ಮಾನವ ಹಕ್ಕು ಆಯೋಗದವರು ಸಹ ಅಪರಾಧಿಗಳ ವಿಚಾರದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಆಲೋಚಿಸಿ ಕ್ರಮಗಳನ್ನು ಜರುಗಿಸಬೇಕು.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಪ್ರತಿದಿನವೂ ಪತ್ರಿಕೆಗಳಲ್ಲಿ ಕೊಲೆ ಮತ್ತು ಇತರೆ ಅಪರಾಧಗಳ ಪ್ರಕರಣಗಳನ್ನ ಗಮನಿಸುತ್ತಿದ್ದಾಗ ತುಂಬಾ ಆತಂಕವಾಗುತ್ತದೆ. ಅತ್ಯಂತ ಕ್ರೂರವಾದ ರೀತಿಯಲ್ಲಿ ಮತ್ತು ರಾಕ್ಷಸರ ರೀತಿಯಲ್ಲಿ ಮಹಿಳೆಯರ ಮೇಲೆ ಮತ್ತು ಮುಗ್ಧ ಜನರ ಮೇಲೆ ಅಪರಾಧಿಗಳು ಕೃತ್ಯವನ್ನು ಎಸೆಗುತ್ತಿದ್ದಾರೆ. ಇವರುಗಳಿಗೆ ಈ ಹಿಂದೆ ಠಾಣೆಗಳಲ್ಲಿ ಪೊಲೀಸರಿಂದ ಸಿಗುತ್ತಿದ್ದಂತಹ ಶಿಕ್ಷೆಯ ಭಯ ಈಗ ಮಾಯವಾಗಿದೆ.
ಮಾನವ ಹಕ್ಕು ಆಯೋಗ ನಮ್ಮ ರಕ್ಷಣೆಗೆ ಇದೆ ಎನ್ನುವ ಒಂದು ಅಭಿಪ್ರಾಯವೂ ಸಹ ಇಂತಹ ಅಪರಾಧಿಗಳ ಮನಸ್ಸಿನಲ್ಲಿದೆ. ಕೆಲವು ಸಂದರ್ಭದಲ್ಲಿ ಅಪರಾಧಿಗಳ ಅಪರಾಧವನ್ನು ಅದರ ಪ್ರಮಾಣವನ್ನ ಗಮನಿಸಿದಾಗ ಅತ್ಯಂತ ಕಠಿಣವಾದ ರೀತಿಯಲ್ಲಿ ಅವರಿಗೆ ಶಿಕ್ಷೆಗಳಾಗಬೇಕು ಮತ್ತು ಒಂದು ಭಯದ ವಾತಾವರಣ ಅವರಲ್ಲಿ ಮೂಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆದರೆ ಪೊಲೀಸರು ಮಾನವ ಹಕ್ಕು ಆಯೋಗಕ್ಕೆ ಅಪರಾಧಿಗಳ ಕಡೆಯವರು ದೂರು ನೀಡಿ ತಮಗೆ ಶಿಕ್ಷೆ ಕೊಡಿಸುತ್ತಾರೆ ಎನ್ನುವ ಭಯದಿಂದ ಅಪರಾಧಿಗಳಿಗೆ ಕಠಿಣವಾದಂತಹ ರೀತಿಯಲ್ಲಿ ಶಿಕ್ಷೆಯನ್ನ ಕೊಡಲು ಹಿಂಜರಿಯುತ್ತಿದ್ದಾರೆ.
ಇದರಿಂದಾಗಿ ಸಾರ್ವಜನಿಕರಲ್ಲಿ ಅಪರಾಧಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆಯಾಗುತ್ತಿಲ್ಲ ಎನ್ನುವಂತಹ ಅಸಮಾಧಾನವು ಮೂಡಿದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ಮತ್ತು ರಾಜ್ಯದ ಪೊಲೀಸ್ ವರಿಷ್ಠರು ಸಾಧ್ಯವಾಗುವುದಾದರೆ ಕೇಂದ್ರದ ಗೃಹ ಸಚಿವರು ಮತ್ತು ಎಲ್ಲ ರಾಜ್ಯಗಳ ಪೊಲೀಸ್ ಪ್ರಮುಖರ ಸಭೆಯನ್ನ ನಡೆಸಿ ಕೇಂದ್ರ ಮಾನವ ಹಕ್ಕು ಆಯೋಗದ ಸದಸ್ಯರುಗಳನ್ನು ಒಳಗೊಂಡಂತೆ ಚರ್ಚಿಸಿ ಅಪರಾಧಿಗಳ ಅಪರಾಧದ ಕೃತ್ಯ ಮತ್ತು ಅವರ ಹಿನ್ನೆಲೆ ಮತ್ತು ಅದರ ಪರಿಣಾಮಗಳು ಇವುಗಳನ್ನು ಪರಿಗಣಿಸಿ ಮಾನವ ಹಕ್ಕು ಆಯೋಗ ಕೆಲವೊಂದು ರಿಯಾಯಿತಿಗಳನ್ನ ಪೊಲೀಸರಿಗೆ ನೀಡಿದರೆ ಪೊಲೀಸ್ ಇಲಾಖೆ ಕಠಿಣವಾಗಿಅಪರಾಧಿಗಳ ವಿಚಾರದಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಅಪರಾಧ ಮಾಡಿದವರಿಗೆ ಠಾಣೆಗಳಲ್ಲಿ ನಮಗೆ ಸರಿಯಾದ ರೀತಿಯಲ್ಲಿ ಶಿಕ್ಷೆಯಾಗುತ್ತದೆ ಎನ್ನುವ ಭಯ ಬಂದರೆ ಒಂದಷ್ಟು ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದೊಂದು ಗಂಭೀರವಾದ ವಿಚಾರವಾಗಿರುವುದರಿಂದ ಕೇಂದ್ರದ ಗೃಹ ಸಚಿವರು ರಾಜ್ಯ ಮತ್ತು ಕೇಂದ್ರದ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಸದಸ್ಯರು ಮತ್ತು ಎಲ್ಲ ರಾಜ್ಯದ ಪೊಲೀಸ್ ವರಿಷ್ಠರ ಹಾಗೂ ಕಾನೂನು ಪಂಡಿತರ ಸಭೆಯನ್ನು ಕರೆದು ಒಂದು ಅಂತಿಮವಾದ ಅಂತಹ ತೀರ್ಮಾನಗಳಿಗೆ ಬರಬೇಕಾದಂತಹ ತುರ್ತು ಇದೆ.
– ಕೆ ಎಸ್ ನಾಗರಾಜ್, ಬೆಂಗಳೂರು



