ಬಡವರ ಉಳಿತಾಯ ಖಾತೆಗಳಲ್ಲಿ ಹಣ ದೋಚುತ್ತಿರುವ ಬ್ಯಾಂಕುಗಳು

2 years ago

ದೇಶದ ಕೋಟ್ಯಂತರ ಮಂದಿ ವಿವಿಧ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯನ್ನು ತೆರೆದು ವ್ಯವಹಾರವನ್ನ ಮಾಡುತ್ತಿದ್ದಾರೆ. ಇಂತಹವರಲ್ಲಿ ಹೆಚ್ಚಿನ ಜನ ಪಿಂಚಣಿ ಹಣ ಮತ್ತು ಸರ್ಕಾರದ ವಿವಿಧ ಯೋಜನೆಗಳಿಂದ ಬರುವ ಹಣಗಳನ್ನು ಪಡೆದುಕೊಳ್ಳುವ ಸಲುವಾಗಿಯೇ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿರುತ್ತಾರೆ.

ಕೇಂದ್ರ ಸರ್ಕಾರ ಇಂತಹ ಖಾತೆಗಳಲ್ಲಿ ಕನಿಷ್ಠ ಮೊತ್ತದ ಹಣ ಇಲ್ಲವೆಂಬ ಕಾರಣಕ್ಕೆ ಇವರುಗಳಿಗೆ ದಂಡವನ್ನು ವಿಧಿಸಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನೂರರಿಂದ 200 ರೂಪಾಯಿ, ನಗರ ಪ್ರದೇಶದಲ್ಲಿ 200 ರಿಂದ 600ರತನಕ ದಂಡವನ್ನು ವಿಧಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಕಳೆದುಕೊಂಡಿರುವ ಮೊತ್ತ ಎಂಟೂವರೆ ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಎಂಬ ಅಂದಾಜು ಲೆಕ್ಕವನ್ನು ನೀಡಿರುತ್ತಾರೆ. ಇದಲ್ಲದೆ ವಿವಿಧ ಕಾರಣಗಳಿಗಾಗಿ ಬ್ಯಾಂಕುಗಳು ಗ್ರಾಹಕರಿಂದ ವಸೂಲಿ ಮಾಡಿರುವ ದಂಡದ ಮೊತ್ತ 35 ಸಾವಿರ ಕೋಟಿ ರೂಪಾಯಿಗಳ ಮೀರಿದೆ ಎಂಬ ಲೆಕ್ಕವೂ ಇದೆ.

ಅತಿ ಹೆಚ್ಚು ಮಹಿಳೆಯರು ಕನಿಷ್ಠ ಮೊತ್ತ ತಮ್ಮ ಉಳಿತಾಯ ಖಾತೆಯಲ್ಲಿ ಇಲ್ಲಾ ಎನ್ನುವ ಕಾರಣಕ್ಕೆ ದಂಡವನ್ನ ಪಾವತಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಪಿಂಚಣಿ ಹಣದಲ್ಲಿ ಕನಿಷ್ಠ ಮೊತ್ತವೆಂದು ಇವರು ಅಲ್ಲಿ ಉಳಿತಾಯ ಮಾಡುತ್ತಾ ಹೋದರೆ, ಇವರುಗಳ ಜೀವನಕ್ಕೆ ಇದು ಯಾವ ರೀತಿಯಲ್ಲಿ ಅನುಕೂಲವಾಗುತ್ತದೆ, ಇಂತಹ ಅನೇಕ ಸಂಗತಿಗಳು ನಡೆಯುತ್ತಿದ್ದರು ಸಹ ಕೆಲಸಕ್ಕೆ ಬಾರದ ವಿಚಾರಗಳನ್ನ ನಮ್ಮ ದೃಶ್ಯ ಮಾಧ್ಯಮಗಳು ಮತ್ತು ಅನೇಕ ಪತ್ರಿಕಾ ಮಾಧ್ಯಮಗಳು 24 ಗಂಟೆಯೂ ಚರ್ಚೆ ಮಾಡುತ್ತಾ ಸಮಯವನ್ನು ಹಾಳು ಮಾಡುತ್ತಿವೆ.

ಇದರ ಬದಲಿಗೆ ಜನಸಾಮಾನ್ಯರು ಅದರಲ್ಲೂ ಸರ್ಕಾರದ ಸೌಲಭ್ಯಗಳನ್ನೇ ನಂಬಿ ಬದುಕುವ ಜನರಿಗೆ ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತವಿರಬೇಕೆಂಬ ನಿಯಮವನ್ನ ರದ್ದುಪಡಿಸಬೇಕು, ಈ ನಿಟ್ಟಿನಲ್ಲಿ ನಮ್ಮ ಚುನಾಯಿತ ಪ್ರತಿನಿಧಿಗಳು ಧ್ವನಿಯನ್ನು ಎತ್ತಬೇಕು.

ತಮ್ಮ ಖಾತೆಗಳಲ್ಲಿ ಕನಿಷ್ಠ ಮೊತ್ತವಿಲ್ಲವೆಂದು ದಂಡವನ್ನ ಪಾವತಿಸುತ್ತಿರುವ ಇಂತಹ ಸಾಮಾನ್ಯ ಜನರ ಪರವಾಗಿ ಯಾರೂ ಮಾತನಾಡದಿದ್ದರೆ ಇವರ ನೋವನ್ನು ಕೇಳುವವರು ಯಾರು? ಕೇಂದ್ರ ಸರ್ಕಾರ ವಿಶೇಷವಾಗಿ ಮಹಿಳೆಯರ ಮತ್ತು ಹಿರಿಯ ನಾಗರಿಕರ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತದ ದಂಡವನ್ನ ಕೂಡಲೇ ರದ್ದು ಮಾಡಬೇಕು. 

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply