ಔಷಧಿಯನ್ನು ಕೊಳ್ಳಲು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಪಿಂಚಣಿಗಳ ಮೊತ್ತವನ್ನು ಕನಿಷ್ಠ ಪಕ್ಷ ಎರಡು ಸಾವಿರ ರೂಪಾಯಿಗಳಿಗೆ ನಿಗದಿಪಡಿಸಬೇಕಾಗಿದೆ.
ಹಾಲಿ ವಿಧವೆಯರಿಗೆ ಹಿರಿಯ ನಾಗರಿಕರಿಗೆ 1200, 60 ವರ್ಷದವರೆಗೆ ಕೇವಲ 800 ಮತ್ತು ಅಂಗವಿಕಲರು ಮತ್ತು ಬುದ್ಧಿಮಾಂದ್ಯರಿಗೆ 1400 ರೂ.ಗಳ ಮೊತ್ತವನ್ನು ನೀಡುತ್ತಿದ್ದೀರಿ. ಇದೇ ರೀತಿಯಲ್ಲಿ ಮನಸ್ವಿನಿ ಮತ್ತು ಮೈತ್ರಿ ಯೋಜನೆಯ ಮೊತ್ತವು ಸಹ ತುಂಬಾ ಕಡಿಮೆ ಇದೆ. ಆದುದರಿಂದ ಮುಖ್ಯಮಂತ್ರಿಗಳು ಕೂಡಲೇ ಇಂತಹ ಪಿಂಚಣಿಯ ಮೊತ್ತವನ್ನು ಹೆಚ್ಚಿಸಿ ಬಡವರು ತಮ್ಮ ಕಷ್ಟದ ಕಾಲದಲ್ಲಿ ಒಂದಷ್ಟು ಅನುಕೂಲತೆಗಳನ್ನ ಪಡೆದುಕೊಳ್ಳುವಲ್ಲಿ ಸಹಾಯವಾಗುವಂತೆ ಕ್ರಮಗಳನ್ನು ಕೈಗೊಳ್ಳಿ.
– ಕೆ ಎಸ್ ನಾಗರಾಜ್, ಬೆಂಗಳೂರು




